Ticker

6/recent/ticker-posts

Ad Code

Responsive Advertisement

ಹರಿನಾಮ ಸಂಕೀರ್ತನಾ ಕಾರ್ಯಕ್ರಮ: ಭಕ್ತರ ಗಮನ ಸೆಳೆದ ಗಾಯನ

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಪೂರ್ಣಪ್ರಜ್ಞ ಬಡಾವಣೆಯ ಕಲ್ಪವೃಕ್ಷ ಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ  ಸನ್ನಿಧಾನದಲ್ಲಿ  ಜನವರಿ 6 ರಂದು ಏರ್ಪಡಿಸಿದ್ದ "ಹರಿನಾಮ ಸಂಕೀರ್ತನೆ" ಕಾರ್ಯ ಕ್ರಮ ಯಶಸ್ವಿಯಾಗಿ ಜರುಗಿತು.  

ವಿದುಷಿ ಶ್ರೀಮತಿ ಗಾಯತ್ರಿ ರವೀಂದ್ರ ಮತ್ತು ಕು|| ಪೂಜಾ ರವೀಂದ್ರ  ಅವರು ಮೊದಲಿಗೆ ವಿಘ್ನೇಶ್ವರನ ಕೃತಿಯಾದ ಶ್ರೀ ಶ್ಯಾಮಸುಂದರದಾಸರ ರಚನೆ "ಆರಂಭದಲಿ ನಮಿಪೆ ಬಾಗಿ ಶಿರವ"  ಎಂದು ಪ್ರಾರಂಭಿಸಿ,"ಬಂದಾನೋ ರಾಘವೇಂದ್ರ" (ಮಧ್ವೇಶಕೃಷ್ಣ), "ನಮೋ ಪಾರ್ವತಿ" (ಪ್ರಾಣೇಶ ವಿಠ್ಠಲ), "ಜಯ ಜಯ ಸರಸ್ವತಿ" (ಮಹಿಪತಿದಾಸರು), "ರಾಮ ಪಾದವ ತೋರೋ ಮಾರುತಿ" (ಕನಕದಾಸರು), "ಸುಂದರ ಮೂರುತಿ ಮುಖ್ಯಪ್ರಾಣ" (ಪುರಂದರದಾಸರು), "ನಿಲ್ಲೆ ನಿಲ್ಲೆ ಕೊಲ್ಹಾಪುರ ದೇವಿ" (ಭೀಮೇಶಕೃಷ್ಣ), "ಬಾರೋ ಮನೆಗೆ ಬಾರೋ" (ವಿಜಯದಾಸರು), "ರಂಗನಾಥನ ನೋಡುವಾ ಬನ್ನಿ" (ಶ್ರೀಪಾದರಾಜರು), "ಎಂಥವನೇ ಗೋಪಿ", (ಪುರಂದರದಾಸರು), "ಕೊಳಲನೂದು ಇನ್ನೊಮ್ಮೆ" (ಶ್ರೀದವಿಠಲ), "ಬ್ಯಾಡೊಬ್ಬರ ಮನೆಗೆ" (ಪುರಂದರದಾಸರು), "ವಿಠಲ ಪಿಡಿಯೆನ್ನ ಕೈಯ್ಯ" (ಪ್ರಸನ್ನವೆಂಕಟದಾಸರು) ಇನ್ನೂ ಹಲವಾರು ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ವರದೇಶವಿಠಲರ "ಕೌಶಲ್ಯ ವರ" ಎಂಬ ಹಾಡಿನೊಂದಿಗೆ ಇಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರಿಗೆ ವಾದ್ಯ ಸಹಕಾರದಲ್ಲಿ, ವಿದ್ವಾನ್ ಮಧುಸೂದನ್ ಮುತಾಲಿಕ್ (ತಬಲಾ), ವಿದ್ವಾನ್ ಶ್ರೀ ದುಶ್ಯಂತ್ (ಕೀ-ಬೋರ್ಡ್) ನಲ್ಲಿ ಸಾಥ್ ನೀಡಿದರು.


 ವಾದ್ಯ ಸಹಕಾರ : ವಿದ್ವಾನ್ ಶ್ರೀ ಮಧುಸೂದನ ಮುತಾಲಿಕ್ (ತಬಲಾ),  ವಿದ್ವಾನ್ ಶ್ರೀ ದುಶ್ಯಂತ್ (ಕೀ-ಬೋರ್ಡ್) ನಲ್ಲಿ ಸಾಥ್ ನೀಡಿದರು.

Post a Comment

0 Comments

Ad Code

Responsive Advertisement