Ticker

6/recent/ticker-posts

Ad Code

Responsive Advertisement

LATEST CRIME : ಗ್ರಾಮ ಲೆಕ್ಕ ಅಧಿಕಾರಿ ಮತ್ತು ಕುಟುಂಬದ ಮೇಲೆ ಹಲ್ಲೆ : ಅರೋಪಿಗಳ ಬಂಧನ.!!

ಗ್ರಾಮ ಲೆಕ್ಕ ಅಧಿಕಾರಿ ಮತ್ತು ಕುಟುಂಬದ ಮೇಲೆ ಹಲ್ಲೆ : 10 ಜನ ಅರೋಪಿಗಳ ಬಂಧನ.!!

ಪೋಲಿಸರ ಕಾರ್ಯದಿಂದ ಅಧಿಕಾರಿ ಕುಟುಂಬಕ್ಕೆ ಸಂಕಷ್ಟ.!! 

  ಬಳ್ಳಾರಿ ಡಿ 04.ಅಕ್ರಮ ಮರಳು ದಂದೆ ತಡೆಯಲು ತಲಮಾಮಿಡಿ ಗ್ರಾಮದ ಹತ್ತಿರ ಮರಳು ವಾಹನಗಳನ್ನು ತಡೆದು ಗ್ರಾಮ ಲೇಕ್ಕ ಅಧಿಕಾರಿ ಆಗಿರುವ  ವೆಂಕಟಸ್ವಾಮಿ ಪ್ರಕರಣ ದಾಖಲೆ ಮಾಡಿದ್ದರು. ಇದನ್ನು ಸಹಿಸದೆ ಇರುವ ಕೆಲವರು ಬಳ್ಳಾರಿ ನಗರದ ಮಿಲ್ಲರ್‌ಪೇಟೆಯಲ್ಲಿ ಇರುವ ಗ್ರಾಮ ಲೆಕ್ಕ ಅಧಿಕಾರಿ ಮನೆಯ ಮೇಲೆ ಮತ್ತು ಕುಟುಂಬದ ಮೇಲೆ ರಾತ್ರಿ 14.ಮಂದಿ ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದರು.  ಬ್ರೂಸ್‌ಪೇಟೆ ಠಾಣೆನಲ್ಲಿ ಪ್ರಕರಣ ದಾಖಲೆ ಆಗಿತ್ತು.

ನಗರದ ಡಿ.ಎಸ್.ಪಿ ರಮೇಶ್ ಕೂಮಾರ್ ನೇತೃತ್ವದಲ್ಲಿ ಪಿಐ ಆರ್.ನಾಗರಾಜ್ ಅವರ ತಂಡ ರಚನೆ ಮಾಡಿದ್ದರು.10 ಜನ ಆರೋಪಿಗಳನ್ನು ಶುಕ್ರವಾರ ಬಂಧನೆ ಮಾಡಿದ್ದಾರೆ.24 ಗಂಟೆ ಒಳಗೆ ಆರೋಪಿತರನ್ನು ಬಂಧಿಸುವ ನಿಟ್ಟಿನಲ್ಲಿ ಪೋಲೀಸರು ಯಶಸ್ವಿ ಆಗಿದ್ದಾರೆ.ಆದರೆ ಹಲ್ಲೆ ಸಮಯದಲ್ಲಿ ಅಧಿಕಾರಿ ಅವರ ಕುಟುಂಬವನ್ನು ರಕ್ಷಣೆ ಮಾಡಿದ ಅವರನ್ನು ಸ್ಥಳೀಯರನ್ನು ಗುರುವಾರ ರಾತ್ರಿ ವಿಚಾರಣೆ ಮಾಡಿದ್ದು, ಅಧಿಕಾರಿ ಕುಟುಂಬಕ್ಕೆ ಮತ್ತಷ್ಟು ಸಂಕಟವನ್ನು ಉಂಟುಮಾಡಿದೆ. ರಕ್ಷಣೆ ಮಾಡಿದ ಅವರುಗಳು ಬೇಸರಕ್ಕೆ ಗುರಿಯಾಗಿ ಇದ್ದಾರೆ.

ರಾತ್ರಿ ಸಮಯದಲ್ಲಿ ಕೆಲವರನ್ನು ತಡ ರಾತ್ರಿ ವರಗೆ ಸ್ಟೇಷನ್‌ನಲ್ಲಿ ಇಟ್ಟುಕೊಂಡು ವಿಚಾರಣೆ ಮಾಡಿದ್ದು, ಕೊನೆಗೆ ರಕ್ಷಣೆ ಮಾಡಿದ ಅವರು ಅಧಿಕಾರಿ ಕುಟುಂಬದ ಅವರುಗೆ ಪೋನ್ ಮಾಡಿ ನಾವು ನಿಮ್ಮಗೆ ಸಹಾಯ ಮಾಡಿದ್ದು ತಪ್ಪಾಗಿ ಇದಿಯಾ, ನಮ್ಮನ್ನು ಸ್ಟೇಷನ್ ಗೆ ಹಾಕಿದ್ದಾರೆ ತಕ್ಷಣವೇ ಬಂದು ಬಿಡುಸುವಂತೆ ಒತ್ತಾಯ ಮಾಡಿದ್ದಾರೆ.

 ಕೊನೆಗೂ ಆಸ್ಪತ್ರೆನಲ್ಲಿ ಇದ್ದ ಅಧಿಕಾರಿ ಕುಟುಂಬದ ಅವರು ಗಾಯಗಳು ಬಂದು ಇವರು ನಮ್ಮ ನೆರವುಗೆ ಬಂದಿದ್ದಾರೆ ಎಂದು ತಿಳಿಸಿದ ಮೇಲೆ ಅವರನ್ನು ಬಿಡುಗಡೆ ಮಾಡಿದ್ದಾರೆ.  ಪೋಲಿಸರು ಏನು ಮಾಡಿದರೂ ಅದೇ ಸತ್ಯ ಎನ್ನುವಂತೆ ಅಗಿದೆ ಎಂದು ಸಾರ್ವಜನಿಕರು ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.  


Post a Comment

0 Comments

Ad Code

Responsive Advertisement