ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರದ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್ ನ್ನು ಏರ್ಪಡಿಸಿದ್ದು ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಕಚೇರಿಗೆ ಬಂದು ಪಡೆದುಕೊಳ್ಳಬಹುದು. ಇಲ್ಲಿ ಯಾವುದೇ ಮಧ್ಯವರ್ತಿಗಳ ಬಳಿ ಹೋಗಬಾರದೆಂದು ತಹಶೀಲ್ದಾರ್ ಪಿಎಂ ಕಮಲಮ್ಮ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ವೇತನ, ವೃದ್ಧಾಪ್ಯ ವೇತನ ವಿಧವಾ ವೇತನ, ಮನಸ್ವಿನಿ ವೇತನ, ಅಂಗವಿಕಲ ವೇತನ,
ಸುಮಾರು 32 ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು. ಹೊಸದಾಗಿ ಪಿಂಚಣಿ ಮಾಡಿಸಲು ಸುಮಾರು 99 ಅರ್ಜಿಗಳು ಬಂದಿದ್ದು ಅದರಲ್ಲಿ 34 ಅನ್ನು ಅಲ್ಲೇ ಮಂಜೂರು ಮಾಡಲಾಯಿತು. ಇನ್ನು ಉಳಿದಂತಹ ಅರ್ಜಿಗಳ ವಿಲೇವಾರಿ ಬಾಕಿ ಇದೆ ಎಂದು ಉಪತಹಶೀಲ್ದಾರ್ ಜಯಲಕ್ಷ್ಮಮ್ಮ ತಿಳಿಸಿದರು.
ಈ ವೇಳೆಯಲ್ಲಿ ರವಿನ್ಯೂ ಇನ್ಸ್ಪೆಕ್ಟರ್ ಸಿದ್ದರಾಜು ಕಂದಾಯ ಇಲಾಖೆಯ ನಟರಾಜು, ಶ್ರೀಧರ್, ನಾಗಭೂಷಣ್, ಶ್ರೀನಿವಾಸ್, ಮೀನಮ್ಮ, ಕಂಪ್ಯೂಟರ್ ಆಪರೇಟರ್ ಸಂಧ್ಯಾ, ಚರಣ್ ಹಾಗೂ ಎಲ್ಲಾ ಗ್ರಾಮ ಸಹಾಯಕರು ಮತ್ತಿತರರಿದ್ದರು.
0 Comments