Ticker

6/recent/ticker-posts

Ad Code

Responsive Advertisement

ಸ್ವಾಮಿ ವಿವೇಕಾನಂದ ಜಯಂತಿ ಯುವಜನ ದಿನಾಚರಣೆ

ಪ್ರಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಯುಕ್ತ ಕೌಶಲ್ಯ ತರಬೇತಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಐಡಿ ಹಳ್ಳಿ ಸಹಯೋಗದೊಂದಿಗೆಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಪ್ರಾಂಶುಪಾಲರಾದ ಮಂಜುನಾಥ್, ಐಡಿಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ನರಸಿಂಹ ರೆಡ್ಡಿ, ಕೌಶಲ್ಯ ತರಬೇತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕರಾದ ದಿಲೀಪ್

ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಜಯಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳನ್ನು *ಸ್ವಾಮಿ ವಿವೇಕಾನಂದರ ನುಡಿಯಂತೆ* " ಏಳಿ ಯುವಕರೇ ಎದ್ದೇಳಿ" ಎಂಬ ನುಡಿ ಮಾತಂತೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ತರಬೇತಿ ಗಳ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು.

ಕೌಶಲ್ಯ ತರಬೇತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕರಾದ ದಿಲೀಪ್ ರವರು ವಿದ್ಯಾರ್ಥಿಗಳೊಡನೆ ವಿದ್ಯಾಭ್ಯಾಸದ ನಂತರ ಉನ್ನತ ಶಿಕ್ಷಣ ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ವಿವಿಧ ಕೌಶಲ್ಯಗಳು ಪ್ರಾಮುಖ್ಯ ಎಂದು ತಿಳಿಸುತ್ತಾ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವತಿಯಿಂದ M.S.Y.E.P (MULTI SKILLS YOUTH EMPOWERMENT PROGRAMS )ವಿವಿಧ ಕೌಶಲ್ಯಗಳ ಯುವ ಸಬಲೀಕರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಹಲವು ಪ್ರತಿಷ್ಠಿತ ಕಂಪನಿಗಳೊಂದಿಗೆ ವಿದ್ಯಾರ್ಥಿಗಳಿಗೆ *ಉಚಿತ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ ಹಾಗೂ ವೃತ್ತಿಪರ ತರಬೇತಿಗಳ ಕುರಿತು ವಿದ್ಯಾರ್ಥಿಗಳೊಡನೆ ಸಂವಾದವನ್ನು ನಡೆಸಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಆಯೋಜಿಸಿದ್ದರು.



ಸ್ವಾಮಿ ವಿವೇಕಾನಂದರ ಆಶಯದಂತೆ ವಿದ್ಯಾರ್ಥಿಗಳು ಈ ತರಬೇತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು,

ನಂತರ ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕರಾದ ದೀಪಿಕಾ ವೆಂಕಟೇಶ್, ವಿದ್ಯಾರ್ಥಿಯ ತರಬೇತಿ  ಹಾಗೂ ಆಯ್ಕೆ ಪ್ರಕ್ರಿಯೆ ಕೋರ್ಸ್ ಅವಧಿಯ ಪ್ರಯೋಜನಗಳ ಮಾಹಿತಿಯನ್ನು ನೀಡದರು.

ಕಾರ್ಯಕ್ರಮದಲ್ಲಿ ಬಾಲು, ಸಹನಾ, ಜಿಲ್ಲಾ ಶಿಕ್ಷಕರ ಸಂಯೋಜಕರಾದ ರಮ  ಹಾಗೂ ಸಿಬ್ಬಂದಿಗಳಾದ ತನುಜ, ಪೂಜಾ, ಮಾನಸ, ಕಾವ್ಯ, ಚೇತನ್ ಅಂಜಿನಪ್ಪ, ಮತ್ತು ಸ್ಥಳೀಯ ಮುಖಂಡರುಗಳು ಪಂಚಾಯಿತಿ ಸದಸ್ಯರುಗಳು ಹಾಗೂ ಕಾಲೇಜಿನ ಶಿಕ್ಷಕರು  ಮತ್ತಿತರರಿದ್ದರು.

Post a Comment

0 Comments

Ad Code

Responsive Advertisement