Ticker

6/recent/ticker-posts

Ad Code

Responsive Advertisement

ಕವನ ವಾಚನ ಸ್ಪರ್ಧೆ ಮತ್ತು ಕವಿಗೋಷ್ಠಿ ಹಾಗು ಪುಸ್ತಕ ಬಿಡುಗಡೆ

 BTrendz ಸಂಸ್ಥೆ ಮತ್ತು ಅಮೋದ್ ಇನ್ಫೋ ಮೀಡಿಯಾ ಸಂಯುಕ್ತಾಶ್ರೇಯದಲ್ಲಿ ದಿನಾಂಕ 05-12-2021 ರಂದು ಬೆಂಗಳೂರಿನ, ಬಸವನಗುಸಡಿಯಲ್ಲಿ ನಡೆದ ರಾಜ್ಯಮಟ್ಟದ ಕವನ ವಾಚನ ಸ್ಪರ್ಧೆ ಮತ್ತು ಕವಿಗೋಷ್ಠಿ ಹಾಗು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.






  ಬರಹಗಾರಾದ ಶ್ರೀಯುತ ಜಯರಾಮ್ ಫಣಿಯಾಡಿ, ಶ್ರೀಯುತ ರಮೇಶ್ ಎ ಎನ್, ಕವಯಿತ್ರಿ  ಶ್ರೀಮತಿ ಆಶಾ ಮಯ್ಯ, ಸೃಜನಶೀಲ ಬರಹಗಾರಾದ ಶ್ರೀಯುತ ಬಾಹುಬಲಿ ಜಯರಾಜ್ ಅವರು  ಕವಿಗೋಷ್ಠಿ ಚಾಲನೆಯನ್ನು ಮಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಹಿಳಾ ಉದ್ಯಮಿ ಶ್ರೀಮತಿ ರಮ್ಯಾ ಕೃಷ್ಣಪ್ರಸಾದ್  ಹಾಗು ಶ್ರೀಯುತ ಜಯರಾಜ್ ಕುಲಕರ್ಣಿ (ದಾಸವಾಣಿ ಹರಿ) ಅವರು ದೀಪಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 
ಇದೆ ಸಂಧರ್ಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹೆಸರಾಂತ ಹಿರಿಯ ರಂಗ ಕರ್ಮಿ, ಚಲನಚಿತ್ರ ನಟರಾದ ಶ್ರೀಯುತ ಶ್ರೀನಿವಾಸ್ ಪ್ರಭು ಅವರು ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಲೇಖಕರಾದ ಶ್ರೀಯುತ ಸತ್ಯೇಶ್ ಬೆಳ್ಳೂರು, ಕಥಾಗುಚ್ಛ ಸಂಘಟಕರಾದ ಶ್ರೀಯುತ ಗಿರೀಶ್ ಕುಲ್ಕರ್ಣಿ, ಪ್ರತಿಲಿಪಿ ಸಂಪಾದಕರಾದ ಶ್ರೀಯುತ ಅಕ್ಷಯ್ ಬಾಳೆಗೆರೆ ,  ಮತ್ತು ಯಕ್ಷಗಾನ ಕಲಾವಿದೆ, ಕಿರುತೆರೆ ನಟಿ ನಾಗಶ್ರೀ ಜಿ ಎಸ್ ಅವರು ವೇದಿಕೆಯನ್ನು ಅಲಂಕರಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶೈನಾ ಶೆಟ್ಟಿ  ಹಾಗು ಕುಮಾರಿ ಸ್ವಸ್ತಿಕಾ ಶೆಟ್ಟಿ ಅವರು ಮಾಡಿದರು.  
ಅನೇಕ ಹಿರಿಯ ಮತ್ತು ಉದಯೋನ್ಮುಖ ಕನ್ನಡ ಸಾಹಿತಿಗಳು ತಮ್ಮ ಕವನಗಳ ವಾಚನ ಮಾಡಿದರು. ಕಾರ್ಯಕ್ರಮದ ಆಯೋಜಕರಾದ BTrendz ಸಂಸ್ಥೆಯ ಶ್ರೀಯುತ ಹರೀಶ್ ಕುಮಾರ್ ರಾವ್ ಮತ್ತು ಶ್ರೀಯುತ ಇರ್ಫಾನ್  ಹಾಸನ್ ಕುಟ್ಟಿ ಅವರು ಉಪಸ್ಥಿತರಿದ್ದರು. ಶ್ರೀಯುತ ಇರ್ಫಾನ್  ಹಾಸನ್ ಕುಟ್ಟಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕಮ ಮುಕ್ತಾಯಗೊಂಡಿತು.

Post a Comment

0 Comments

Ad Code

Responsive Advertisement