ದಿನಾಂಕ:- 20/02/2022ರಂದು ಕೋಲಾರ ಜಿಲ್ಲೆಯ K.G.F.ನಲ್ಲಿ ದಿವಂಗತ ಕೆಂಗಲ್ ಹನುಮಂತಯ್ಯ ನವರ ಮಗ ದಿವಂಗತ Dr, T. ತಿಮ್ಮಯ್ಯ ಮಗ Dr,T. ವೆಂಕಟ ವರ್ಧನ್ ಅವರು ತಮ್ಮ ತಂದೆಯ ಜ್ಞಾಪಕಾರ್ಥ ವರ್ಷವರ್ಷವೂ ನಡೆಸುತ್ತಿರುವ ಹಾಗೆ ಈ ವರ್ಷವೂ ಗಾಲ್ಫ್ ಟೂರ್ನಮೆಂಟನ್ನು ಆಯೋಜಿಸಿದ್ದು ಈ ಒಂದು ಸಮಾರಂಭಕ್ಕೆ ಗೋಲ್ಡನ್ ವೆಲ್ಲಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರು ಆದ Dr, T. ವೆಂಕಟ ವರ್ಧನ್ ರವರೇ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
RCB ರಾಯಲ್ ಚಾಲೆಂಜರ್ಸ್ ನ ನಿರ್ದೇಶಕರಾದ ಮೈಕ್ ಹಸ್ಸನ್ ಮತ್ತು ನ್ಯೂಜಿಲ್ಯಾಂಡಿನ IPL ಕ್ರಿಕೆಟ್ ಟೀಮ್ ಕೋಚ್ ಇವರು ಭಾಗವಹಿಸಿ ಇಂದು 40 ತಂಡಗಳು ಬಂದಿದ್ದು ಎಲ್ಲರೂ ಭಾಗವಹಿಸಿದ್ದು ಒಂದನೇ ಬಹುಮಾನ ವರುಣ್ ಮುರುಗನ್ ಪಡೆದರೆ ಎರಡನೇ ಬಹುಮಾನ ಶ್ರೀಧರಮೂರ್ತಿ ಮತ್ತು ಮೂರನೇ ಬಹುಮಾನ ಡಾಕ್ಟರ್ ರೋಹಿತ್ ಶೆಟ್ಟಿ ನಾಲ್ಕನೇ ಬಹುಮಾನ ಎಂ. ಶಂಕರ್ ಪಡೆದರೆ ಈ ಬಹುಮಾನದ ಮೂಮೆಂಟೋಸ್ ವಿತರಣೆಯನ್ನು ಮುಖ್ಯ ಅತಿಥಿಗಳಾದ PCKL ನ ಮ್ಯಾನೇಜಿಂಗ್ ಡೈರೆಕ್ಟರ್ ಆದ V. ಕೃಷ್ಣಪ್ಪ ಮತ್ತು ಪ್ರಾಂಶುಪಾಲರಾದ ಡಾಕ್ಟರ್ ಸೈಯದ್ ಆರೀಷ್ ಮತ್ತು BGML ನಾ ಎಸ್ಟೇಟ್ ಆಫೀಸರ್ M.B.ಸುರೇಂದ್ರ ರವರು ವಿತರಣೆ ಮಾಡಿರುತ್ತಾರೆ. ಆಟದಲ್ಲಿ BGML ಗಲ್ಪ್ ಕ್ಲಬ್, ಬೆಂಗಳೂರಿನ ಗಲ್ಪ್ ಕ್ಲಬ್, ಕರ್ನಾಟಕ ಗಲ್ಫ್ ಕ್ಲಬ್ ನ ಆಟಗಾರರು ಬಂದಿರುತ್ತಾರೆ.
ಸಮಾರಂಭದಲ್ಲಿ PCKL ನ ವ್ಯವಸ್ಥಾಪಕ ನಿರ್ದೇಶಕರಾದ V. ಕೃಷ್ಣಪ್ಪ ಮಾತಾಡಿ ನಮ್ಮ ಕ್ಲಬ್ ಒಳ್ಳೆಯ ಗಿಡಗಳಿಂದ ಕೂಡಿದ್ದು ಒಳ್ಳೆಯ ಗ್ರೀನರಿ ಪಡೆದಿರುತ್ತದೆ. ಇದಕ್ಕೆ ಕಾರಣ 2018ರಿಂದ ಸತತವಾಗಿ ವರ್ಷವರ್ಷವೂ ಕರ್ನಾಟಕ ರೈತರ ಜಾಗೃತಿ ವೇದಿಕೆ (ರಿ) K.V. ರೆಡ್ಡಿ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿಗಳು ಗಿಡಗಳನ್ನು ಉಚಿತವಾಗಿ ಕೊಡುತ್ತಿರುವುದು ತುಂಬಾ ಸಂತೋಷವಾಗಿದೆ ಎಂದು ಇವರ ಸೇವೆಯನ್ನು ಸ್ಮರಿಸುತ್ತಾರೆ.
0 Comments