ಮಧುಗಿರಿ: ಮಧುಗಿರಿ,ಉಪವಿಭಾಗವನ್ನು, ಮಧುಗಿರಿ ಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಮಧು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಧು ಜಿ.ಡಿ. ಪಾಳ್ಯ ಅವರ ನೇತೃತ್ವದಲ್ಲಿ ವಿವಿದ ಸಂಘ ಸಂಸ್ಥೆಗಳುಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಈ ವೇಳೆ ಮಾತನಾಡಿದ ಮಧು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಧು ಜಿ.ಡಿ. ಪಾಳ್ಯ ಅವರು ನಂಜುಂಡಪ್ಪ ವರದಿ ಪ್ರಕಾರ ಮಧುಗಿರಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ, ಮಧುಗಿರಿ, ಪಾವಗಡ, ಶಿರಾ ತಾಲ್ಲೂಕುಗಳನ್ನು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ರಾಜಕೀಯ ಶಿಕ್ಷಣ, ಕಲೆ, ಸಾಹಿತ್ಯ, ರಂಗಭೂಮಿ, ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಹೆಸರು ಮಾಡಿದ್ದು, ಇನ್ನೂ ಹೆಚ್ಚಿನ ಬೆಳವಣಿಗೆ ಆಗಬೇಕಾದ ಅನಿವಾರ್ಯತೆ ಇದೆ. ಪಾವಗಡ, ಮಧುಗಿರಿ, ಶಿರ, ಕೊರಟಗೆರೆ ಕ್ಷೇತ್ರಗಳಲ್ಲಿ ಈಗಾಗಲೇ ಹಲವಾರು ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್, ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳಿದ್ದು, ಮಧುಗಿರಿಯನ್ನು ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿ ಸರ್ಕಾರ ಘೋಷಿಸಿ ಶಿಕ್ಷಣ ಕ್ಷೇತ್ರದ ಬೆಳವಣಿಗೆ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ ವೈದ್ಯಕೀಯ ಶಿಕ್ಷಣ ನೀಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.
ಪಾವಗಡ ಮತ್ತು ಶಿರಾ ತಾಲ್ಲೂಕಿನ ನಾಗರಿಕರು ಈಗಿನ ಜಿಲ್ಲಾ ಕೇಂದ್ರವಾದ ತುಮಕೂರಿಗೆ ಹೋಗಿ ಬರುವುದು ತುಂಬಾ ಕಷ್ಟಕರವಾಗಿದೆ. ನಾಲ್ಕು ತಾಲ್ಲೂಕಿನ ಜನರು ವ್ಯವಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದು ಅವರ ಅಭಿವೃದ್ದಿಗೆ ಎತ್ತಿನಹೊಳೆಯಂತಹ ನೀರಾವರಿ ಯೋಜನೆಗಳು ಬೇಗ ಅನುಷ್ಠಾನಗೊಳ್ಳುವುದರ ಜೊತೆಗೆ ಕೈಗಾರಿಕೆಗಳು ಸ್ಥಾಪನೆಗೊಂಡು ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕಾಗಿದೆ ಎಂದು ಹೇಳಿದರು.ಇದೇಅಲ್ಲದೆ ನಾಡು ನುಡಿಯನ್ಮು ಉಳಿಸಳು ಜಿಲ್ಲಾಕೇಂದ್ರಾವಶ್ಯಕ ಎಂದರು.
ಜಿಲ್ಲಾ.ಕೇಂದ್ರಾಗುವುದರಿಂದ ಶೈಕ್ಷಣಿಕವಾಗಿ ಅರ್ಥಿಕವಾಗಿ ಸಾಮಜಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ
ಉಪವಿಭಾಗದಲ್ಲಿನ ತಾಲ್ಲೂಕುಗಳಲ್ಲಿ ಮಧುಗಿರಿ ಬೆಟ್ಟ, ಶ್ರೀ ಮಲ್ಲೇಶ್ವರ ಮತ್ತು ಶ್ರೀ ವೆಂಕಟೇಶ್ವರ ದೇವಸ್ಥಾನಗಳು, ಜೈನ ಬಸದಿ, ದರ್ಗಾ ಪಾವಗಡದ ನಿಡಗಲ್ ಬೆಟ್ಟ, ಶನಿಮಹಾತ್ಮ ದೇವಸ್ಥಾನ, ಕೊರಟಗೆರೆಯ ಗೊರವನಹಳ್ಳಿ ಲಕ್ಷ್ಮೀದೇವಸ್ಥಾನ, ಸಿದ್ದರಬೆಟ್ಟ, ಶಿರಾದ ವರ್ಗ, ಕೋಟೆಗಳಂತಹ ಪ್ರವಾಸಿ ತಾಣಗಳನ್ನು ಹೊಂದಿವೆ ಎಂದು ಹೇಳಿದರು.
ಮಧುಗಿರಿ ಕೇಂದ್ರ ಸ್ಥಾನ: ರಾಜಕೀಯ, ಶೈಕ್ಷಣಿಕವಾಗಿ ಹೆಸರುಗಳಿಸಿದ್ದು, ಸರ್ಕಾರದ ಇಲಾಖೆಯ ಮುಖ್ಯ ಕಛೇರಿಗಳನ್ನು ಹೊಂದಿ, ರೈಲ್ವೆ ಸ್ಟೇಷನ್ ಸ ಮಂಜೂರಾಗಿದ್ದು, ತ್ವರಿತವಾಗಿ ರೈಲ್ವೆ ಕಾಮಗಾರಿ ಮುಗಿಸಿ, ಜನರ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ. ಈ ಎಲ್ಲಾ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಉಪವಿಭಾಗದ ರೈತರ ಕಾರ್ಮಿಕರ ಕೈಗಾರಿಕೋದ್ಯಮಿಗಳ, ನೌಕರರ, ಇತರ ಎಲ್ಲಾ ಸಮೂಹಗಳ, ಜನರ ಹಿತ ಕಾಪಾಡಲು ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಘೋಷಿಸಿ.ತಾಲ್ಲೋಕಿನ ಸ್ವಾಭಿಮಾನಿಜನರ ಮನಸ್ಸುಗೆಲ್ಲಬೇಕು ಎಂದರು.
ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಬೆಂಬಲ: ಕರುನಾಡ ವಿಜಯ ಸೇನೆಯ ಅಧ್ಯಕ್ಷ ತಿಮ್ಮರಾಜು, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿಕ್ಕಮಾಲೂರು ಶಿವಕುಮಾರ್ ಹೋರಾಟಕ್ಕೆ ಬೆಂಬಲ ಸೂಚಿಸಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ವಿವಿಧ ರಸ್ತೆ ಗಳಲ್ಲಿ ಬೈಕ್ ರ್ಯಾಲಿ: ಪಟ್ಟಣದ ಟಿವಿವಿ ಕಾಲೇಜು ರಸ್ತೆ ಸೇರಿದಂತೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ಬೈಕ್ ರ್ಯಾಲಿ ಯನ್ನು ನಡೆಸಲಾಯಿತು.
ಈ ವೇಳೆ ಕನ್ನಡಪರ ಒಕ್ಕೂಟ ಅಧ್ಯಕ್ಷ ಚಿಕ್ಕ ಮಾಲೂರ್ ಶಿವಕುಮಾರ್. ಕರುನಾಡ ವಿಜಯ ಸೇನೆ ತಾಲೂಕ ಅಧ್ಯಕ್ಷ ತಿಮ್ಮರಾಜು ನಗರ ಅಧ್ಯಕ್ಷ ರಾಜು. ಮಹಿಳಾ ಘಟಕದ ಅಧ್ಯಕ್ಷ ಲತಾ ಗೋವಿಂದರಾಜು.ಮುಖಂಡರಾದ ನಾಗರಾಜ್. ನಾಗೇಶ್. ಶಿವಕುಮಾರ್. ಶಿವಣ್ಣ. ನವೀನ್. ಬೈರೇಶ್. ಕೃಷ್ಣ ನಾಯಕ್. ಲಕ್ಷ್ಮಿಕಾಂತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
0 Comments