Ticker

6/recent/ticker-posts

Ad Code

Responsive Advertisement

ವಿಜಯನಗರದಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಹೊಸಪೇಟೆ(ವಿಜಯನಗರ ಜಿಲ್ಲೆ),ಜ.26: ವಿಜಯನಗರ ಜಿಲ್ಲಾಡಳಿತದ ವತಿಯಿಂದ 73ನೇ ಗಣರಾಜ್ಯೋತ್ಸವವನ್ನು ಬುಧವಾರ ಸಂಭ್ರಮದಿ0ದ ಆಚರಿಸಲಾಯಿತು.

ಜಿಲ್ಲಾಧಿಕಾರಿಗಳಾದ ಅನಿರುದ್ಧ ಶ್ರವಣ್ ಅವರು ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು.

ದೇಶದ ಇತಿಹಾಸದಲ್ಲಿ ಜನವರಿ 26 ಅತ್ಯಂತ ಮಹತ್ವದ ದಿನವಾಗಿದೆ. ಜನವರಿ 26 ರಂದು ಇಡೀ ಸ್ವತಂತ್ರ ಭಾರತವನ್ನು ‘ಗಣರಾಜ್ಯವೆಂದು’ ಘೋಷಿಸಲಾಯಿತು. ಸದರಿ ದಿನದಂದೇ ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಜಾರಿಗೊಂಡಿತು. 1950 ರ ಜನವರಿ 26 ಸಾರಾನಾಥದಲ್ಲಿರುವ ಅಶೋಕನ ಕಾಲದ ಸಿಂಹ ಶಿಖರವನ್ನು “ಸತ್ಯಮೇವ ಜಯತೆ” ಎಂಬ ಉಪನಿಷತ್ ವಾಕ್ಯದೊಡನೆ ಭಾರತವು ರಾಷ್ಟçಲಾಂಛನವನ್ನಾಗಿ ಸ್ವೀಕರಿಸಲಾಯಿತು ಎಂದರು.

 ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ದತಿಯನ್ನು ಅಳವಡಿಸಿಕೊಂಡ ಈ ಸಂಭ್ರಮದ ಐತಿಹಾಸಿಕ ದಿನದಂದು ಗಣತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಪ್ರಜಾರಾಜ್ಯೋತ್ಸವವನ್ನು ಎತ್ತಿಹಿಡಿದ ಶುಭದಿನ ಎಂದರು. 

 ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ, ಅನೇಕ ಭಾಷೆಗಳನ್ನು ಮಾತನಾಡುವ ಜನರನ್ನು ಹಾಗೂ ವಿವಿಧ ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿರುವುದು ವೈಶಿಷ್ಟö್ಯವಾಗಿದೆ. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ನಮ್ಮ ದೇಶದ ಜನಜೀವನದ ಆಶೋತ್ತರಗಳು ಒಳಗೊಂಡಿವೆ. ಅವುಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ನಾವು ತೊಡಗಿದ್ದೇವೆ. ಭಾರತ ಸಂವಿಧಾನದ ಯಶಸ್ವಿ ಅನುಷ್ಠಾನದ ಫಲ ಜನತೆಗೆ ಸಿಗುತ್ತದೆ. ದೇಶದ ಜನತೆಗೆ ನ್ಯಾಯ, ಸ್ವಾತಂತ್ರö್ಯ, ಸಮಾನತೆ ಮತ್ತು ಬಂಧುತ್ವ ಭಾವನೆ ಒದಗಿಸುವುದು ನಮ್ಮ ಗುರಿಯಾಗಿದೆ. “ಧರ್ಮ ನಿರಪೇಕ್ಷತೆ ನಮ್ಮ ದೇಶದ ನೀತಿಯಾಗಿದ್ದರೆ, ಸಮಾಜವಾದ ನಮ್ಮ ಧ್ಯೇಯವಾಗಿದೆ.”ಎಂದರು.

ಗಣರಾಜ್ಯೋತ್ಸವದ ಮಹತ್ವ ಮತ್ತು ದೇಶದ ವೈವಿಧ್ಯತೆಯ ಅಂಶಗಳನ್ನು ತಮ್ಮ ಸಂದೇಶದಲ್ಲಿ ಪ್ರಸ್ತಾಪಿಸಿದರು. 

 ಭಾರತವನ್ನು ಜಗತ್ತಿನ ಅತ್ಯಂತ ಪ್ರಬುದ್ದ, ಪ್ರಗತಿಪರ, ಭದ್ರ, ಬಲಿಷ್ಟ ರಾಷ್ಟçವನ್ನಾಗಿ ರೂಪಿಸಲು ನಾವೆಲ್ಲಾ ಒಂದಾಗಿ ಪ್ರಯತ್ನಿಸುವುದರ ಜೊತೆಗೆ ಕೋವಿಡ್ – 19 ರೋಗ ಹರಡಿರುವ ಈ ಸಂಧಿಗ್ಧ ಸನ್ನಿವೇಶದಲ್ಲಿಯೂ ನೂತನ ಜಿಲ್ಲೆಯಾಗಿ ಹೊರಹೊಮ್ಮಿದ ಈ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸತತ ಪ್ರಯತ್ನಗಳು ಸಾಗುತ್ತಿವೆ ಮತ್ತು ವಿಜಯನಗರ ಜಿಲ್ಲೆಯ ವಿವಿಧ ಇಲಾಖೆಗಳ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

 ವಿಜಯನಗರ ಜಿಲ್ಲೆಯು ಅತ್ಯಂತ ವಿಶಿಷ್ಟ ಜಿಲ್ಲೆಯಾಗಿದ್ದು, ಐತಿಹಾಸಿಕ, ಪೌರಾಣಿಕ ಹಿನ್ನಲೆಯುಳ್ಳ ನಮ್ಮ ಈ ಜಿಲ್ಲೆ ರಾಜ್ಯದಲ್ಲಿ ನೂತನ ಜಿಲ್ಲೆಯಾಗಿದೆ. ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಹಿನ್ನೆಲೆಯಲ್ಲಿಯೂ ಈ ಜಿಲ್ಲೆಗೆ ಮಹತ್ವದ ಸ್ಥಾನವಿದೆ. ಜಗತ್ತಿನಲ್ಲಿಯೇ ಕೆಲವೇ ಕೆಲವು ವಿಶ್ವ ಪಾರಂಪರಿಕ ತಾಣಗಳಲ್ಲಿ ಹಂಪಿಯ ತಾಣಗಳು ಇರುವುದು ಈ ನಮ್ಮ ನೂತನ ವಿಜಯನಗರ ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ ಎಂದು ವಿವರಿಸಿದ ಡಿಸಿ ಅನಿರುದ್ಧ ಶ್ರವಣ್ ಅವರು ರಾಜ್ಯದಲ್ಲಿಯೇ ವಿಶಿಷ್ಟತೆಯನ್ನು ಹೊಂದಿರುವ ಈ ನೂತನ ವಿಜಯನಗರ ಜಿಲ್ಲೆಯ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿಯ ದಿಟ್ಟ ಹೆಜ್ಜೆಗಳನ್ನು ದಾಖಲಿಸುತ್ತಾ ಮುನ್ನಡೆಯುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ ಜೀರೆ,ಜಿಪಂ ಸಿಇಒ ಹರ್ಷಲ್ ನಾರಾಯಣ ಬೋಯರ್, ಎಸ್ಪಿ ಡಾ.ಅರುಣ ಎಸ್.ಕೆ., ಅಪರ ಜಿಲ್ಲಾಧಿಕಾರಿ ಮಹೇಶಬಾಬು,ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಸೇರಿದಂತೆ ಅನೇಕರು ಇದ್ದರು.

Post a Comment

0 Comments

Ad Code

Responsive Advertisement