ಬೆಂಗಳೂರು : ಯಶವಂತಪುರದಲ್ಲಿ ಸುಮಾರು 26 ವರ್ಷಗಳ ಹಿಂದೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಮಹಿಳೆಯರಿಗಾಗಿಯೇ ಆರಂಭವಾದ ಶ್ರೀ ಮಾತಾ ಮಹಿಳಾ ಕಬಡ್ಡಿ ತಂಡ (ರಿ) ದವರು ಇತ್ತೀಚೆಗೆ ಬಾಗಲಕೋಟ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕುಂಚನೂರಿನಲ್ಲಿ ನಡೆದ ಅಂತರರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ, ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ರಾಜ್ಯದ ಕಬಡ್ಡಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು.
ಚಿತ್ರದಲ್ಲಿ ಗೆದ್ದ ಟ್ರೋಫಿಯೊಂದಿಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ತಂಡದ ನಾಯಕಿ ಕು. ಎಸ್.ಕಾವ್ಯಶ್ರೀ, ಕಬಡ್ಡಿ ತಂಡದ ಅಧ್ಯಕ್ಷರಾದ ಡಾ. ಜಿ.ಎಸ್. ಚೌಧರಿ, ಕಾರ್ಯದರ್ಶಿ ಹಾಗೂ ತರಬೇತುದಾರರಾದ ಎಸ್.ಮಂಜುನಾಥ್, ಆಟಗಾರರಾದ ಕು. ಪವಿತ್ರ ದೇಸಾಯಿ, ಕು. ಪ್ರತಿಭ, ಕು. ವಿಜಯಲಕ್ಷ್ಮೀ, ಕು.ರಕ್ಷಿತ, ಕು.ಮೀನರ್ವ, ಕು.ಭಾವನ ಹಾಗೂ ಇತರೆ ಸದಸ್ಯರನ್ನು ಕಾಣಬಹುದು.
ವಾರ್ತಾ ಜಾಲ
0 Comments