ಬಳ್ಳಾರಿ ಜ 05. ಬಳ್ಳಾರಿ ನಗರದ ವಿಮ್ಸ್ ಮೆಡಿಕಲ್ ಗ್ರೌಂಡ್, ಮತ್ತು ವೀರಶೈವ ಕಾಲೇಜ್ ಆವರಣದಲ್ಲಿ ಅಭಯ ಫೌಂಡೇಷನ್‌ವತಿಯಿ0ದ ಮೂರುದಿನಗಳ ಕಾಲ ಕ್ರಿಕೆಟ್ ಟೋರ್ನಮೆಂಟ್ ಆಯೋಜಿಸಲಾಗಿದೆ ಎಂದು ಅಭಯಫೌಂಡೇಷನ್‌ನ ಅಧ್ಯಕ್ಷ ರಾಮಕೃಷ್ಣ ರೇಣಿಗುಂಟ್ಲ ಅವರು ಬಳ್ಳಾರಿಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ 7,10 ಮತ್ತು 11 ಮೂರು ದಿನಗಳ ಕಾಲ ಕ್ರಿಕೆಟ್ ಟೋರ್ನಮೆಂಟ್ ಹಮ್ಮಿಕೊಳ್ಳಲಾಗಿದೆ.2ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ವಿಶೇಷವಾಗಿ ಪೋಲಿಸ್, ಡಾಕ್ಟರ್,ಡಿ.ಸಿ ಆಫೀಸ್ ತಂಡ, ತಾಲೂಕು ಕಛೇರಿ ತಂಡ, ಕೆ.ಇ.ಬಿ ತಂಡ , ಸಾರಿಗೆ ಸಂಸ್ಥೆ ಲೆಕ್ಕ ಪರಿಶೋಧಕರು , ಇಂಜಿನಿಯರ್, ಆರ್ಯುವೇದ ತಂಡ , ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, 47 ಮ್ಯಾಚ್ ಗಳು ಇರುತ್ತವೆ.ಅಂತಿಮವಾಗಿ ಗೆದ್ದ ತಂಡಕ್ಕೆ 40 ಸಾವಿರ ನಗದು ಮತ್ತು ಪದಕ ಬಹುಮಾನ, ಹಾಗು ರನ್ನರ್ ತಂಡಕ್ಕೆ 20,000 ನಗದು ಮತ್ತು ಪದಕ ಬಹುಮಾನವಾಗಿ ಕೊಡಲಾಗುತ್ತದೆ, 3 ದಿನಗಳ ಕಾಲ ಭಾಗವಹಿಸಿದ ತಂಡಗಳಿಗೆ ಉಪಾಹಾರ, ಟೀ, ಬಿಸ್ಕೆಟ್ ಕೊಡಲಾಗುತ್ತದೆ ಎಂದರು. ಈಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಜಿಲ್ಲಾಧಿಕಾರಿಗಳು ಪವನ್ ಕುಮಾರ್ ಮಾಲಿಪಾಟಿ, ಅಥಿತಿಗಳಾಗಿ ಸೈದುಲು ಅಡಾವತ್ತ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ ಗ್ರಾಮೀಣ ಶಾಸಕರು, ನಾರಾ ಸೂರ್ಯನಾರಾಯಣ ರೆಡ್ಡಿ. ಮಾಜಿ ಶಾಸಕರು ಆಗಮಿಸಲಿದ್ದಾರೆ ಎಂದರು. ಸಮರೂಪ ಸಮಾರಂಭದಲ್ಲಿ ಬಿ.ಶ್ರೀರಾಮುಲು ಸಾರಿಗೆ ಸಚಿವರು ಜಿ.ಸೋಮಶೇಖರ ರೆಡ್ಡಿ ಶಾಸಕರು ಬಳ್ಳಾರಿ,ಪಾಲನ್ನ ಅಧ್ಯಕ್ಷರು ಬುಡ ಬಳ್ಳಾರಿ,ಡಿ.ಎಲ್. ರಮೇಶ ಗೋಪಾಲ ಚೇರ್ಮನ್ ಕ್ರೃಷ್ಣ ಗ್ರೂಪ್ ಆಫ್ ಕಂಪನೀಸ್,ಸಿ.ಶ್ರೀನಿವಾಸ್ ರಾವ್ ಅಧ್ಯಕ್ಷರು ಬಿ.ಡಿ,ಸಿ ಸಿ,ಅಂಡ್ ಐ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.ಚಕ್ರಪಾಣಿ ಡ್ರೀಮ್ ಇನ್ನೊವೇಷನ್ ಮಾಲಿಕರು,ಸಿ.ಹರಿ ಪ್ರಸಾದ್ ರೆಡ್ಡಿ ಗೌರವಾನ್ವಿತ ಅತಿಥಿಗಳಾಗಿ ಇರಲಿದ್ದಾರೆ ಎಂದು ತಿಳಿಸಿದರು.
ಈಸಂಧರ್ಭದಲ್ಲಿ ರಾಮಕೃಷ್ಣ ರೇಣಿಗುಂಟ್ಲ ಸಂಸ್ಥಾಪಕ ಅಧ್ಯಕ್ಷರು,ನಮ ಕಾರ್ತಿಕ ಉಪಾಧ್ಯಕ್ಷ, ಹೆಚ್.ಆರ್ ಬಾಲನಾಗರಾಜ್ ಸೆಕ್ರೆಟರಿ,ಟಿ.ವೇಣುಗೋಪಾಲ ಗುಪ್ತ ಖಜಾಂಚಿ,ಜೆ.ಎಸ್ ಅಜಯ್ ಸಹ ಕಾರ್ಯದರ್ಶಿ,ಎಸ್.ಜಿತೇಂದ್ರ ಪ್ರಸಾದ್ ಸಹ ಕಾರ್ಯದರ್ಶಿ,ಬಿ.ವಿ ನಾಗಾರ್ಜುನ್ ನಿರೂಪಕರು ಮತ್ತು ಜೇಪೀ ಮಂಜುನಾಥ್, ಅಮನ್ ದೀಪ್ ಸಿಂಗ್,ವೆ0ಕಟೇಶ್ ಹಾಗೂ ಎಲ್ಲಾ ಅಭಯ ಕ್ರಿಕೆಟ್ ತಂಡ ಉಪಸ್ಥರಿದ್ದರು.
0 Comments