Ticker

6/recent/ticker-posts

Ad Code

Responsive Advertisement

ಪೊಲೀಸರ ಸೋಗಿನಲ್ಲಿ ಬಂದು ದರೋಡೆ; 5ಆರೋಪಿಗಳ ಬಂಧನ

31-12-2021 ರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಅಪರಿಚಿತ ಅಸಾಮಿಗಳು ಮನೆ ಬಳಿ ಬಂದು ಪೊಲೀಸರೆಂದು ಹೇಳಿಕೊಂಡು ಮನೆಯೊಳಗೆ ಬಂದು ಮನೆಯಲ್ಲಿದ್ದ ನಗದು ಹಣ ಮತ್ತು ಚಿನ್ನಾಭರಣವನ್ನು ತೆಗೆದುಕೊಂಡು ಪರ‍್ಯಾದಿ ಮಗನನ್ನು ಆರೋಪಿಗಳು ಜೊತೆಯಲ್ಲಿ ಕರೆದುಕೊಂಡು ಹೋಗಿ ಸುತ್ತಾಡಿಸಿ, ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ, ನಂತರ ಬಿಟ್ಟು ಹೋಗಿರುತ್ತಾರೆ. ಮಹಾಲಕ್ಷಿö್ಮ ಲೇಔಟ್ ಪೊಲೀಸ್ ಠಾಣೆಯಲ್ಲಿ ದರೋಡೆ, ಅಪಹರಣ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇನ್ಸ್ಪೆಕ್ಟರ್, ಮಹಾಲಕ್ಷಿಲೇಔಟ್ ಪೊಲೀಸ್ ಠಾಣೆ ರವರು ಈ ಪ್ರಕರಣದಲ್ಲಿ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ ಸುಮಾರು 16 ಲಕ್ಷ ರೂ. ಬೆಲೆಬಾಳುವ 318 ಗ್ರಾಂ ತೂಕದ ಚಿನ್ನಾಭರಣ ಮತ್ತು 10.3 ಲಕ್ಷ ರೂ. ನಗದು ಹಣ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರವಾಹನಗಳು ಮತ್ತು 1 ಚಾಕುವನ್ನು ವಶಪಡಿಸಿಕೊಳ್ಳುವಲ್ಲಿ ಮಹಾಲಕ್ಷಿö್ಮÃಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ಪರ‍್ಯಾದಿ ಸಂಬ0ಧಿಕರಾಗಿದ್ದು, ಹಣಕಾಸಿನಲ್ಲಿ ಚೆನ್ನಾಗಿದ್ದಾರೆಂದು ತಿಳಿದು ಬಿಸಿನೆಸ್ ಮಾಡಲು ಹಣವನ್ನು ಕೇಳಿರುತ್ತಾನೆ. ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು. ಈ ಸಮಯದಲ್ಲಿ ಹಣವನ್ನು ನೀಡಲು ನಿರಾಕರಿಸಿರುತ್ತಾರೆ. ಇದರಿಂದ ಬೇಸರಗೊಂಡ ಆರೋಪಿಯು ತನ್ನ ಸ್ನೇಹಿತನ್ನು ಸಂಪರ್ಕಿಸಿ, ಅವರುಗಳಿಗೆ ಈ ವಿಚಾರ ತಿಳಿಸಿ, ಅವರುಗಳ ಮುಖಾಂತರ ಈ ಕೃತ್ಯವೆಸಗಿರುತ್ತಾರೆ. ಇಬ್ಬರು ಆರೋಪಿಗಳು ಸುಬ್ರಮಣ್ಯನಗರ ಮತ್ತು ಗಂಗಮ್ಮಗುಡಿ ಪೊಲೀಸ್ ಠಾಣೆಯ ದ್ವಿಚಕ್ರವಾಹನ ಕಳವು ಪ್ರಕರಣದ ಎಂ.ಓ.ಆಸಾಮಿಗಳಾಗಿರುತ್ತಾರೆ. ಮತ್ತೊಬ್ಬ ಆರೋಪಿಯು ಬಾಗಲಗುಂಟೆ ಮತ್ತು ಪೀಣ್ಯ ಪೊಲೀಸ್ ಠಾಣೆ ರೌಡಿ ಆಸಾಮಿಯಾಗಿದ್ದು, ಬಾಗಲಗುಂಟೆ, ಪೀಣ್ಯ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಮಂಡ್ಯ ಜಿಲ್ಲೆ ಪೂರ್ವ ಮತ್ತು ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿರುತ್ತದೆ. ಇನ್ನೋರ್ವ ಆರೋಪಿಯು 2019 ನೇ ಸಾಲಿನಲ್ಲಿ ಯಲಹಂಕ ಪೊಲೀಸ್ ಠಾಣೆಯ ಕೊಲೆ ಪ್ರಕರಣದಲ್ಲಿ ಭಾಗಿ ಜೈಲಿಗೆ ಹೋಗಿ ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. 

ಪ್ರಕರಣದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು ಎಸಿಪಿ, ಮಲ್ಲೇಶ್ವರಂ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ಕಾಂತರಾಜ ಹೆಚ್.ಎಂ., ಪೊಲೀಸ್ ಇನ್ಸ್ಪೆಕ್ಟರ್, ಮಹಾಲಕ್ಷಿö್ಮಲೇಔಟ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಲೇಪಾಕ್ಷಮೂರ್ತಿ ಆರ್.ಜಿ. & ವಿನಾಯಕ ಕೆ. ಪಿಎಸ್‌ಐ ಹಾಗೂ ಅಪರಾಧ ಸಿಬ್ಬಂದಿಗಳಾದ ಶ್ರೀನಿವಾಸ ಮೂರ್ತಿ, ನರೇಶ್, ಚೌಡೇಗೌಡ, ಸಂತೋಷ, ಅಭಯ್ ಕುಮಾರ್, ಚೇತನ್ ಕುಮಾರ್ ರವರು  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


Post a Comment

0 Comments

Ad Code

Responsive Advertisement