Ticker

6/recent/ticker-posts

Ad Code

Responsive Advertisement

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ: ಅಭಿವೃಧ್ದಿ ಕೆಲಸಗಳ ಶೀಘ್ರಗೊಳಿಸಲು ಮನವಿ ಮಾಡಿದ ಶ್ರೀರಾಮುಲು

ಬಳ್ಳಾರಿ ಫೆ 03. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರನ್ನು ದೆಹಲಿಯ ಸಚಿವರ ಅಧಿಕೃತ ನಿವಾಸದಲ್ಲಿ ಭೇಟಿ ನೀಡಿ ಬಿ ಶ್ರೀರಾಮುಲು ಸಚಿವರು ಇಲಾಖೆ ಅಭಿವೃದ್ಧಿ ಕುರಿತು ಮಾತುಕತೆ ನಡೆಸಲಾಯಿತು. ಸೇತು ಭಾರತ್ ಯೋಜನೆಯಡಿ ಬಳ್ಳಾರಿಯ ಸುಧಾ ಕ್ರಾಸ್ ಬಳಿ ಬರುವ (ಎಲ್ ಸಿ ನಂ.110) ರೈಲ್ವೆ ಮೇಲ್ಸೇತುವೆ ನರ‍್ಮಾಣ, ಎಸ್ ಎಚ್132ರ ಅಡಿಯಲ್ಲಿ ಬರುವ ಬಳ್ಳಾರಿಯಿಂದ ಮೋಕ ಮತ್ತು ಮೋಕದಿಂದ ಆಂದ್ರ ಪ್ರದೇಶ ಬರ‍್ಡರ್ ವರೆಗಿನ ನಾಲ್ಕು ಪಥದ ರಸ್ತೆ ಯೋಜನೆ, 

ಈ ಹಿಂದೆ ಗ್ಯಾಮನ್ ಇಂಡಿಯಗೆ ನೀಡಿದ್ದ ಎನ್ ಎಚ್ 63 ಕಾಮಗಾರಿ ರದ್ದತಿ, ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರದಲ್ಲಿ ಬರುವ ಭಾರತ್ ಮಾಲಾ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಅತೀ ಶೀಘ್ರದಲ್ಲಿ ಯೋಜನೆ ಪರ‍್ಣಗೊಳಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಯಿತು. ಸಚಿವರ ಭೇಟಿಯ ವೇಳೆ ಸಂಸತ್ ಸದಸ್ಯರಾದ ರಾಜ ಅಮರೇಶ್ವರ ನಾಯಕ ಮತ್ತು ದೇವೆಂದ್ರಪ್ಪ ಅವರು ಜೊತೆಗಿದ್ದರು.

Post a Comment

0 Comments

Ad Code

Responsive Advertisement