Ticker

6/recent/ticker-posts

Ad Code

Responsive Advertisement

ವಾಹನ ಸವಾರರೇ ನಿಯಮಗಳನ್ನು ಪಾಲಿಸದಿದ್ದರೆ ದಂಡ ಫಿಕ್ಸ್*


*ಇನ್ನು ಮುಂದಿ  ವಾಹನ ಸವಾರರೇ ಸಂಚಾರಿ ನಿಯಮ ಗಳನ್ನು ಪಾಲಿಸದಿದ್ದರೆ ದಂಡ ಫಿಕ್ಸ್*

*ನಗರದಲ್ಲಿನ ಎಲ್ಲಾ ಏಕ ಮುಖ ರಸ್ತೆಗಳಲ್ಲೂ ಸಂಚಾರಿ ಪೋಲೀಸರ ಕಟ್ಟು ನಿಟ್ಟಿನ ಕ್ರಮ*


ಕೋಲಾರ. ಕಳೆದೆರಡು ವರುಷಗಳಿಂದಲೂ ಸಂಚಾರಿ ಪೋಲೀಸರಿದ್ದರೂ ಕ್ಯಾರೇ ಅನ್ನದ ವಾಹನ ಸವಾರರಿಗೆ ಕಳೆದೆರಡು ದಿನಗಳಿಂದ ಸಂಚಾರಿ ಪೋಲೀಸರು  ಕಟ್ಟು ನಿಟ್ಟಾಗಿ ಕ್ರಮ ಜರುಗಿಸುವ ಮೂಲಕ ಎಚ್ಚರಿಕೆಯ ಬಿಸಿ ಮುಟ್ಟಿಸುತ್ತಿದ್ದಾರೆ.

ಅಲ್ಲದೇ ನಗರದಲ್ಲಿ ಕಂಡ ಕಂಡ ಕಡೆಗಳೆಲ್ಲಾ ಕೇಳುವವರೇ ಇಲ್ಲದೇ ಅನಾಥವಾಗಿ ಬಿದ್ದು ನಗೆಪಾಟಲಿಗೆ ಈಡಾಗಿದ್ದ ಬ್ಯಾರೀಕೇಡುಗಳೆಲ್ಲಾ  ನೆನ್ನೆಯಿಂದ ಸಂಚಾರಿ ಪೋಲೀಸರೊಂದಿಗೆ ನಿಂತು ನಮಗೂ ಸಮಯ ಬಂದಿತೆಂದು ಶಿಸ್ತಾಗಿ ಆಯಾ ಕಟ್ಟಿನ  ರಸ್ತೆಗಳಲ್ಲಿ ನಿಂತಿದೆ. 

ಇನ್ನು ಸಂಚಾರಿ ಪೋಲೀಸರಲ್ಲಿ ಒಂದಷ್ಟು ಮಂದಿ ನಾಮಕಾ ವಾಸ್ತೆ ಕೆಲಸ ಮಾಡುತ್ತಾ ಮತ್ತೊಂದಷ್ಟು ಮಂದಿ ಸದ್ಯ ದಿನ ಕಳೆದರೆ ಸಾಕೆಂದು ಬರುತ್ತಿದ್ದವರಿಗೆಲ್ಲಾ ಇತ್ತೀಚೆಗಷ್ಟೇ ಬಂದಿರುವ ಸಬ್ ಇನ್ಸ್ ಫೆಕ್ಟರ್ ಅಣ್ಣಯ್ಯ ನ ವರ ಈ ಶಿಸ್ತಿನ ಕ್ರಮದಿಂದ ಕೆಲವು ಸಂಚಾರಿ ಪೋಲೀಸರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದು  ಬೆಳಗ್ಗೆಯಿಂದಲೇ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ನೋ ಪಾರ್ಕಿಂಗ್ ˌ ಏಕ ಮುಖ ಸಂಚಾರದ ರಸ್ತೆಗಳಲ್ಲಿ ಯಾವುದೇ ಮುಲಾಜು ಇಲ್ಲದೇ ದಂಡ ಹಾಕುತ್ತಿದ್ದಾರೆˌ. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಒಂದಷ್ಟು ಚರ್ಚೆಗಳು ನಡೆಯುತ್ತಿದ್ದರೂ ಸಂಚಾರಿ ನಿಯಮಗಳಲ್ಲಿ ಆಗುತ್ತಿರುವ ಬದಲಾವಣೆಯಿಂದ ಸದ್ಯಪಾದಚಾರಿಗಳು ಸಂಚರಿಸುವಂತಾಗಿದೆಯೆಂದು ಸಾರ್ವಜನಿಕರು ನಿಟ್ಟುಸಿರು ಬಿಡುತ್ತಿದ್ದಾರೆˌ

Post a Comment

0 Comments

Ad Code

Responsive Advertisement