*ಮಕ್ಕಳಲ್ಲಿ ಕಂಡುಬರುವ ಮೂತ್ರದ ಸೋಂಕಿಗೆ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ*
*ಡಾ. ಸೌಮಿಲ್ ಗೌರ್*
ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಜ್ವರ ಬಂದಾಗಲೆಲ್ಲಾ, ಮಗುವಿಗೆ ಕೋವಿಡ್ ಸೋಂಕು ತಗುಲಿದೆಯೇ ಎಂದು ಪೋಷಕರು ಚಿಂತಿಸುತ್ತಾರೆ. ವಾಸ್ತವವಾಗಿ ಜ್ವರವು ಕೇವಲ ಕೋವಿಡ್‌ನ ಲಕ್ಷಣವಾಗಿರದೆ ಮೂತ್ರನಾಳದ ಸೋಂಕು (UTI) ಆಗಿರುವ ಸಾಧ್ಯತೆ ಇರುತ್ತದೆ. ಅನೇಕ ಮಕ್ಕಳು UTIಗೆ ಸರಿಯಾದ ಚಿಕಿತ್ಸೆ ಸಿಗದೆ ವರ್ಷದಲ್ಲಿ ಹಲವಾರು ಬಾರಿ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.
ಮಕ್ಕಳಲ್ಲಿ ಮೂತ್ರದ ಸೋಂಕುಗಳು ಬಾಲ್ಯದಲ್ಲಿ ಸಾಮಾನ್ಯವಾಗಿರುತ್ತದೆ. ಮೂತ್ರದ ಸೋಂಕಿಗೆ 5-6 ವರ್ಷಕ್ಕಿಂತ ಮುಂಚೆಯೇ ಹೆಚ್ಚಿನ ಸಂಖ್ಯೆಯ ಮಕ್ಕಳು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಬರುತ್ತಾರೆ. ಅಂತಹ ಮಕ್ಕಳಲ್ಲಿ, ದೀಕ್ಷಾ (2.5 ವರ್ಷ) ಹೆಣ್ಣು ಮಗು ಕೂಡ ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಸೋಂಕಿಗೆ ಒಳಗಾಗಿತ್ತು. ಆಕೆಯ ಪೋಷಕರಲ್ಲಿ ಸಾಕಷ್ಟು ಗೊಂದಲ ಮತ್ತು ಚಿಂತೆ ಇತ್ತು. ಪ್ರತಿ ಬಾರಿ ಆಕೆಗೆ ವಾಂತಿ ಮತ್ತು ಹೆಚ್ಚಿನ ಜ್ವರ ಕಾಣಿಸಿಕೊಳ್ಳುತ್ತಿತ್ತು. ಪೋಷಕರಿಗೆ ಸರಿಯಾದ ಕಾರಣ ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ತಿಳಿದಿರಲಿಲ್ಲ. ಇನ್ನೊಂದು ಪ್ರಕರಣದಲ್ಲಿ, 10 ತಿಂಗಳ ಸುಗಂಧಾ (ಹೆಸರು ಬದಲಾಯಿಸಲಾಗಿದೆ) ಮೂರು ದಿನಗಳವರೆಗೆ ತೀವ್ರ ಜ್ವರವನ್ನು ಹೊಂದಿದ್ದಳು. ಆಕೆಯನ್ನು ಹತ್ತಿರದ ವೈದ್ಯರು ಪರೀಕ್ಷೆ ಮಾಡಿ ಮೂತ್ರದಲ್ಲಿ ಸೋಂಕನ್ನು ಖಚಿತಪಡಿಸಿದರು. ಆಕೆಗೆ ಮೌಖಿಕ ಸಿರಪ್‌ಗಳೊಂದಿಗೆ ಚಿಕಿತ್ಸೆ ನೀಡಿ, 3-4 ದಿನದಲ್ಲಿ ಅವಳ ಆರೋಗ್ಯ ಸುಧಾರಿಸಿತು. ಆದಾಗ್ಯೂ ಎರಡು ವಾರಗಳ ನಂತರ ಅವಳಿಗೆ ಮತ್ತೆ ಜ್ವರದೊಟ್ಟಿಗೆ ಮೂತ್ರದ ಸೋಂಕು ಕಾಣಿಸಿಕೊಂಡಿತು. ಆಕೆಗೆ ಮೂರು ವರ್ಷ ವಯಸ್ಸಿನವರೆಗೂ ಎರಡು ಬಾರಿ UTI ಸಮಸ್ಯೆ ಕಾಣಿಸಿಕೊಂಡಿತ್ತು. ಪದೇ ಪದೇ ಉಂಟಾದ ಮೂತ್ರದ ಸೋಂಕಿನಿಂದ ಅವಳಿಗೆ ಮೂತ್ರಪಿಂಡದ ಕಾಯಿಲೆ ಕಾಣಿಸಿಕೊಂಡಿತ್ತು. ಆಕೆಯ ಮೂತ್ರಪಿಂಡಗಳು ಗಾಯದ ಗುರುತುಗಳೊಂದಿಗೆ low functionality ಹೊಂದಿದ್ದವು.
ಮೂತ್ರದ ಸೋಂಕಿಗೆ ಒಳಗಾದ ಅನೇಕ ಮಕ್ಕಳ ಪ್ರಕರಣಗಳು ಹೀಗಿವೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜ್ವರದ ಸಾಮಾನ್ಯ ಕಾರಣಗಳಲ್ಲಿ ಮೂತ್ರನಾಳದ ಸೋಂಕು ಸಹ (UTI) ಒಂದು. 10-12 ವರ್ಷದ ಮಕ್ಕಳು ಮತ್ತು ವಿಶೇಷವಾಗಿ ಹದಿಹರೆಯದ ಹುಡುಗಿಯರು ಮತ್ತು ಮಧ್ಯವಯಸ್ಕ ಮಹಿಳೆಯರಲ್ಲಿ ಸೋಂಕು ತುಂಬಾ ಸಾಮಾನ್ಯವಾಗಿದೆ. ಮೂತ್ರದ ಸೋಂಕಿನಿಂದಾಗಿ ಮಕ್ಕಳು ಬೆಳೆದಂತೆ ಅವರ ಮೂತ್ರಪಿಂಡಗಳಲ್ಲಿ ಸಮಸ್ಯೆಗೆ ಕಾರಣವಾಗಬಹುದು ಮತ್ತು ಮೂತ್ರಪಿಂಡದ ಕಾರ್ಯಚಟುವಟಿಕೆಗಳ ಕ್ಷೀಣತೆಗೆ ಕಾರಣವಾಗುತ್ತದೆ.
ಮೂಲ ಕಾರಣದ ವಿಶ್ಲೇಷಣೆ ಅಗತ್ಯ.
UTI ನ ಪ್ರತಿಯೊಂದು ಪ್ರಕರಣಗಳಲ್ಲಿ , ಮಕ್ಕಳ ಮೂತ್ರಪಿಂಡದ ಕಾಯಿಲೆಗಳ ಬಗ್ಗೆ ತರಬೇತಿ ಪಡೆದ ಮಕ್ಕಳ ವೈದ್ಯರಾದ ಪೀಡಿಯಾಟ್ರಿಕ್ ನೆಫ್ರಾಲಜಿಸ್ಟ್‌ಗಳಿಂದ ಪರೀಕ್ಷೆಗೆ ಒಳಪಡಿಸಬೇಕು. ಮಕ್ಕಳ ಕಿಡ್ನಿಯಲ್ಲಿ ಶಾಶ್ವತ ಹಾನಿಯಾಗದಂತೆ ತಡೆಯುವುದು ಇದರ ಉದ್ದೇಶ. ರೈನ್‌ಬೋ ಮಕ್ಕಳ ಆಸ್ಪತ್ರೆಯಲ್ಲಿ, UTI ಸಮಸ್ಯೆಯಿಂದ ದಾಖಲಾಗಿರುವ ಎಲ್ಲಾ ಮಕ್ಕಳ ಪ್ರತಿ ಪ್ರಕರಣದ ಆಳವಾದ ಮೂಲ ಕಾರಣ ಪರೀಕ್ಷೆ ಮಾಡುವ ಪೀಡಿಯಾಟ್ರಿಕ್ ನೆಫ್ರಾಲಜಿಯ ತಜ್ಞರ ತಂಡ ಲಭ್ಯವಿದೆ. ಕಳೆದ 3 ವರ್ಷಗಳಲ್ಲಿ ರೇನ್‌ಬೋ ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ನೆಫ್ರಾಲಜಿ ಘಟಕದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 685 ಮಕ್ಕಳನ್ನು ಮೂತ್ರದ ಸೋಂಕಿನೊಂದಿಗೆ ದಾಖಲಾಗಿದ್ದರು. ಅಂತಹ ಮಕ್ಕಳಲ್ಲಿ ಸುಮಾರು 41 ಪಿಸಿಗಳು ವೆಸಿಕೌರೆಟೆರಿಕ್ ರಿಫ್ಲಕ್ಸ್ ಅನ್ನು ಹೊಂದಿದ್ದವು. ನಂತರ ಬಹುತೇಕ ಎಲ್ಲಾ ಮಕ್ಕಳಿಗೂ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು.
ಯುಟಿಐ ಚಿಕಿತ್ಸೆ
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣುವ ಮೂತ್ರದ ಸೋಂಕನ್ನು ಹಾನಿಕಾರಕ ಸೋಂಕುಗಳಾಗಿ ನೋಡಬೇಕು. ಇದರಿಂದ ಮೂತ್ರಪಿಂಡಗಳು ಊದಿಕೊಳ್ಳಬಹುದು, ಹೆಚ್ಚಿನ ಡಬ್ಲ್ಯೂಬಿಸಿ ವಾಲ್ಯೂ, ಹೆಚ್ಚಿನ ಸಿಆರ್‌ಪಿ ಮಟ್ಟಗಳನ್ನು ಉಂಟುಮಾಡಬಹುದು. ಮಕ್ಕಳು ಸರಿಯಾಗಿ ಆಹಾರ ಸೇವನೆ ಮಾಡದೇ ಇರುವುದು, ಹೆಚ್ಚಿನ ಜ್ವರ ಮತ್ತು ವಾಂತಿಯಿಂದ ಮಕ್ಕಳನ್ನು ಅಸ್ವಸ್ಥಗೊಳಿಸಬಹುದು. ಅಂತಹ ಸಂದರ್ಭಗಳಲ್ಲಿ ಮೂತ್ರದ ಸೋಂಕನ್ನು 5-7 ದಿನಗಳ ಅವಧಿಗೆ ಇಂಜೆಕ್ಷನ್ ಮೂಲಕ ಆಂಟಿಬಯೋಟಿಕ್ ನೀಡಬೇಕು. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಸೌಮ್ಯ ಮೂತ್ರದ ಸೋಂಕನ್ನು ಮೌಖಿಕವಾಗಿ ಆಂಟಿಬಯೋಟಿಕ್ ನೀಡುವ ಮೂಲಕ ಚಿಕಿತ್ಸೆ ನೀಡಬಹುದು.
ಮಕ್ಕಳಲ್ಲಿ ಮೂತ್ರದ ಸೋಂಕನ್ನು ತಡೆಗಟ್ಟುವುದು ಹೇಗೆ?
ಮಲಬದ್ಧತೆಯನ್ನು ತಡೆಗಟ್ಟುವುದು ಮತ್ತು ಮೂತ್ರವನ್ನು ದೀರ್ಘಕಾಲದವರೆಗೆ ಮಾಡದೇ ಇರುವುದನ್ನು ತಡೆಯುವುದು ಮುಂತಾದ ಕೆಲವು ಮುನ್ನೆಚ್ಚರಿಕೆಗಳು ಅತ್ಯಗತ್ಯ. ಲಿಬರಲ್ ದ್ರವಗಳ ಸೇವನೆ, ಜನನಾಂಗದ ನೈರ್ಮಲ್ಯ ಮತ್ತು ನಿಯಮಿತ ಆಹಾರಕ್ರಮವನ್ನು ಕಾಪಾಡಿಕೊಳ್ಳುವುದು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.
UTI ಬಗ್ಗೆ ಇರುವ ಸುಳ್ಳು ನಂಬಿಕೆ:
ಮೂತ್ರದ ಸೋಂಕುಗಳು ಸಾರ್ವಜನಿಕ / ಸಾಮಾನ್ಯ ಶೌಚಾಲಯಗಳನ್ನು ಬಳಸುವುದರಿಂದ ಅಥವಾ ಡೈಪರ್ ಗಳನ್ನು ಬಳಸುವುದರಿಂದ ಉಂಟಾಗುವುದಿಲ್ಲ. ಇವುಗಳ ಬಗ್ಗೆ ಹಲವಾರು ಸಂಶೋಧನೆ ನಡೆದಿದೆ. ಯಾವ ತಜ್ಞರು ಸಹ ಇದನ್ನು ಒಪ್ಪಿಲ್ಲ. ಯಾವುದೇ ವೈಜ್ಞಾನಿಕ ಸಂಶೋಧನೆಯು ಸಾಬೀತುಪಡಿಸಿಲ್ಲ. ಡೈಪರ್ ಗಳನ್ನು ನಿಯಮಿತ ಅವಧಿಯಲ್ಲಿ ಆಗಾಗ್ಗೆ ಬದಲಾಯಿಸಬೇಕು. UTI ಮಕ್ಕಳಲ್ಲಿ ಸಾಂಕ್ರಾಮಿಕ ರೋಗವಲ್ಲ ಮತ್ತು ಶಾಲೆಗಳು ಅಥವಾ ಮನೆಯಲ್ಲಿ ಸಾಮಾನ್ಯ ವಾಶ್ ರೂಮ್ ಬಳಸುವುದರಿಂದ ಹರಡುವುದಿಲ್ಲ
ಪ್ರಮುಖ ಸಂದೇಶಗಳು
• 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೂತ್ರಪಿಂಡಗಳಿಗೆ ಹಾನಿಯಾಗದಂತೆ ಮೂತ್ರದ ಸೋಂಕಿನ ಪ್ರತಿಯೊಂದು ಬಾರಿಯೂ ಸರಿಯಾಗಿ ಮತ್ತು ಸಂಪೂರ್ಣವಾಗಿ ಚಿಕಿತ್ಸೆ ನೀಡಬೇಕು.
0 Comments