ಬಳ್ಳಾರಿ,ಜ.27: 73ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಬುಧವಾರ ಧ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವ ಶುಭಾಷಯಗಳನ್ನು ನೆರೆದಿದ್ದ ಇಲಾಖೆಯ ಸಿಬ್ಬಂದಿಗೆ ಮತ್ತು ಮಾಧ್ಯಮದವರಿಗೆ ಕೋರಿದ ಅವರು ಗಣರಾಜ್ಯೋತ್ಸವದ ಪ್ರಾಮುಖ್ಯತೆ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳಾದ ವಿ.ಸಿ.ಗುರುರಾಜ್,ವಿಜಯಕುಮಾರ,ರೋಜ್ ಮೇರಿ, ಹನುಮಂತಪ್ಪ,ಮಲ್ಲೇಶಪ್ಪ,ಶ್ರೀಧರ್ ಕವಾಲಿ ಸೇರಿದಂತೆ ಇನ್ನೀತರರು ಇದ್ದರು.
0 Comments