Ticker

6/recent/ticker-posts

Ad Code

Responsive Advertisement

ತ್ರಿವಳಿ ಕೊಲೆ ಪ್ರಕರಣದ ಅಪರಾಧಿಗೆ ಹುಬ್ಬಳ್ಳಿ ನ್ಯಾಯಾಲಯದಿಂದ ಶಿಕ್ಷೆ

ಹುಬ್ಬಳ್ಳಿ, ಡಿಸೆಂಬರ್ 09: ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಕರಣ ಇಡೀ ಧಾರವಾಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಸಿಆರ್‌ಪಿಎಫ್ ಯೋಧನೇ ಫೈರಿಂಗ್ ಮಾಡಿ ಕೊಲೆ ಮಾಡಿದ್ದು ತೀವ್ರ ರ‍್ಚೆಗೆ ಗ್ರಾಸವಾಗಿತ್ತು. ಹನ್ನೊಂದು ರ‍್ಷಗಳ ಹಿಂದೆ ನಡೆದಿದ್ದ ತ್ರಿವಳಿ ಕೊಲೆಯ ಪ್ರಕರಣದ ಅಪರಾಧಿಗೆ ಹುಬ್ಬಳ್ಳಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.


ಮೂವರನ್ನು ಗುಂಡು ಹಾರಿಸಿ ಕೊಲೆಗೈದಿದ್ದ ಅಪರಾಧಿಯಾದ ಸಿಆರಫಿಎಫ್ ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರ ಭಜಂತ್ರಿಗೆ ಜೀವಾವಧಿ ಶಿಕ್ಷೆ, ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೨.೨೦ ಲಕ್ಷ ರೂಪಾಯಿ ದಂಡ ವಿಧಿಸಿ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ೨೦೧೦ ರಲ್ಲಿ ನಡೆದಿದ್ದ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಕೊಲೆಗೆ ಕಾರಣವಾಗಿದ್ದ ಅಪರಾಧಿಗೆ ನ್ಯಾಯಾಲಯ ಕೊನೆಗೂ ಶಿಕ್ಷೆ ನೀಡಿದೆ.

Post a Comment

0 Comments

Ad Code

Responsive Advertisement