Ticker

6/recent/ticker-posts

Ad Code

Responsive Advertisement

ಬೆಂಗಳೂರು ಜಲಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್

ಬೆಂಗಳೂರು ಜಲಮಂಡಳಿಯು (ಪಶ್ಚಿಮ)-1, (ನೈರುತ್ಯ)-1,  (ಆಗ್ನೇಯ-1), (ದಕ್ಷಿಣ-1),( ಪೂರ್ವ-2)-1,     (ಪೂರ್ವ-1)-1, (ಉತ್ತರ ವಿಲೇಜ್)-2, (ಕೇಂದ್ರ-1) (ವಾಯುವ್ಯ-1)  ಮತ್ತು  (ವಾಯುವ್ಯ-4) ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್‍ಅನ್ನು ದಿನಾಂಕ: 03.02.2022 ರ ಗುರುವಾರ ಬೆಳಿಗ್ಗೆ 9.30 ರಿಂದ 11:00 ಗಂಟೆಯವರೆಗೆ ನಡೆಸಲಾಗುತ್ತಿದೆ.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916 ಗೆ ಕರೆಮಾಡಿ ದೂರು ದಾಖಲಿಸಬಹುದು ಹಾಗೂ ವಾಟ್ಸ್‍ಆಪ್ ಸಂಖ್ಯೆ: 8762228888 ಸಂದೇಶದ ಮೂಲಕ ದೂರನ್ನು  ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯವನ್ನು  ಬಳಸಿಕೊಳ್ಳಬಹುದಾಗಿದೆ ಹಾಗೂ ಕೋವಿಡ್-19 ನ ಮರುತೆರವು ಮಾರ್ಗಸೂಚಿಯನ್ವಯ ಸಭೆಗೆ ಹಾಜರಾಗಲಿರುವ  ಸಂದಂರ್ಭದಲ್ಲಿ  ಎಲ್ಲಾ  ಸುರಕ್ಷತೆಯನ್ನು  ಕಾಪಾಡಿಕೊಳ್ಳುವುದು ಎಚಿದು ಬೆಂಗಳೂರು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement