Ticker

6/recent/ticker-posts

Ad Code

Responsive Advertisement

ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರದ ಕಛೇರಿ ಉದ್ಘಾಟನೆ

ಲಯನ್ಸ್ ಸಂಸ್ಥೆಯಿಂದ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರದ ಕಛೇರಿ ಉದ್ಘಾಟನೆ

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಎಫ್ - ಲಯನ್ಸ್ ಕ್ಲಬ್ ಆಫ್ ಸ್ಪಂದನ ವತಿಯಿಂದ ದಿನಾಂಕ 3.02.2022 ರಂದು ಬೆಳಿಗ್ಗೆ ಟಿ.ದಾಸರಹಳ್ಳಿ ಪೈಪ್ಲೈನ್ ರೋಡ್ ನಲ್ಲಿರುವ ಯಶಸ್ವಿನಿ ಮಹಿಳಾ ಸೌಹಾರ್ದ ಕಛೇರಿಯಲ್ಲಿ ಉಚಿತ ಮಧುಮೇಹ ಹಾಗು ರಕ್ತದ ಒತ್ತಡ ತಪಾಸಣಾ ಶಿಬಿರವನ್ನು ಜಿಲ್ಲಾ ರಾಜ್ಯಪಾಲರಾದ ಶ್ರೀ ಲಯನ್ ಮನೋಹರನ್ ನಂಬಿಯಾರ್ ಅವರು ಉದ್ಘಾಟಿಸಿದ್ದಾರೆ. ಇಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಈ ಉಚಿತ ಶಿಬಿರ ನಡೆಯಲಿದೆ. 

ಇದೇ ಸಂದರ್ಭದಲ್ಲಿ ನೀಡ್ ಬೇಸ್ ಇಂಡಿಯಾ - ಹೆಣ್ಣು ಮಕ್ಕಳ ಆಶ್ರಮದ ೫೦ ಜನ ಮಕ್ಕಳಿಗೆ ಉಡುಪುಗಳನ್ನು  ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ 317ಎಫ್ ನ ಅನೇಕ ಕ್ಯಾಬಿನೆಟ್ ಸದಸ್ಯರು, ಎಲ್ ಸಿ ಬಿ ಸ್ಪಂದನದ ಅಧ್ಯಕ್ಷರಾದ ಲಯನ್ ಮಮತಾ, ಕಾರ್ಯದರ್ಶಿಗಳಾದ ಲಯನ್ ಲಾವಣ್ಯ, ಖಜಾಂಚಿಗಳಾದ ಲಯನ್ ಶಶಿಕಲಾ ಅನೇಕ ಲಯನ್ಸ್ ಸಂಸ್ಥೆಯ ಗಣ್ಯರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement