ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ನಿಂದ ಕರ್ನಾಟಕ ರತ್ನ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಬೆಂಗಳೂರು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈವಿದ್ಯಮಯ ಕಲಾ ತಂಡಗಳ ಪ್ರದರ್ಶನದ ನಡುವೆ ಆಯೋಜಿಸಿದ್ದ ಸಮಾರಂಭದಲ್ಲಿ ಹತ್ತು ಮಂದಿಗೆ ಕರ್ನಾಟಕ ರತ್ನ ಮತ್ತು 66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿದವರಿಗೆ *ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ಪ್ರಶಸ್ತಿ ನೀಡಿ ಗೌರವಿಸಿದರು.*
ಪ್ರಜಾ ಪ್ರಗತಿ ಪತ್ರಿಕೆಯ ಬೆಂಗಳೂರು ವರದಿಗಾರ
ನಂಜುಂಡಪ್ಪ.ವಿ, ಪತ್ರಕರ್ತರಾದ ಕೆರೆ ಮಂಜುನಾಥ್, ಗೌರೀಶ್ ಅಕ್ಕಿ, ಬೆಂಗಳೂರು ಹುಡುಗ ಸಂಘಟನೆಯ ವಿನೋದ್ ಕರ್ತವ್ಯ, ಬಿ.ಬಿ.ಎಂ.ಪಿಯ ನೌಕರರ ಆರೋಗ್ಯ ಸುಧಾರಣಾ ಯೋಜನೆಯ ನೋಡಲ್ ಅಧಿಕಾರಿ ಡಾ. ಸಂಧ್ಯಾ, ಜಯಕುಮಾರ್ ಮತ್ತಿತರರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. *ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಮಾಜಿ ಅಧ್ಯಕ್ಷ ಡಾ. ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.*
ಸಂಜೆ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಆಯುರ್ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಚಿತ್ರನಟಿ ಶೃತಿ ಅವರು ವಿಧಾನಪರಿಷತ್ ಮಾಜಿ ಸದಸ್ಯ ಡಾ. ಟಿ.ಎ. ಸರವಣ, ಪರಿಶ್ರಮ್ ನೀಟ್ ಅಕಾಡೆಮಿಯ ಎಂ.ಡಿ. ಪ್ರದೀಪ್ ಈಶ್ವರ್ ಮತ್ತಿತರರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ ಮಾತನಾಡಿದ ವಿನೋದ್ ಕರ್ತವ್ಯ ಅವರು, ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ನಗರ ಪ್ರದೇಶದಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆ ಆದರೆ ನಗರವಾಸಿಗಳ ನಮ್ಮ ಭಾಷೆಗೆ ನೀಡುವ ಕೊಡುಗೆ ಹಳ್ಳಿಗಳಿಗೆ ಹೋಲಿಸಿದರೆ ತೀರ ಕಡಿಮೆ.
ಹಾಗಾಗಿ ನಗರ ವಾಸಿಗಳು ನಮ್ಮ ಭಾಷೆಗೆ ಈ ಮೂರು ಸೂತ್ರಗಳನ್ನು ಪಾಲಿಸಿದರೆ ಕನ್ನಡ ಭಾಷೆಗೆ ಚಿಕ್ಕದಾದ ಕೊಡುಗೆ ನೀಡಬಹುದು.
*ಮೊದಲನೆಯದಾಗಿ* ತಿಂಗಳಿಗೆ ಒಂದಾದರೂ ಕನ್ನಡ *ಪುಸ್ತಕ ಕೊಳ್ಳುವುದು,* ಅದರಿಂದ ನಮ್ಮ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದಂದ ತಾಗುವುದು,
*ಏರಡನೆಯದಾಗಿ* ಹೊಸ *ಕನ್ನಡ ಚಿತ್ರಗಳನ್ನು* ಚಿತ್ರಮಂದಿರಕ್ಕೆ ಹೋಗಿ ನೋಡುವುದು, ಅದರಿಂದ ನಮ್ಮ ಭಾಷೆ ಜಗತ್ತಿನಾದ್ಯಂತ ಹರಡುವುದು,
*ಕೊನೆಯದಾಗಿ* ಪ್ರತಿ ದಿವಸ ಯಾವುದಾದರೂ ಒಂದು ಕನ್ನಡ *ದಿನಪತ್ರಿಕೆ ಕೊಳ್ಳುವುದು,* ಅದರಿಂದ ನಮ್ಮ ನಮ್ಮ ಮನೆಯಲ್ಲಿ ಇರುವ ಮಕ್ಕಳು ಸಹ ದಿನಪತ್ರಿಕೆ ಯನ್ನು ಓದಿ ಕನ್ನಡ ದ ನಾಡು ನುಡಿ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವುದು ಹಾಗೆ ನಮ್ಮ ದಿನಪತ್ರಿಕೆಯ ಬೆಳೆಯುವುದು.
ಈ ಮೇಲಿನ ಸೂತ್ರದಿಂದ ನಗರವಾಸಿಗಳ ಸಹ ನಮ್ಮ ಕನ್ನಡ ಭಾಷೆಗೆ ಕೊಡುಗೆ ನೀಡಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಬೆಂಗಳೂರು ಹುಡುಗರು ತಂಡದ ವಿನೋದ್ ಕರ್ತವ್ಯ.
0 Comments