Ticker

6/recent/ticker-posts

Ad Code

Responsive Advertisement

ಪ್ರತಿಷ್ಠಿತ “ದಿ ಗ್ರಾಂಡ್‌ ಸಿತಾರ್‌ ಸಿಂಫೋನಿ” ಕಾ‍ರ್ಯಕ್ರಮ - ಬೃಹತ್ ಸಿತಾರ್‌ ವಾದ್ಯ

ದಿ ಗ್ರಾಂಡ್‌ ಸಿತಾರ್‌ ಸಿಂಫೋನಿ

ದಿ 27-೦2-2022, ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರಂ, ಬೆಂಗಳೂರು

 ಮಾರ್ರ್ಸ್ ಎಂಟರ್ಟೇನ್ಮೆಂಟ್ ವತಿಯಿಂದ ಪ್ರತಿಷ್ಠಿತ “ದಿ ಗ್ರಾಂಡ್‌ ಸಿತಾರ್‌ ಸಿಂಫೋನಿ” ಕಾ‍ರ್ಯಕ್ರಮವು ಇದೇ ಫೆಬ್ರವರಿ ೨೭ ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ. ಪ್ರಖ್ಯಾತ ಸಂಯೋಜನೆಗಳೊಡನೆ ನಾಡಿನ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಪ್ರವೀಣ್‌ ಡಿ ರಾವ್‌ ಹಾಗೂ ಪ್ರಖ್ಯಾತ ಕೊಳಲು, ಸ್ಯಾಕ್ಸೋಫೋನ್‌ ವಾದಕರಾದ ಶ್ರೀ ಸಂದೀಪ್‌ ವಸಿಷ್ಠ ಅವರ ಸಂಗೀತ ನಿರ್ವಹಣೆಯೊಂದಿಗೆ ನಾಟ್ಯಾಂಜಲಿ ಸ್ಕೂಲ್‌ ಆಫ್‌ ಡ್ಯಾ£ïì ಸಂಸ್ಥಾಪಕರಾದ ಶ್ರೀ ಹೆಸರಾಂತ ನೃತ್ಯಗಾರರಾದ ಶ್ರೀ ಅಶೋಕ ಕುಮಾರ್‌ ಅವರ ನೃತ್ಯ ನಿರ್ದೇಶನದ ನೃತ್ಯಗಳೂ ಒಳಗೊಂಡಂತೆ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಗಿದೆ. ದೆಹಲಿಯ ರಾಜಭವನದ ಗಣರಾಜ್ಯೋತ್ಸವದ ಪರೇಡ್‌ ನಲ್ಲಿ ರಾಜ್ಯದ ಸ್ತಬ್ಧ ಚಿತ್ರಗಳನ್ನು ನಿರ್ಮಿಸಿ ಹಲವಾರು ಚಲನಚಿತ್ರ, ಧಾರಾವಾಹಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಕಲಾ ನಿರ್ದೇಶನ ಮಾಡಿದ ಅನುಭವವಿರುವ ಶ್ರೀ ಶಶಿಧರ್‌ ಅಡಪ ಅವರು ಈ ವೇದಿಕೆಯ ವಿನ್ಯಾಸ ಮಾಡಿದ್ದು ವಿನೋದ್‌ ಗೌಡ ಅವರು ದೃಶ್ಯ ಕಲೆಯನ್ನು ನಿಭಾಯಿಸಿದ್ದಾರೆ.

 

ಕಲೆಯನ್ನು, ಕಲಾವಿದರನ್ನು ಹಾಗೂ ನಾಡಿನ ಕಲಾ ಶ್ರೀಮಂತಿಕೆಯನ್ನು ಮುಂದೆ ಕೊಂಡೊಯ್ಯುವ ಧ್ಯೇಯದೊಂದಿಗೆ ಶ್ರೀಮತಿ ರಜನಿ ರಾಧಾ ಕೃಷ್ಣನ್ ಅವರು ೨೦೧೪ ರಲ್ಲಿ ಮಾರ್ರ್ಸ್ ಎಂಟರ್ಟೇನ್ಮೆಂಟ್‌ ಸ್ಥಾಪಿಸಿ ಈಗಾಗಲೆ ಹಲವಾರು ಕಲೋತ್ಸವಗಳು, ಕಲಾಮೇಳಗಳು ಹಾಗು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

ಮಾರ್ರ್ಸ್ ಸಂಸ್ಥೆಯು ತನ್ನದೇ ಆದ ವಿಭಿನ್ನ ಹಾಗು ವಿಶೇµÀತೆ ಹೊಂದಿದ್ದು, ವಾದ್ಯಗಾರರಿಗಾಗಿಯೇ ಮೀಸಲಿಟ್ಟು ವಾದ್ಯ ಸಂಗೀತಗಾರರಿಗೆ ಸಮರ್ಪಿತ ಭಾರತೀಯ ಚಲನಚಿತ್ರ ಸಂಗೀತವನ್ನೊಳಗೊಂಡ ವಾದ್ಯ-ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡು ದೇಶವ್ಯಾಪಿ ಶ್ಲಾಘನೀಯವಾಯಿತು. ಇದಲ್ಲದೆ ಎರಡು ದಿನಗಳ “ನ್ಯಾಷನಲ್‌ ಮ್ಯಾಂಡೋ ಫೆಸ್ಟ್‌ – ೩” ರ ಆಯೋಜನೆಯ ಉಸ್ತುವಾರಿ ಹೊತ್ತು ದೇಶದ ಪ್ರತಿಭಾನ್ವಿತ ಮ್ಯಾಂಡೋಲಿನ್‌ ವಾದಕರೆಲ್ಲರು ಈ ವೇದಿಕೆಯಲ್ಲಿ ಭಾಗವಹಿಸಿದ್ದರು.

 


ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಖ್ಯಾತ ನಾಮಾಂಕಿತರಾದ  ಶ್ರೀ ಎಸ್‌ ಪಿ ಬಾಲಸುಬ್ರಹ್ಮಣ್ಯಮ್, ಶ್ರೀ ಪ್ರವೀಣ್‌ ಡಿ ರಾವ್‌, ಶ್ರೀ ಪ್ರವೀಣ್‌ ಗೋಡ್ಖಿಂಡಿ, ಅಂತರಾಷ್ಟ್ರೀಯ ಖ್ಯಾತಿಯ ಡ್ರಮ್ಮರ್‌ ಸೆನ್ರಿ ಕವಗುಚಿ, ಶ್ರೀ ವಿಜಯ್‌ ಪ್ರಕಾಶ್‌ ಇವರುಗಳು ಭಾಗವಹಿಸಿದ್ದ ಕೆ ಜೆ ಯೇಸುದಾಸ್‌ ಹಾಗೂ ಇಳಯರಾಜ ಅವರ ವಿಶೇಷ ಕಾರ್ಯಕ್ರಮಕ್ಕೆ ಹಲವು ಸಂಸ್ಥೆಗಳೊಂದಿಗೆ ಮಾರ್ರ್ಸ್ ಸಂಸ್ಥೆಯು ಕೈಜೋಡಿಸಿ ಈ ಕಾರ್ಯಕ್ರಮಗಳ ಆಯೋಜನೆಯ ಉಸ್ತುವಾರಿಯನ್ನು ವಹಿಸಿಕೊಂಡಿತ್ತು. ಇದಲ್ಲದೆ ೨೦೨೦ ರಲ್ಲಿ ಎಸ್‌ ಪಿ ಬಾಲಸುಬ್ರಹ್ಮಣ್ಯಮ್‌ ಸಹ ಭಾಗಿತ್ವದ ವಿಶೇಷ ಚೇತನ ಮಕ್ಕಳ ನೆರವಿಗಾಗಿ ಧನ ಸಹಾಯದ ನಿಮಿತ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾಡಿನ ಪ್ರಖ್ಯಾತ ಕಲಾವಿದರ ಪರಿಚಯದ “ಮ್ಯೂಸಿಕ್-ಮೆಲೋಡಿ-ಮ್ಯಾಜಿಕ್”‌ ಕೈಪಿಡಿಯನ್ನು ಶ್ರೀಮತಿ ರಜನಿ ರಾಧಾ ಕೃಷ್ಣನ್‌ ಅವರ ಸಂಪಾದಕತ್ವದಲ್ಲಿ ಬಿಡುಗಡೆಯಾಗಿದ್ದು ಸ್ವಪ್ನ ಬುಕ್‌ ಹೌಸ್‌ ನಲ್ಲಿ ಈ ಪುಸ್ತಕ ಲಭ್ಯವಿದೆ.

 

ಸಿತಾರ್‌ ವಾದ್ಯದ ಬಗ್ಗೆ:

ಮೂರು ತಂತಿಗಳ ತ್ರಿತಂತ್ರಿ ವಾದ್ಯವಾಗಿ ಮೊದಲು ರೂಪಗೊಂಡ ಸಿತಾರ್‌ ಕಾಲಕ್ರಮೇಣ ಭಾರತೀಯ ರುದ್ರ ವೀಣೆ ಹಾಗು ಸರಸ್ವತಿ ವೀಣೆಯಾಗಿ ಮಾರ್ಪಾಡಾಯಿತು. ೧೬ನೇ ಶತಮಾನದ ಮೊಘಲರ ಕಾಲದಲ್ಲಿ ಸಿತಾರ್‌ ನ ಆಧುನಿಕ ಅವತರಣಿಕೆಯನ್ನು ಸಿದ್ಧ ಪಡಿಸಲಾಯಿತು. ೧೯೫೦ ರ ನಂತರ ಪಂಡಿತ್‌ ರವಿಶಂಕರ್‌ ಅವರು ಪಾಶ್ಚಿಮಾತ್ಯ ವಯೊಲಿನ್‌ ವಾದಕರಾದ ಯೆಹುದಿ ಮೆನುಹಿನ್‌, ಅಮೇರಿಕಾದ ಗಾಯಕರಾದ ರೋಜರ್‌ ಮ್ಯಾಕ್‌ ಗಿನ್‌, ಡೇವಿಡ್‌ ಕ್ರಾಸ್ಬಿ, ಗಿಟಾರ್‌ ವಾದಕರಾದ ಜಾರ್ಜ್‌ ಹ್ಯಾರಿಸನ್‌, ವಾದ್ಯ ಸಂಯೋಜಕರಾದ ಫಿಲಿಪ್‌ ಗ್ಲಾಸ್‌, ಆಂಡ್ರೆ ಪ್ರೆವಿನ್‌ ಅವರೊಂದಿಗೆ ವಿಶ್ವಾದ್ಯಂತ ಕಾರ್ಯಕ್ರಮಗಳನ್ನು ನೀಡಿ ಸಿತಾರ್‌ ವಾದ್ಯದ ಜಾಗತಿಕ ರಾಯಭಾರಿಯಾದರು.

ಸಂಗೀತ ಸಂಯೋಜಕರಾದ ಸಿ ರಾಮಚಂದ್ರ, ಎಸ್‌ ಎನ್‌ ತ್ರಿಪಾಠಿ, ಎನ್‌ ದತ್ತ, ನೌಶದ್‌, ವಸಂತ ದೇಸಾಯಿ, ಮದನ ಮೋಹನ್‌, ಇವರು ತಮ್ಮ ಚಲನಚಿತ್ರ ಸಂಗೀತದಲ್ಲಿ ಹೆಚ್ಚಾಗಿ ಸಿತಾರ್‌ ವಾದ್ಯವನ್ನು ಬಳಸಿದ್ದರು. ಉಸ್ತಾದ್ ರೈಸ್‌ ಖಾನ್‌, ಉಸ್ತಾದ್ ಅಬ್ದುಲ್‌ ಹಲೀಮ್‌ ಜಾಫರ್‌ ಖಾನ್‌, ಜಯರಾಮ್‌ ಆಚಾರ್ಯ ಅವರು ತಮ್ಮ ಅದ್ಭುತ ವಾದನದ ಮೂಲಕ ವಾದ್ಯವನ್ನು ಮತ್ತಷ್ಟು ಮೆರಗು ಗೊಳಿಸಿದರು.

 

ಕರ್ನಾಟಕದಲ್ಲಿ ಉಸ್ತಾದ್‌ ಅಬ್ದುಲ್ ಕರೀಂ ಖಾನ್‌ ರ ಪುತ್ರರಾದ ಉಸ್ತಾದ್ ಬಾಳೇ ಖಾನ್‌, ಛೋಟೆ ಅಹ್ಮದ್‌ ಖಾನ್‌, ಶಫೀಕ್‌ ಖಾನ್‌, ರಫೀಕ್‌ ಖಾನ್‌, ಪಂಡಿತ್‌ ಗೋಪಿನಾಥ್‌ ಅವರು ಸಿತಾರ್‌ ಪರಂಪರೆಯನ್ನು ಮುಂದುವರಿಸಿದ್ದಾರೆ. ಈ ಅದ್ಭುತ ವಾದ್ಯವು ತನ್ನದೇ ಆದ ವಿಶೇಷ ಧ್ವನಿ ಹಾಗು ವಾದನ ಶೈಲಿ ಹೊಂದಿದ್ದು ಸಂಗೀತ ಕಾರ್ಯಕ್ರಮಗಳಲ್ಲಿ ಗಮನ ಸೆಳೆಯುತ್ತಿದೆ.

 

ಈ ವಾದ್ಯ ವೈಭವವನ್ನು ಮುಂದುವರೆಸುತ್ತ, ದಿ ಗ್ರಾಂಡ್‌ ಸಿತಾರ್‌ ಸಿಂಫೋನಿಯಲ್ಲಿ ಹೆಸರಾಂತ ಸಿತಾರ್‌ ವಾದಕರೊಡನೆ ಕೀರ್ಬೋಡ್‌, ತಬಲ, ಕೊಳಲು, ಸ್ಯಾಕ್ಸೋಫೋನ್‌, ಹಾಗೂ ಡ್ರಮ್ಸ್‌ ಗಳ ಸಹಕಾರವು ಕಲಾಸಕ್ತರಿಗೆ ಕರ್ಣಾಹ್ಲಾದ ನೀಡಲಿದೆ. ಬೆಂಗಳೂರಿನ ಹೆಮ್ಮೆಯ ವಾದ್ಯಗಾರರೆಲ್ಲರೂ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದು ಕಲಾರಸಿಕರ ಮನತಣಿಸುವುದರಲ್ಲಿ ಸಂಶಯವೇಯಿಲ್ಲ.

 ಕಾರ್ಯಕ್ರಮದ ಉದ್ದೇಶ:

ಮಾರ್ರ್ಸ್  ಎಂಟರ್ಟೇನ್ಮೆಂಟ್ ತನ್ನ ಕಾರ್ಯಕ್ರಮದ ಬಹುಪಾಲನ್ನು ಸಮಾಜದ ಹಿತಕ್ಕಾಗಿ, ಕ್ಷೇಮಾಭಿವೃದ್ಧಿಗಾಗಿ ಮೀಸಲಿಡುತ್ತಿದ್ದು, ಈ ಬಾರಿ ಕಾರ್ಯಕ್ರಮದ ಆದಾಯದ ಒಂದು ಪಾಲನ್ನು ಕರ್ನಾಟಕ ಕಲಾವಿದರ ಸಂಘಕ್ಕಾಗಿ ಮೀಸಲಿಟ್ಟಿದೆ. ೬೦೦ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡ ಕರ್ನಾಟಕ ಕಲಾವಿದರ ಸಂಘ, ಕಲಾವಿದರ ಕ್ಷೇಮಾಭಿವೃಧ್ಧಿಗಾಗಿ ಸ್ಥಾಪಿತಗೊಂಡಿದೆ. ಕೋವಿಡ್‌ ನಿಂದಾಗಿ ಹಲವಾರು ಕಲಾವಿದರ ಜೀವನವು ವಿಚಲಿತ ಗೊಂಡಿದ್ದು ಅವರಿಗೆ ಸಹಾಯದ ಅವಶ್ಯಕತೆ ಇದೆ. ಕರ್ನಾಟಕ ಕಲಾವಿದರ ಸಂಘದ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಮಾಹಿತಿ ಪತ್ರದಲ್ಲಿ ನೀಡಲಾಗಿದೆ.

ನಮ್ಮ ಭಾರತದ ಸಂಸ್ಕೃತಿ, ಸಂಪ್ರದಾಯ, ಶಿಕ್ಷಣ ಹಾಗೂ ಕಲೆಯ ವೈಭವದ ಹಿರಿಮೆಯೊಂದಿಗೆ ದಿನಾಂಕ ೨೭-೦೨-೨೦೨೨ ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ದಿ ಗ್ರಾಡ್‌ ಸಿತಾರ್‌ ಸಿಂಫೋನಿಯನ್ನು ಆಯೋಜಿಸಲಾಗಿದೆ. ಇದರಲ್ಲಿ ೩೦ ವರ್ಷಕ್ಕೂ ಹೆಚ್ಚು ಅನುಭವ ಹೊಂದಿದ ದಕ್ಷಿಣ ಭಾರತದ ಹಲವು ದಿಗ್ಗಜ ಕಲಾವಿದರು ಭಾಗವಹಿಸಲಿದ್ದಾರೆ

 

ನಮ್ಮ ಬೆಂಗಳೂರಿನ ಈ ಹೆಮ್ಮೆಯ ಕಾರ್ಯಕ್ರಮದ ಕುರಿತಾಗಿ ತಮ್ಮ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ರಜನಿ ಆರ್‌

9663695319


Post a Comment

0 Comments

Ad Code

Responsive Advertisement