Ticker

6/recent/ticker-posts

Ad Code

Responsive Advertisement

ಪರಿಶಿಷ್ಟ ಪಂಗಡ ಸರ್ಕಾರದ ಯೋಜನೆಗಳ ಮಾಹಿತಿ ಕಾರ್ಯಗಾರ

*ಪರಿಶಿಷ್ಟ ಪಂಗಡದ ಯುವಕ, ಯುವತಿಯರು ಸರ್ಕಾರ ಯೋಜನೆಗಳ ಲಾಭ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು-ಶುಭಾ ವೇಣುಗೋಪಾಲ್*


ಶಬರಿ ಸೇವಾ ಫೌಂಡೇಷನ್ ವತಿಯಿಂದ ಗಾಂಧಿ ಭವನದಲ್ಲಿ ಪರಿಶಿಷ್ಟ ಪಂಗಡದ ಯುವಕ, ಯುವತಿಯರ ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಸ್ವಯಂ ಉದ್ಯೋಗಕ್ಕೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

*ಶಬರಿ ಸೇವಾ ಫೌಂಡೇಷನ್ ಅಧ್ಯಕ್ಷೆ ಶ್ರೀಮತಿ ಶುಭಾ ವೇಣುಗೋಪಾಲ್ ಮತ್ತು ಎನ್.ಎಸ್.ಐ.ಸಿ.ಕೋಕಿಲಾ ,ಬಿ.ಪಿ.ಸಿ.ಹೆಚ್ ಸಂಸ್ಥೆಯ ಶ್ರೀದೇವಿ,ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ,ಉಪನಿರ್ದೇಶಕರಾದ ರಾಜಶೇಖರ್ ,ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರದ ಜಂಟಿ ನಿರ್ದೇಶಕರಾದ ಮಧು ಮತ್ತು ವಾಲ್ಮೀಕಿ ಸಮಾಜದ ಮುಖಂಡರಾದ ಸಿರಿಗೆರೆ ತಿಪ್ಪೇಶ್ ತುಳಸಿರಾಮ್ ರವರು ಮಹರ್ಷಿ ವಾಲ್ಮೀಕಿ ಮತ್ತು ಶಬರಿ ಬಾವಚಿತ್ರಕ್ಕೆ* ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

*ಇದೇ ಸಂದರ್ಭದಲ್ಲಿ ಶ್ರೀಮತಿ ಶುಭಾ ವೇಣುಗೋಪಾಲ್* ರವರು ಮಾತನಾಡಿ ಪರಿಶಿಷ್ಟ ಪಂಗಡದ ಸಮುದಾಯದ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಪರಿಶಿಷ್ಟ ಸಮುದಾಯಕ್ಕೆ ಸರಿಯಾದ ಮಾಹಿತಿ ನೀಡಿ ಯೋಜನೆಯ ಲಾಭ ಪಡೆದು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಶಬರಿ ಸೇವಾ ಫೌಂಡೇಷನ್ ಮಾಹಿತಿ ಕಾರ್ಯಗಾರ ಆಯೋಜಿಸಿದೆ .

ವಿದ್ಯಾಭ್ಯಾಸ ,ಉದ್ಯೋಗ ಮತ್ತು ಸ್ವಯಂ ಉದ್ಯೋಗದಲ್ಲಿ ಸರ್ಕಾರದ ಸೌವಲತ್ತು ತಿಳಿಯಪಡಿಸಿ ಪರಿಶಿಷ್ಟ ಪಂಗಡದ ಪ್ರತಿ ಮನೆಯಲ್ಲಿಯೊ ಯೋಜನೆಗಳ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಸಮಾಜ ,ದೇಶದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

Post a Comment

0 Comments

Ad Code

Responsive Advertisement