ಬೆಂಗಳೂರು, ಡಿ 30: ‘ಎಂಇಎಸ್’ ನಿಷೇಧ ಮಾಡುವುದಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲ ನಮ್ಮ ಸರಕಾರ ಕೈಗೊಳ್ಳುತ್ತದೆ, ಕರ್ನಾಟಕ ಬಂದ್ ಹಿಂಪಡೆಯುವ0ತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಉದ್ಯಮಿಗಳು, ರೈತರು, ವ್ಯಾಪರಸ್ಥರು ಮತ್ತಿತರರಿಗೆ ತೊಂದರೆ ಆಗುವುದು ಸರಿಯಿಲ್ಲ ಎಂಬುದಾಗಿ ತೀರ್ಮಾನ ಕೈಗೊಂಡ ಕಾರಣ, ನಾಳಿನ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿರೋದಾಗಿ ಕನ್ನಡ ಹೋರಾಟಗಾರರು ಒಕ್ಕೂರಿಲಿನಿಂದ ಘೋಷಿಸಿದ್ದಾರೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಮನವಿಯ ಮೇರೆಗೆ ಕರ್ನಾಟಕ ಬಂದ್ ಹಿಂಪಡೆಯಲಾಗಿದೆ ಎಂದು ಹೋರಾಟಗಾರರು ತಿಳಿಸಿದರು.
ಕರ್ನಾಟಕದ ನೆಲ, ಜಲ, ಭಾಷೆ ಹಾಗು ನಾಗರೀಕರ ರಕ್ಷಣೆಗೆ ರಾಜ್ಯ ಸರ್ಕಾರ ಬದ್ದವಾಗಿದೆ. ಇದಕ್ಕಾಗಿ ಹೋರಾಟಗಾರರಿಗೆ ಧನ್ಯವಾದಗಳು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬಂದ್ ಹಿಂಪಡೆದ ಹೋರಾಟಗಾರರಿಗೆ ಧನ್ಯವಾದಗಳು. ನಾಳೆ ಬಂದ್ ಇರುವುದಿಲ್ಲ, ಎಂದಿನ0ತೆ ಜನಸಂಚಾರ ಹಾಗು ಸಾರ್ವಜನಿಕ ಚೆಟುವಟಿಕೆಗಳು ಎಂದಿನ0ತೆ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಎಂಇಎಸ್ ನಿಷೇಧ ಮಾಡುವುದಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲ ಮಾಡೇ ಮಾಡುತ್ತೇವೆ. ಕರ್ನಾಟಕ ಬಂದ್ ಹಿಂಪಡೆಯುವ0ತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಅದು ಸರಿಯಿಲ್ಲ ಎಂಬುದಾಗಿ ತೀರ್ಮಾನ ಕೈಗೊಂಡ ಕಾರಣ, ನಾಳಿನ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿರೋದಾಗಿ ತಿಳಿಸಿದರು.
Varthajala Daily, Bengaluru
0 Comments