Ticker

6/recent/ticker-posts

Ad Code

Responsive Advertisement

ಭಕ್ತಿರಸ ಭರಿತ ಗಾಯನ

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ತು ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ   "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

 ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಅವರು, ಮೊದಲಿಗೆ ತಾಳಪಾಕಂ ಅನ್ನಮಾಚಾರ್ಯರ ಕೀರ್ತನೆಗಳಾದ, "ಕೊಮ್ಮಲು ಪಾದ", "ನಾರಾಯಣತೇ ನಮೋ ನಮೋ", "ಲಾಲನುಚು ನುಚೇರು", ಎಂಬ ಕೀರ್ತನೆಗಳನ್ನು ಹಾಡಿದರು.



ನಂತರ ಹರಿದಾಸರ ಪದಗಳಾದ   "ಏನು ಪುಣ್ಯವ ಮಾಡಿ" (ಕರಿಗಿರೀಶ), "ಏನೆಂದು ಕೊಂಡಾಡಿ" (ಕನಕದಾಸರು),  "ಅಭಯಗಿರಿವಾಸ" (ವಿಜಯದಾಸರು), "ಪವಮಾನ ಜಗದ ಪ್ರಾಣ" (ವಿಜಯದಾಸರು), "ಏನು ಕಾರಣದಿಂದ ಮಲಗಿರುವೆಯೋ" (ವಿಜಯದಾಸರು), "ಶ್ಯಾಮ ಸುಂದರಾಂಗ" (ತ್ಯಾಗರಾಜರು) ಮುಂತಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಭಗವಂತನಿಗೆ ಭಕ್ತಿಪೂರ್ವಕವಾಗಿ ಗಾಯನ ಸೇವೆ ಸಲ್ಲಿಸಿದರು. 

ಇವರಿಗೆ ಪಕ್ಕವಾದ್ಯದಲ್ಲಿ, ಕೀ-ಬೋರ್ಡ್ ನಲ್ಲಿ ವಿದ್ವಾನ್ ಶ್ರೀ ಅಮಿತ್ ಶರ್ಮಾ, ತಬಲಾದಲ್ಲಿ ವಿದ್ವಾನ್ ಶ್ರೀ ಶ್ರೀನಿವಾಸ ಕಾಖಂಡಕಿ ಅವರು ಸಾಥ್ ನೀಡಿದರು.‌ 

ನಂತರ ಕಲಾವಿದರಿಗೆ  ಪ್ರಸಾದ  ನೀಡಲಾಯುತು.

Post a Comment

0 Comments

Ad Code

Responsive Advertisement