ಮಧುಗಿರಿ: ನಾಗರಿಕ ಸಮಾಜದ ನಿರ್ಮಾಣದಲ್ಲಿ ಸವಿತಾ ಸಮಾಜದ ಕೊಡುಗೆ ಅಪಾರ ಎಂದು ಭೂಮಾಪನ ಇಲಾಖೆಯ ಎನ್.ಸಿ. ಲೋಕೇಶ್ ತಿಳಿಸಿದರು.
ತಾಲೂಕಿನ ಪುರವರ ಹೋಬಳಿ ಹುಣಸವಾಡಿ ಗ್ರಾಮದಲ್ಲಿ ಮಧುಗಿರಿ ತಾಲೂಕು ಸವಿತಾ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ತುಳಿತಕ್ಕೊಳಗಾದ ತಳಸಮುದಾಯಗಳಲ್ಲಿ ಸವಿತಾ ಸಮಾಜವು ಒಂದು. ಸಮಾಜದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಒಗ್ಗಟ್ಟಿನಿಂದ ಸಮಾಜದ ಏಳ್ಗೆಗೆ ದುಡಿಯಬೇಕು ಎಂದರು.
ಬರಹಗಾರ ಈಶ್ವರ ಪ್ರಸಾದ್ ಮಾತನಾಡಿ ಸವಿತಾ ಸಮಾಜವು ಹಿಂದುಳಿದಿದ್ದು , ಯುವಕರು ಜಾಗೃತರಾಗಿ ಸಮಾಜವನ್ನು ಒಗ್ಗೂಡಿಸಬೇಕು. ಸರ್ಕಾರಗಳು ಈ ಸಮಾಜದ ಅಭಿವೃದ್ಧಿಗೆ ವಿಶೇಷ ಪ್ಯಾಕೆಜ್ ನೀಡಬೇಕು . ಜಾತಿನಿಂದನೆ ವಿರುದ್ದ ಕಠಿಣ ಕ್ರಮಗಳನ್ನು ರೂಪಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸಮಾಜದ ಬಡವರಿಗೆ ಅರ್ಹರಿಗೆ ತಲುಪಿಸಬೇಕು ಎಂದರು.
ಸವಿತಾ ಸಹಕಾರ ಸಂಘದ ಅಧ್ಯಕ್ಷ ಟಿ ಆರ್ ಶಿವಕುಮಾರ್ ಮಾತನಾಡಿ ಸವಿತಾ ಸಮಾಜವು ಇತರ ಎಲ್ಲಾ ವರ್ಗದ ಜನರಿಗೂ ಅವಶ್ಯಕವಾಗಿರುವ ಸಮಾಜವಾಗಿದೆ. ಆದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರ ಹಿಂದುಳಿದಿದೆ. ಕುಲವೃತ್ತಿಯನ್ನೇ ನಂಬಿ ಬದುಕುತ್ತಿರುವ ನಾವು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕುಟುಂಬದ ಪ್ರತಿಯೊಬ್ಬರೂ ಸಮಾಜದ ಮತ್ತು ಸಹಕಾರ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಿಟ್ರಹಳ್ಳಿ ಶ್ರೀನಿವಾಸ್, ಲಕ್ಷ್ಮೀಪತಿ, ಡಿ. ಕೃಷ್ಣಪ್ಪ, ಗೌರಿಬಿದನೂರು ಜಿ.ಡಿ.ಶಿವಕುಮಾರ್, ನಾಗೇಶ್, ನಾಥಪ್ಪ, ಮಾರುತಿ, ರಂಜಿತ್ ಕುರುಡುಗಾನಹಳ್ಳಿ, ರಮೇಶ್.ಡಿ, ಮಾರುತಿ ಪ್ರಸಾದ್, ವೆಂಕಟೇಶ್, ನರಸಿಂಹ, ಗರಣಿ ಚಂದ್ರು, ಅನಂತರಾಜು, ರಮೇಶ್ ಶಿವನಗೆರೆ, ನವೀನ್ , ಮೋಹನ್ ಕುಮಾರ್, ನರೇಂದ್ರ, ರಾಘವೇಂದ್ರ, ಗಿರಿ, ಮತ್ತಿತರರು ಹಾಜರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ

0 Comments