ಮಧುಗಿರಿ: ತಾಲೂಕಿನ ಪುರುವರ ಹೋಬಳಿಯ ಪುರವರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 15 ವರ್ಷದಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಡಾ. ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲರಾದ ದತ್ತರಾಜುರವರು ಚಾಲನೆ ನೀಡಿದರು.
ನಂತರ ಮಾತನಾಡಿದ ಡಾ. ಪ್ರಿಯದರ್ಶಿನಿ ಕೋರೋನ ವೈರಸ್ ನಿಂದ ತಪ್ಪಿಸಿಕೊಂಡು ಹೇಗೆ ಜೀವನ ನಡೆಸಬೇಕೆಂಬುದನ್ನ ನಾವು ಅರಿಯದಿದ್ದರೆ ಜೀವನ ತುಂಬಾ ಕಷ್ಟವಾಗುತ್ತದೆ ವ್ಯಾಕ್ಸಿನ್ ಬಗ್ಗೆ ಭಯಬೇಡ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಿರಿ ಎಂದರು.
ಪ್ರಾಂಶುಪಾಲರಾದ ದತ್ತರಾಜ್ ಮಾತನಾಡಿ ಕೋವಿಡ್ ಎರಡನೇ ಅಲೆಬಂದು ಸಾವಿನ ಜೊತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿಗೂ ತುಂಬಾ ಪೆಟ್ಟು ನೀಡಿದೆ ಅದರಿಂದ ಎಚ್ಚರಿಕೆಯಿರಲಿ ಯಾರಿಗೂ ಭಯ ಬೇಡ ವೈರಸ್ ಗಳು ರೋಗನಿರೋಧಕ ಶಕ್ತಿ ಕಡಿಮೆ ಇರೋರಿಗೆ ಮಾತ್ರ ಹೆಚ್ಚು ಕಾಡುತ್ತದೆ ಅಷ್ಟೇ ಆದ್ದರಿಂದ ಎಲ್ಲರೂ ಕೂಡ ಉದಾಸೀನತೆ ಮಾಡದೆ ವ್ಯಾಕ್ಸಿನ್ ಅನ್ನು ಪಡೆಯಿರಿ ಎಂದರು. ಈ ವೇಳೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ್ ಬಾಬು, ಎಸ್ ಡಿ.ಎಂ.ಸಿ ಅಧ್ಯಕ್ಷರಾದ ಎಚ್.ಎಮ್ ಹರಿ ಪ್ರಸಾದ್ ಆರೋಗ್ಯ ಇಲಾಖೆಯ ಹೆಲ್ತ್ ಇನ್ಸ್ಪೆಕ್ಟರ್ ಮಹೇಶ್ವರಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಶಾಲೆಯ ಸಹ ಶಿಕ್ಷಕರು ಮತ್ತಿತರರಿದ್ದರು.
0 Comments