Ticker

6/recent/ticker-posts

Ad Code

Responsive Advertisement

ಬ್ಯಾಲ್ಯದಲ್ಲಿ ಪ್ರಾರಂಭವಾಗಿರುವ ಉಪ ಮಾರುಕಟ್ಟೆ, ಗ್ರಾಮಸ್ಥರಿಗೆ ಅನುಕೂಲಕರ : ಡಾ.ಜಿ.ಪರಮೇಶ್ವರ್

ಮಧುಗಿರಿ - ದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರ, ಕೃಷಿಕರ ಹಾಗೂ ಗ್ರಾಹಕರ ಹಿತ ಕಾಪಾಡುವ ಮೂಲಕ  ವ್ಯವಸ್ಥಿತವಾಗಿ ನಡೆಯುತ್ತಿದ್ದು, ಬ್ಯಾಲ್ಯದಲ್ಲಿ ಪ್ರಾರಂಭವಾಗಿರುವ  ಉಪ ಮಾರುಕಟ್ಟೆ  ಈ ಭಾಗದ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. 

ಬ್ಯಾಲ್ಯದಲ್ಲಿ ಹೆಚ್ಚು ವ್ಯಾಪಾರ -ವಹಿವಾಟು ನಡೆಯವ ದೃಷ್ಠಿಯಿಂದ 50 ಲಕ್ಷ ರು.ವೆಚ್ಚದಲ್ಲಿ ಈ ಉಪ ಮಾರುಕ್ಟಟೆ ಮಾಡಿದ್ದು, ರೈತರು ತಾನು ಬೆಳೆದ ಬೆಳೆ ತಂದು ಮಾರಾಟ ಮಾಡಲು ಅನುಕೂಲವಾದರೆ ಗ್ರಾಹಕರಿಗೂ ಕೊಳ್ಳಲು ಸುಲಭವಾಗಲಿದೆ.ಪಟ್ಟಣ ಪ್ರದೇಶ್ಕಕೆ ಸೀಮಿತವಾಗಿದ್ದ  ಮಾರುಕಟ್ಟೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ಬಂದು  ರೈತರಿಗೆ,ಗ್ರಾಹಕರಿಗೆ ಸಂಬಂಧ ಸೇತುವೆಯಾಗಿ ಕೆಲಸ ಮಾಡುತ್ತಿವೆ. ತಿಪಟೂರು ಕೃಷಿ ಉತ್ಪನ್ನ ಮಾರುಕ್ಟಟೆ ಹೆಚ್ಚು ವ್ಯಾಪಾರ ವಹಿವಾಟು ಮಾಡುವ ಮೂಲಕ ಅಧಿಕ ಲಾಭ ತಂದು ಕೊಡುತ್ತಿದೆ.ಆ ನಿಟ್ಟಿನಲ್ಲಿ ಈ ಉಪ ಮಾರುಕ್ಟಟೆ ಕೂಡ ವಾರಕ್ಕೊಮ್ಮೆ ಸಂತೆ ಸೇರಿ ಇನ್ನಿತರೆ ವ್ಯಾಪಾರ -ವಹಿವಾಟು ಚಟುವಟಿಕೆಗಳು ಚನ್ನಾಗಿ ನಡೆದು ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ  ಎಂದು ಶುಭ ಕೋರಿದರು.


ಶುಕ್ರವಾರ ಕೃಷಿ ಮಾರಾಟ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕ್ಟಟೆ ಸಮಿತಿ ಮಧುಗಿರಿ 2014-15ನೇ ಸಾಲಿನ ಡಬ್ಯೂಐಎಫ್ ಹೆಚ್ಚುವರಿ ಯೋಜನೆಯಡಿ ಸಮಿತಿಯಿಂದ ಬ್ಯಾಲ್ಯ ಉಪಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಲಾದ 02 ಸಂಖ್ಯೆ ಮುಚ್ಚು ಹರಾಜು ಕಟ್ಟೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 


ಕಳೆದ 30 ವರ್ಷಗಳಿಂದ ಪುರವರ ಹೋಬಳಿ ನನ್ನನ್ನು ರಾಜಕೀಯವಾಗಿ ಬೆಳಸಿದ್ದು ನಾನು ಕೂಡ ನನ್ನ ಕೈಲಾದ ಮಟ್ಟಿಗೆ  ಕ್ಷೇತ್ರದ  ಜನತೆಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ.ಜಯಮಂಗಲಿ ನದಿಯಿಂದ ದೊಡ್ಡಹೊಸಹಳ್ಳಿ ಕೆರೆಗೆ ನೀರು ಹರಿಸುವ ಕಾಲುವೆಗೆ ಸರ್ಕಾರದಿಂದ ಅನುಮೋದನೆ ಪಡೆಯುವುದಾಗಿ ಭರವಸೆ ನೀಡಿದರು.

ಎತ್ತಿನಹೊಳೆಗೆ ಪ್ರಥಮ ಆದ್ಯತೆ: ಎತ್ತಿನ ಹೋಳೆ ಯೋಜನೆ ಕಾಮಗಾರಿಗೆ 21 ಸಾವಿರ ಕೋಟಿ ರು.ಮೀಸಲಿಟ್ಟಿದ್ದು,ಸರ್ಕಾರ ಈ ಬಜೆಟ್ನಲ್ಲಿ ಹೆಚ್ಚು ಹಣ ಮೀಸಲಿಟ್ಟು ಯೋಜನೆ ತ್ವರತವಾಗಿ ಮುಗಿಸಬೇಕು.ಈಗಾಗಲೇ 8ವೊರೆ  ಸಾವಿರ ಕೋಟಿ ಖರ್ಚು ಮಾಡಿದ್ದು  ಕೊರಟಗೆರೆ ತಾಲೂಕಿನಲ್ಲಿ 105 ಕೆರೆಗಳಿಗೆ ನೀರು ಹರಿಯಲಿದೆ. ನೀರಾವರಿ ಯೋಜನೆಗಳು ಕಾರ್ಯಗತವಾದರೆ ರೈತರೇ ಸರ್ಕಾರಕ್ಕೆ ಹಣ ಒದಗಿಸುವರು. 18 ಕೋಟಿ ರು.ವೆಚ್ಚದಲ್ಲಿ ಐ.ಡಿ.ಹಳ್ಳಿ ಕ್ರಾಸ್‍ನಿಂದ ಬ್ಯಾಲ್ಯದವರೆಗೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಬ್ಯಾಲ್ಯದಿಂದ -ವಡ್ಡರಹಟ್ಟಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಜೊತೆಗೆ ಹನುಮಂತಪುರ ರಸ್ತೆಯನ್ನು ಅಭಿವೃದ್ಧಿಗೊಳಿಸೋಣ ಎಂದರು. 

ಎಪಿಎಂಸಿ ಉಪಾಧ್ಯಕ್ಷ ರಾಜ್‍ಕುಮಾರ್ ಮಾತನಾಡಿ, ನಮ್ಮ ಬಾಗದ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಸಲುವಾಗಿ ಈ ಉಪ ಮಾರುಕ್ಟಟೆ ತೆರೆದಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು. 

ಧಾರ್ಮಿಕ ಮುಖಂಡ ಡಾ.ಎಂ.ಜಿಶ್ರೀನಿವಾಸಮೂರ್ತಿ ಮಾತನಾಡಿ, ಈ ಉಪ ಮಾರುಕಟ್ಟೆ ಇಲ್ಲಿನ ರೈತರಿಗೆ,ಗ್ರಾಹಕರಿಗೆ ಅನುಕೂಲ,ಅಕ್ಕಿರಾಂಪುರ ಸಂತೆ ನಡೆದಂತೆ ಇಲ್ಲಿ ಸಹ ಕುರಿ,ಮೇಕೆ ಮಾರಾಟ ಮಾಡಲು ವಾರ ನಿಗದಿಪಡಿಸಿ ಇದರ ಪ್ರಯೋಜನ ಈ ಭಾಗದ ಜನತೆಗೆ ದೊರಕಲಿ.ಜಯಮಂಗಲಿ ನದಿ ಒಂದಿಡಿ ಮರಳು ಆಚೆ ಹೋಗದಂತೆ ಇದೆ ಎಂದರೆ ಅದಕ್ಕೆ  ಶಾಸಕ ಡಾ.ಜಿ.ಪರಮೇಶ್ವರ್ ಕಾರಣ,ಅದಕ್ಕಾದಗಿ ಮುಂಬರುವ ಚುನಾವಣೆಯಲ್ಲಿ ಪರಮೇಶ್ವರ್ ಕೈ ಬಲಪಡಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗಂಗರತ್ನಮ್ಮ ಭೈರಪ್ಪ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಬೈರಪ್ಪ, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಎಪಿಎಂಸಿ ಕಾರ್ಯದರ್ಶಿ ಆಶಾ,ನಿರ್ದೇಶಕ ಬಸವರಾಜು, ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ,ಪಿ.ಟಿ.ಗೋವಿಂದಯ್ಯ,ರಮಾಬಾಯಿ,ಬಗರ್ ಹುಕುಂ ಸದಸ್ಯ ನಂಜೇಗೌಡ, ಕೊಡಗದಾಲ ಗ್ರಾಪಂ ಅಧ್ಯಕ್ಷೆ ಶೈಲಜಾ, ಬ್ಯಾಲ್ಯ ವಿಎಸ್‍ಎಸ್‍ಎನ್ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ನಾಗರಾಜು, ತಿಪ್ಪಯ್ಯ ಸೇರಿದಂತೆ ಅನೇಕರಿದ್ದರು.

Post a Comment

0 Comments

Ad Code

Responsive Advertisement