Ticker

6/recent/ticker-posts

Ad Code

Responsive Advertisement

ಸವಾಲನ್ನು ಸ್ವೀಕರಿಸಿ, ಸಮರ್ಥವಾಗಿ ಎದುರಿಸಿ: ಶ್ರೀನಾಡೋಜ ಮಹೇಶ್ ಜೋಶಿ

ಸವಾಲನ್ನು ಸ್ವೀಕರಿಸಬೇಕು ಮತ್ತು ಸಮರ್ಥವಾಗಿ ಎದುರಿಸಬೇಕು. ಆಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಶ್ರೀ ನಾಡೋಜ ಮಹೇಶ್ ಜೋಶಿ ಯವರು ಅಭಿಪ್ರಾಯಪಟ್ಟರು.



ಶ್ರೀ ಮಹೇಶ್ ಜೋಶಿಯವರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯವರು ಆಯೋಜಿಸಿದ್ದ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಮಾತನಾಡುತ್ತಿದ್ದರು. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.  ಧ್ಯೆರ್ಯವಾಗಿ ಮುನ್ನಡೆಯಿರಿ.  ಧನಾತ್ಮಕವಾಗಿ ಚಿಂತಿಸಿ.  ಪ್ರತಿಸೋಲನ್ನು ಸವಾಲಾಗಿ ಸ್ವೀಕರಿಸಿ, ಸಮರ್ಥವಾಗಿ ಮುನ್ನೆಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ  ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಒಕ್ಕೂಟ ‘ಪ್ರಗತಿ’ ಯವರು ಹೊರತಂದ ‘ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರುಗಳು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು’ ಇ-ಪುಸ್ತಕವನ್ನು ಬಿಡುಗಡೆ ಮಾಡಿದರು. ಗಣರಾಜ್ಯೋತ್ಸವದ ಅಂಗವಾಗಿ ಸಂಸ್ಥೆ ಏರ್ಪಡಿಸಿದ್ದ ‘ಗಣರಾಜ್ಯೋತ್ಸವ ರಸಪ್ರಶ್ನೆ’ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಶ್ರೀ ವೆಂಕಟೇಶ ಶೇಷಾದ್ರಿ, ಉಪನ್ಯಾಸಕರಾದ ಶ್ರೀ ವೆಂಕಟೇಶ್ ಬಾಬು, ಶ್ರೀಮತಿ ಅನುಶ್ರೀ, ರಾಷ್ಟ್ರೀಯ ರುಡ್ ಸೆಟ್ ಅಕಾಡೆಮಿಯ ಶೀ ಜಗದೀಶ್ ಮೂರ್ತಿ ಮತ್ತು ಟಿ ಗಜೇಂದ್ರರವರು ಉಪಸ್ಥಿತರಿದ್ದರು.

ಎಂ ವೆಂಕಟೇಶ್ ಶೇಷಾದ್ರಿ
ನಿರ್ದೇಶಕರು
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ 9900158885

Post a Comment

0 Comments

Ad Code

Responsive Advertisement