Ticker

6/recent/ticker-posts

Ad Code

Responsive Advertisement

ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಹೆಚ್ಚಳ: ಮುಖ್ಯಮಂತ್ರಿಗಳಿಗೆ ಅಭಿನಂದನೆ

“ರಾಜ್ಯ ಸರ್ಕಾರಿ ನೌಕರರ ಇತಿಹಾಸದಲ್ಲೇ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಮಾಣದ ಹಬ್ಬದ ಮುಂಗಡ ಮೊತ್ತವನ್ನು ಹೆಚ್ಚಳ ಮಾಡಿರುವುದು ಇದೇ ಮೊದಲು ಹಾಗಾಗೀ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿರವರಿಗೆ, ಸಚಿವ ಸಂಪುಟದ ಸಚಿವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಸಂಘವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತದೆ” 

ರಾಜ್ಯ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡವನ್ನು ರೂ. 10,000/- ದಿಂದ 25,000/- ಗಳಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ
         
ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ಹಬ್ಬದ ಮುಂಗಡವನ್ನು ಹೆಚ್ಚಳ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸನ್ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರ ಮೇರೆಗೆ, ಸರ್ಕಾರವು ಆದೇಶ ಸಂಖ್ಯೆ: ಆ.ಇ 8 ಮ.ಕ.ಮು. ದಿನಾಂಕ:14-12-2021 ರಂತೆ  ರಾಜ್ಯ ಸರ್ಕಾರಿ ನೌಕರರ ಹಬ್ಬದ ಮುಂಗಡವನ್ನು ರೂ. 10,000-00 ಗಳಿಂದ ರೂ. 25,000/ಗಳಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುತ್ತದೆ.

ಹಬ್ಬದ ಮುಂಗಡ ಹೆಚ್ಚಳದ ಪ್ರಯೋಜನ

• ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ನೌಕರರು ಹಬ್ಬಗಳ ಸಂದರ್ಭದಲ್ಲಿ ಬಡ್ಡಿರಹಿತವಾಗಿ ಮುಂಗಡವನ್ನು ಪಡೆಯಬಹುದಾಗಿದ್ದು, ಈ ಮುಂಗಡವನ್ನು 10 ಸಮ ಕಂತುಗಳಲ್ಲಿ ಮರುಪಾವತಿಸುವ ಅವಕಾಶ ಕಲ್ಪಿಸಲಾಗಿದೆ.
• ಬಡ್ಡಿರಹಿತ ಹಬ್ಬದ ಮುಂಗಡದ ಹೆಚ್ಚಳದಿಂದ ‘ಡಿ’ ಮತ್ತು ‘ಸಿ’ ದರ್ಜೆ ನೌಕರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

Post a Comment

0 Comments

Ad Code

Responsive Advertisement