Ticker

6/recent/ticker-posts

Ad Code

Responsive Advertisement

ಜಸ್ಟೀಸ್ ಮಲ್ಲಿಕಾರ್ಜುನಗೌಡರವರ ವಿರುದ್ದ ಪ್ರತಿಭಟನೆ

ಮೂಲ ನಿವಾಸಿಗಳ ಒಕ್ಕೂಟ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವಿಧಾನಸೌಧ ಮುಂಭಾಗ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ರಾಯಚೂರು ಜಿಲ್ಲಾ ನ್ಯಾಯಲಯದಲ್ಲಿ 73ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡುವ ಸಮಯದಲ್ಲಿ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆಗಸಿ ಅಪಮಾನ ಮಾಡಿರುವ ಜಸ್ಟೀಸ್ ಮಲ್ಲಿಕಾರ್ಜುನ ಗೌಡ ರವರನ್ನು ತತಕ್ಷಣ ಬಂಧಿಸಿ ,ಸೇವೆಯಿಂದ ವಜಾ ಮಾಡಬೇಕು ಎಂದು ಮೂಲ ನಿವಾಸಿಗಳ ಒಕ್ಕೂಟದ ಅಧ್ಯಕ್ಷರಾದ ಜಿಗಣಿ ಶಂಕರ್ ರವರು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಸಿ.ಎಸ್.ರಘುರವರು ಬೃಹತ್ ಪ್ರತಿಭಟನೆ ಮಾಡಿದರು .




ಮೂಲ ನಿವಾಸಿ ಒಕ್ಕೂಟದ ಅಧ್ಯಕ್ಷರಾದ ಜಿಗಣಿ ಶಂಕರ್ ರವರು ಮಾತನಾಡಿ ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವ ರಾಷ್ಟಕ್ಕೆ ಎಲ್ಲ ವರ್ಗ ,ಜಾತಿ ಮತ್ತು ಪುರುಷ ,ಮಹಿಳೆಯರು ಸರಿಸಮಾನವಾಗಿ ಬದುಕಲು ಸಂವಿಧಾನ ಎಂಬ ಗ್ರಂಥವನ್ನು ದೇಶಕ್ಕೆ ಕೊಡುಗೆಯಾಗಿ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರಿಗೆ ಪೋಟೋ ತೆಗಿಸಿ ಅಪಮಾನ ಮಾಡಿರುವ ಜಸ್ಟೀಸ್ ಮಲ್ಲಿಕಾರ್ಜುನ ಗೌಡರವರನ್ನು ಸೇವೆಯಿಂದ ವಜಾಗೊಳಿಸಬೇಕು. ಇಲ್ಲದೇ ಹೋದರೆ ಉಗ್ರ ಹೋರಾಟ ಖಚಿತ ಎಂದು ಹೇಳಿದರು.

ಇಡೀ ವಿಶ್ವವೆ ಭಾರತದ ಸಂವಿಧಾನವನ್ನು ಉತ್ತಮ ಸಂವಿಧಾನವೆಂದು ಮೆಚ್ಚುಗೆಗೆ ಪಾತ್ರವಾಗಿದೆ.

ದೇಶದ ಸಾಮಾನ್ಯ ನಾಗರಿಕನಿಗೆ ಸಂವಿಧಾನ ಬದ್ದ ಹಕ್ಕುಗಳನ್ನು ನೀಡಿದೆ .ದೇಶದ ಜನರಿಗೆ ಸಂವಿಧಾನದ ಅಡಿಯಲ್ಲಿ ಕೆಲಸ ಮತ್ತು ರಕ್ಷಣೆ ನೀಡಿದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರಾದ ಸಿ.ಎಸ್.ರಘುರವರು ಮಾತನಾಡಿ ವಿಶ್ವ ಕಂಡ ಶೇಷ್ಠ ನಾಯಕ ,ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಡಾ||ಬಿ.ಆರ್.ಅಂಬೇಡ್ಕರ್ ರವರು ಈ ದೇಶಕ್ಕೆ ಕೊಟ್ಟ ಸಂವಿಧಾನ ಎಂಬ ಶೇಷ್ಠ ಗ್ರಂಥ .536ರಾಷ್ಟಗಳ ಹಂಚಿ ಹೋಗಿದ್ದ ದೇಶವನ್ನು ಒಂದೇ ರಾಷ್ಟವಾಗಿ ನಿರ್ಮಾಣವಾಗಲು ಸಂವಿಧಾನ ಸಹಕಾರಿಯಾಗಿದೆ .

ಎಲ್ಲ ವರ್ಗ ,ಜಾತಿ ,ಪಂಥದವರಿಗೂ ಸಂವಿಧಾನ ಸಮಾನ ಅವಕಾಶ ನೀಡಿದೆ ಅದರೆ ಸಂವಿಧಾನ   ದಿನಾಚರಣೆ ಮತ್ತು ಗಣರಾಜ್ಯೋತ್ಸವ ಶುಭಾ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ನ್ಯಾಯಲಯದಲ್ಲಿ ಅಂಬೇಡ್ಕರ್ ರವರ ಬಾವಚಿತ್ರ ತೆಗೆಸಿ ,ಧ್ಯಜಾರೋಹಣ ಮಾಡಿದ ನ್ಯಾಯಧೀಶ ಮಲ್ಲಿಕಾರ್ಜುನ ಗೌಡರವರನ್ನು ಬಂಧಿಸಬೇಕು .ರಾಷ್ಟದ್ರೋಹ ,ನಾಡದ್ರೋಹ ಪ್ರಕರಣ ದಾಖಲು ಮಾಡಿ ಸೇವೆಯಿಂದ ವಜಾಗೊಳಿಸಬೇಕು .

ಕೋಮುವಾದ ,ಜಾತಿ ವ್ಯವಸ್ಥೆಯಿಂದ ದೇಶ ವಿಭಜನೆಯಾಗುವ ಸಾಧ್ಯತೆ .

ದೇಶ ಅಭಿವೃದ್ದಿಯಾಗಬೇಕಾದರೆ ಇಂತಹ ಮನಸ್ಥಿತಿ ಇರುವವರನ್ನ ಸಮಾಜ ತಿರಸ್ಕರಿಸಬೇಕು ಮತ್ತು ನ್ಯಾಯಧೀಶ ಮಲ್ಲಿಕಾರ್ಜುನ ಗೌಡರ ವಿರುದ್ದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಧೀಶರು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.


Post a Comment

0 Comments

Ad Code

Responsive Advertisement