ಮಹಿಳಾ ಸದಸ್ಯರಿಂದ ಕೋಲಾಟ ಮಧ್ವಾಚಾರ್ಯ ಸಂಕೀರ್ತನೆ, ಸಾಮೂಹಿಕ ಪಾರಾಯಣವಾದ್ಯ ಮೇಳ
ಬಳ್ಳಾರಿ ಫೆ 10:- ಧ್ವೆöತ ಮತದ ಹರಿಕಾರ ತತ್ವಜ್ಞಾನಿ ಭಕ್ತಿ ಪಂಥದಲ್ಲಿ ಶ್ರೇಷ್ಠ ರೆನಿಸಿದ ದೈವಾಂಶ ಸಂಭೂತರಾದಶ್ರೀ ಮಧ್ವಾಚಾರ್ಯರು ಬದರಿಕಾಶ್ರಮ ಪ್ರವೇಶ ಮಾಡಿದ ಈ ಮಹಾಸುದಿನವನ್ನು ಅವರ ಅನುಯಾಯಿಗಳು ದೇಶದಾದ್ಯಂತ ಮಧ್ವನವಮಿ ಎಂದು ಆಚರಿಸುತ್ತಾರೆ. ಈ ದಿನದಂದು ಮಧ್ವಾಚಾರ್ಯರ ರಚಿಸಿದ ಕೃತಿಗಳನ್ನು, ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾರಾಯಣ ಮಾಡುತ್ತಾರೆ.
ಇಂತಹ ವಿಶೇಷ ಕಾರ್ಯಕ್ರಮಗಳನ್ನು ಸ್ಥಳೀಯ ರೇಡಿಯೋ ಪಾರ್ಕ್ ಶ್ರೀವ್ಯಾಸರಾಜ ಮಠದಲ್ಲಿ ಶ್ರದ್ದಾ ಭಕ್ತಿ ಯಿಂದ ಆಚರಿಸಲಾಯಿತು. ಮಧ್ವನವಮಿ ಅಂಗವಾಗಿ ಮೂರುದಿನಗಳ ಕಾಲಮಧ್ವಾಚಾರ್ಯರ ಜೀವನ ಚರಿತ್ರೆ ಅವರ ಕೃತಿಗಳ ಗಳಹಾಗೂ ಅವರುಮಧ್ವಮತದ ಬಗ್ಗೆ ಮಾಡಿದ ಸಾಧನೆಗಳ ಕುರಿತು ಪಂಡಿತ್ ಜೀತೇಂದ್ರಾಚಾರ್ಯ ಹಾಗು ಪಂಡಿತ್ ಜಯಸಿಂಹ ಆಚಾರ್ಯ ರಾಜಪುರೋಹಿತ್ ಇವರಿಂದ ವಿಶೇಷ ಉಪನ್ಯಾಸ ಗಳು ಜರುಗಿದವು. ಮಧ್ವನವಮಿ ಅಂಗವಾಗಿ ಮಧ್ವಾಚಾರ್ಯರ ಭಾವ ಚಿತ್ರವನ್ನು ರಜತ ರಥದಲ್ಲಿ ಇರಿಸಿ ರಥೋತ್ಸವ ನೇರವೇರಿಸಲಾಯಿತು. ರಥೋತ್ಸವದ ಸಂಧರ್ಬದಲ್ಲಿ ಮಹಿಳಾ ಸದಸ್ಯರಿಂದ ಕೋಲಾಟ ಮಧ್ವಾಚಾರ್ಯ ಸಂಕೀರ್ತನೆ, ಸಾಮೂಹಿಕ ಪಾರಾಯಣವಾದ್ಯ ಮೇಳ ನಡೆಯಿತು. ಮಧ್ವನವಮಿ ಅಂಗವಾಗಿ ಬೆಳಿಗ್ಗೆ ಅಷ್ಟೋತ್ತರ , ಪಂಚಾಮೃತ ಅಭಿಷೇಕ.., ಪಂಚಬೃAದಾವನಗಳಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.ರ ಉಪನ್ಯಾಸ, ಮಹಾಮಂಗಳಾರತಿ ಜರುಗಿದವು. ಸಕಲ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ನಡೆಯಿತು. ಮಠದ ಅರ್ಚಕರಾದ ಕೆ.ಪಾಂಡುರAಗಾಚಾರ್ಯ ಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು. ಎಲ್ಲಾ ಕಾರ್ಯಕ್ರಮಗಳು ಮಠದ ವ್ಯವಸ್ಥಾಪಕ ರಾದ ಅಶೋಕ್ ಕುಲಕರ್ಣಿಯವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಜರುಗಿದವು.
ಈಸಂರ್ಧದಲ್ಲಿ ಮಠದ ಭಕ್ತಾಧಿಗಳಾದ ಅರಳಿಕಟ್ಟಿ ಶ್ರೀನಿವಾಸ ಆಚಾರ್ಯ, ಬಿ.ಅನಂತಾಚಾರ್ಯ, ಹೆಚ್.ವೇಣುಗೋಪಾಲ್, ಎಂ.ಭೀಮರಾವ್ ಕುಲಕರ್ಣಿ,ವೈ.ಸುರೇಶ್,ಜಿ.ಎಂ.ಹರಿ,,ಎ.ಕೃಷ್ಣ,ಲೋಕೇಶ್ ಜಿ.ಎಂ.ಗೋಪಾಲಕೃಷ್ಣ,ಸಮೀರ ಸಿಂಹ, ವೈ.ರಮೇಶ್ ವಾದಿರಾಜ ಹತ್ತಿಬೆಳಗಲ ಕೃಷ್ಣಮಾಚಾರಿ ಹಾಗೂಶ್ರೀಮತಿ ವಂದನಾ ಕುಲಕರ್ಣಿ,ಸುಮಾ, ಚಂದ್ರಿಕಾ ಟೀಚರ್, ಶಶಿಕಲಾ ರೌಡೂರ,ಜಿ.ಎಂ.ಸುಗುಣ,ಪರಿಮಳ,ಪರಿಮಳ ಜನಕ,ಮೇಘ ಕಲ್ಯಾಣಿ, ಉಷಾ ಬಾಯಿ,ಉಮಾ ನಾಡಗೌಡರ್,ಕೆ.ಎಸ್.ವಾಣಿ ರಮಾಬಾಯಿ, ರತ್ನಮಾಲಾ ಮತ್ತು ಹಲವಾರು ಭಕ್ತಾಧಿಗಳು ಭಾಗವಹಿಸಿದ್ದರು.
0 Comments