ಅಶಕ್ತ ಆರೋಪಿಗಳಿಗೆ ಉಚಿತವಾಗಿ ಕಾನೂನಾತ್ಮಕ ಸಹಾಯ
ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲೀಗಲ್ ಸರ್ವೀಸ್ ಕ್ಲಿನಿಕ್ ಆರಂಭ
ಈ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸತೀಶ ಜೆ.ಬಾಳೆ ಮತ್ತಿತರರು ಇದ್ದರು.
ಲೀಗಲ್ ಸರ್ವಿಸ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪುಷ್ಪಾಂಜಲಿದೇವಿ ಅವರು ನ್ಯಾಯಾಲಯದ ಪ್ರಕರಣಗಳಲ್ಲಿ ಸಂಭಾವನೆ ನೀಡಲು ಅಶಕ್ತರಾಗುವ ಆರೋಪಿಗಳಿಗೆ ಉಚಿತವಾಗಿ ಕಾನೂನಾತ್ಮಕವಾಗಿ ವಾದ ಮಾಡಲು ಸಹಾಯವಾಗಲಿ ಎನ್ನುವ ಉದ್ದೇಶದಿಂದ ಲೀಗಲ್ ಸರ್ವಿಸ್ ಕ್ಲಿನಿಕ್ ಆರಂಭಿಸಲಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪ್ಯಾನೆಲ್ ವಕೀಲರನ್ನು ನೇಮಿಸಲಾಗುತ್ತಿದ್ದು,ಈ ವಕೀಲರು ಸಂಭಾವನೆ ನೀಡಲು ಅಶಕ್ತರಾಗಿರುವ ಆರೋಪಿಗಳ ಪರ ನ್ಯಾಯಾಲಯದಲ್ಲಿ ವಾದ ಮಾಡಲಿದ್ದಾರೆ ಎಂದರು.
ಇದರಿAದ ಆರೋಪಿಗಳಿಗೆ ಹೆಚ್ಚಿನ ಸಹಾಯವಾಗಲಿದೆ ಮತ್ತು ಶೀಘ್ರದಲ್ಲಿಯೇ ಬಳ್ಳಾರಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಲೀಗಲ್ ಸರ್ವಿಸ್ ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಆರೋಪಿಗಳಿಗೆ ಈ ಸಮಿತಿಯ ವಕೀಲರು ಉಚಿತವಾಗಿ ಅವರ ಪರ ವಾದ ಮಾಡುವುದಾಗಿದೆ ಮತ್ತು ಸಾಮಾನ್ಯ ಜನರು ನ್ಯಾಯಾಲಕ್ಕೆ ಅಲೆದಾಡುವುದು ಕಷ್ಟವಾಗಿದ್ದು,ಇದರಿಂದ ಅನುಕೂಲವಾಗಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 21 ಪೊಲೀಸ್ ಠಾಣೆಗಳಿದ್ದು, ಸಾಮಾನ್ಯ ಜನರು ತಾವು ಮೊಕದ್ದಮೆ ಹೂಡಿದ ಪೊಲೀಸ್ ಠಾಣೆಯಲ್ಲಿಯೇ ವಕೀಲರನ್ನು ನೇಮಿಸಿಕೊಳ್ಳಬಹುದು ಎಂದು ತಿಳಿಸಿಕೊಟ್ಟರು ಮತ್ತು ಕಾನೂನಿನಾತ್ಮಕ ಹಕ್ಕುಗಳನ್ನು ತಿಳಿದುಕೊಳ್ಳಲು ಒಂದು ಉತ್ತಮ ಮಾರ್ಗವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
0 Comments