Ticker

6/recent/ticker-posts

Ad Code

Responsive Advertisement

ರೋಟರಿ ಸಂಸ್ಥೆ ಕ್ಷೇತ್ರದಲ್ಲಿ ಉತ್ತಮವಾದಂತಹ ಕೆಲಸಗಳನ್ನು ಮಾಡುತ್ತಿದೆ

 ಮಧುಗಿರಿ - ರೋಟರಿ ಸಂಸ್ಥೆ ಕ್ಷೇತ್ರದಲ್ಲಿ ಉತ್ತಮವಾದಂತಹ ಕೆಲಸಗಳನ್ನು ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.

ತಾಲೂಕಿನ ಸಿದ್ದಾಪುರ ಗೇಟ್ ಬಳಿ ಇರುವ ಶ್ರೀ ಸಾಯಿ ಸಾಕ್ಷಿ ಗಣಪತಿ ವೃದ್ಧಾಶ್ರಮದಲ್ಲಿ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಯೋವೃದ್ದರಿಗೆ ಕಂಬಳಿ ವಿತರಣಾ ಕಾರ್ಯಕ್ರಮದಲ್ಲಿ ಕಂಬಳಿಗಳನ್ನು ವಿತರಿಸಿ ಮಾತನಾಡಿದ ಅವರು, ಕಷ್ಟದಲ್ಲಿರುವವರಿಗೆ ನೆರವು ನೀಡುವುದು ಮಾನವ ಧರ್ಮ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯವರು ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡವರಿಗೆ ಹಾಗೂ ನಿರ್ಗತಿಕರಿಗೆ ಆಸರೆಯಾಗಿ ನಿಂತಿರುವುದು ಶ್ಲಾಘನೀಯ ಎಂದರು.

ಶ್ರೀ ಸಾಯಿ ಸಾಕ್ಷಿ ಗಣಪತಿ ವೃದ್ಧಾಶ್ರಮಲ್ಲಿ ಅಡುಗೆ ಕೋಣೆಗೆ ಬೇಕಾದ ಶೀಟ್‍ಗಳನ್ನು ಕೊಡಿಸಲಾಗುವುದು ಎಂದ ಅವರು, ಅವಶ್ಯಕತೆ ಇರುವ ಮೂಲಭೂತ ಸೌಕರ್ಯ ಒದಗಿಸಲು ನಾನು ಸಹಕಾರ ನೀಡುತ್ತೇನೆ ಎಂದರು.

ರೋಟರಿ ಅಧ್ಯಕ್ಷ ಜಯರಾಮಯ್ಯ ಮಾತನಾಡಿ ನಮ್ಮ ಸಂಸ್ಥೆ ವತಿಯಿಂದ ಅನೇಕ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ಈರಣ್ಣ, ತಾ.ಪಂ ಮಾಜಿ ಸದಸ್ಯ ಸೊಸೈಟಿ ರಾಮಣ್ಣ, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ವೆಂಕಟರಾಮು, ಶಿವರುದ್ರಪ್ಪ, ಕರಿಯಣ್ಣ, ವೆಂಕಟೇಶ್, ಲತಾ ನಾರಾಯಣ್, ಮುಖಂಡರುಗಳಾದ ನಂಜುಂಡರಾಜು, ಮಂಜುನಾಥ್, ಅನಾಥಾಶ್ರಮ ವ್ಯವಸ್ಥಾಪಕಿ ಶಾರದಾ ಹಾಗೂ ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement