ಮಕ್ಕಳಲ್ಲಿ ಔಷಧಿಗಳಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಮಂಡಿಸಿದ
ಸಿಡಿಸೈಮರ್ ವೈದ್ಯರ ಸಂಶೋಧನಾ ಪ್ರಭಂಧಕ್ಕೆ ಪ್ರಶಸ್ತಿಯ ಗರಿ
-ಡಾ. ಶಿವಮೂರ್ತಿ ಎನ್. shivuindia@gmail.com / 8884328275
ಆಂಟಿಬಯಾಟಿಕ್ಸ್ ಗಳಿಂದ (ಮಿಣಿಜೀವಿಗಳಿಂದಾಗುವ ಸೊಂಕುನಿವಾರಣೆಗೆ ಬಳಸುವ ಔಷಧಗಳು) ಮಕ್ಕಳಲ್ಲಿ ಹೆಚ್ಚಿನ ಅಡ್ಡಪರಿಣಾಮಗಳಾಗಬಹುದು ಎಂದು ಪ್ರತಿಪಾದಿಸುವ ಸಂಶೋಧನಾ ಪತ್ರಕ್ಕೆ ಎರಡನೇ ಪ್ರಶಸ್ತಿಯನ್ನು ಪಡೆದ ಸಿಡಿಸೈಮರ್ ವೈದ್ಯ ಡಾ. ಶಿವಮೂರ್ತಿ ಎನ್ ಸಂತಸ ವ್ಯಕ್ತ ಪಡಿಸುತ್ತಾ "ಮಕ್ಕಳಲ್ಲಿ ಔಷಧಗಳಿಂದಾಗುವ ಅಡ್ಡಪರಿಣಾಮಗಳು" ಎಂಬ ವಿಷಯ (subject) ಬಹಳ ಮುಖ್ಯವಾದುದು. ವೈದ್ಯರು ಔಷಧದಿಂದಾಗುವ ಅಡ್ಡಪರಿಣಾಮಗಳನ್ನು ಕಂಡುಹಿಡಿದು ಚಿಕಿತ್ಸಿಸಬೇಕಾಗಿದೆ. ಮಕ್ಕಳಲ್ಲಿ, ಅದರಲ್ಲೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ. 80% ಕ್ಕೂ ಹೆಚ್ಚು ಅಡ್ಡಪರಿಣಾಮಗಳಾಗುವ ಸಾಧ್ಯತೆ ಇರುತ್ತದೆ. ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕಾದ ಅವಶ್ಯಕತೆ ಇದೆ. ಪ್ರತಿಯೊಂದು ಆಸ್ಪತ್ರೆಯಲ್ಲಿಯೂ "ಪಾರ್ಮಕೋವಿಜಿಲ್ಯಾನ್ಸ್ ವಿಭಾಗ" (ಔಷಧ ಆಡ್ಡಪರಿಣಾಮಗಳ ನಿಗಾಘಟಕ) ತೆರೆಯಬೇಕಾಗಿದೆ. ಔಷಧಗಳಿಂದಾಗುವ ಅಡ್ಡಪರಿಣಾಮಗಳನ್ನು ತಡೆಯಲು ಸೂಕ್ತ ನಿಯಮಾವಳಿಗಳನ್ನೊಳಗೊಂಡ (standard operating procedures) ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸುವ ಅವಶ್ಯಕತೆ ಇದೆ.
ಉ: ನಾವು ಔಷಧಗಳನ್ನು
ಚಿಕಿತ್ಸೆಗಾಗಿ ಬಳಸುತ್ತೇವೆ. ಆದರೆ ಅದು ದೇಹವನ್ನು ಪ್ರವೇಶಿಸಿದಾಗ ದೇಹದ ಎಲ್ಲಾ ಭಾಗಗಳಿಗೂ ತಲುಪುತ್ತದೆ.
ಯಾವುದಾದರೂ ಒಂದು ಭಾಗ ಊನಗೊಂಡಿದ್ದರೆ, ಆ ಭಾಗಕ್ಕೆ ಚಿಕಿತ್ಸೆ ಮಾಡಿದರೆ ಸಾಕು. ಆದರೆ, ರಕ್ತ ಔಷಧವನ್ನು
ದೇಹದ ಎಲ್ಲಾ ಭಾಗಗಳಿಗೆ ತಲುಪಿಸುತ್ತದೆ. ಹಾಗಿದ್ದಾಗ, ಉನಗೊಂಡ ಭಾಗ ಚಿಕಿತ್ಸೆ ಪಡೆದು, ರೋಗವೇನೋ
ವಾಸಿಯಾಗಬಹುದು. ಆದರೆ, ಆರೋಗ್ಯವಂತ ಅಂಗಕೂಡ ಔಷಧವನ್ನು ಪಡೆಯುವುದರಿಂದ, ಬೇಡದ ಪರಿಣಾಮಗಳನ್ನು ಅದು
ಉಂಟುಮಾಡಬಹುದು. ಈ ಪರಿಣಾಮಗಳನ್ನು ನಾವು ಅಡ್ಡಪರಿಣಾಮಗಳೆಂದು ಕರೆಯುತ್ತೇವೆ. ಕೆಲವು ಅಡ್ಡಪರಿಣಾಮಗಳು
ಕಡಿಮೆ ತೊಂದರೆ ಕೊಟ್ಟರೆ, ಇನ್ನೂ ಕೆಲವು ಜೀವಕ್ಕೆ ಅಪಾಯ ತರುವಂತಹವು ಆಗಿರಬಹುದು. ಎಲ್ಲರಿಗೂ ಒಂದೇ
ಪ್ರಮಾಣದ ಕಿರಿಕಿರಿ ಉಂಟುಮಾಡದಿರಬಹುದು. ಕೆಲವರಿಗೆ ಸಹಿಸಬಹುದಾದ ತೊಂದರೆ ಆದರೆ, ಇನ್ನಿತರರಿಗೆ ಜೀವಾಪಾಯ
ತರುಮಂತಹವಾಗಿರಬಹುದು. ಸಾರ್ವಜನಿಕರು ಇದರ ಬಗ್ಗೆ ತಿಳಿದು, ಗುರುತಿಸಿ, ವೈದ್ಯರಿಗೆ ಆದಷ್ಟು ಬೇಗ
ತಿಳಿಸಬೇಕು. ಚಿಕ್ಕದೇ ಆಗಲಿ, ದೊಡ್ಡದೇ ಆಗಲಿ, ಅದನ್ನು ಕಡೆಗಣಿಸದೆ, ಅದರ ಮೇಲೆ ನಿಗಾ ಇಡಬೇಕು.
ಉ: ಹೊರರೋಗಿಗಳಾಗಿ
ಚಿಕಿತ್ಸೆ ಪಡೆದ ಪ್ರತಿ ನೂರು ಮಕ್ಕಳಲ್ಲಿ ಒಬ್ಬರಿಗೆ ಆಡ್ಡಪರಿಣಾಮಗಳಾಗುವ ಸಾದ್ಯತೆ ಇದೆ. ಆಸ್ಪತ್ರೆಯಲ್ಲಿ
ಸಂಭವಿಸುವ ಮರಣಗಳ ಸಂಖ್ಯೆಯಲ್ಲಿ, ಪ್ರತೀ ನೂರು ಸಾವುಗಳಲ್ಲಿ ೨ ಸಾವುಗಳು ಅಡ್ಡಪರಿಣಾಮಗಳಿಂದ ಆಗಿರುವ
ಸಾದ್ಯತೆ ಇದೆ. ಅಂದರೆ,
ಭಾರತದಲ್ಲಿ ದಿನನಿತ್ಯ ಆಸ್ಪತ್ರೆಗಳಲ್ಲಿ ಆಗುವ 4300 ಸಾವುಗಳಲ್ಲಿ 86 ಸಾವುಗಳು ಔಷಧಿಯ
ಆಡ್ಡಪರಿಣಾಮಗಳಿಂದ ಆಗಿರುವ ಸಾದ್ಯತೆ ಇದೆ. ಈ ವಿಚಾರವನ್ನು ಪ್ರತಿಷ್ಠಿತ ವೈದ್ಯಕಿಯ ಮಾಸ ಪತ್ರಿಕೆಗಳು
ಉಲ್ಲೇಖ ಮಾಡಿವೆ. ಹೆಚ್ಚಿನ ಅಡ್ಡಪರಿಣಾಮಗಳನ್ನು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣಬಹುದಾಗಿದೆ.
ಉ: ಮಕ್ಕಳು
ಬೆಳವಣಿಗೆ ಹಂತದಲ್ಲಿ ಇರುವುದರಿಂದ ಅವರ ಅಂಗಾಂಗಳು ಪ್ರಭುದ್ದಾವಸ್ತೆಗೆ ಬಂದಿರುವುದಿಲ್ಲ. ಹಾಗಾಗಿ
ಹೆಚ್ಚಿನ ಔಷಧಿಗಳನ್ನು ಜೀರ್ಣಗೊಳಿಸಿ, ದೇಹದಿಂದ ನಿಷ್ಕ್ರಿಯ ಗೊಳಿಸುವ ಶಕ್ತಿ ಸಂಪೂರ್ಣ ವೃದ್ದಿ ಹೊಂದಿರುವುದಿಲ್ಲ.
ಮೂತ್ರಜನಕಾಂಗ (ಕಿಡ್ನಿ). ಯಕೃತ್ (ಲಿವರ್), ಮೆದುಳು ಗೊಡೆಪದರ (ಬಡ್ ಬ್ರೈನ್ ಬ್ಯಾರಿಯರ್), ಮೂಳೆಗಳು,
ಮತ್ತು ಹಲ್ಲುಗಳು ಇನ್ನೂ ಬೆಳೆಯುವ ಹಂತದಲ್ಲಿರುತ್ತವೆ. ಔಷಧಿಗಳು ವೃದ್ದಿ ಪಡಿಸುವಾಗ ಹೆಚ್ಚಿನ ಪರೀಕ್ಷೆಗಳನ್ನು
ವಯಸ್ಕರಲ್ಲಿ ಮಾಡುತ್ತಾರೆ. ಮಕ್ಕಳಲ್ಲಿ ಮಾರುಕಟ್ಟೆಗೆ ಬಂದಿರದಂತಹ ಔಷಧಗಳನ್ನು ಬಳಸುವಂತಿಲ್ಲ ಮತ್ತು
ಪರೀಕ್ಷೆಗೂ ಬಳಸಲು ಬಹಳಷ್ಟು ನಿರ್ಭಂಧಗಳಿವೆ. ಹೀಗಿರುವಾಗ ಅವರಲ್ಲಾಗುವ ಅಡ್ಡಪರಿಣಾಮಗಳ ಅರಿವು ಯಾರಿಗೂ
ಇರುವುದಿಲ್ಲ. ಮಕ್ಕಳನ್ನು ವಯಸ್ಕರೊಂದಿಗೆ ಸಮೀಕರಣ ಮಾಡಿ ಔಷಧಿಗಳನ್ನು ಬಳಸಬಾರದು. ತುರ್ತುಪರಿಸ್ಥಿತಿಯಲ್ಲಿ
ಬಳಸುವಂತಹ ಸಂಧರ್ಭ ಬಂದರೆ, ಹೆಚ್ಚಿನ ನಿಗಾ ಇಟ್ಟು ಬಳಸಬೇಕಾಗುತ್ತದೆ. ಅಡ್ಡಪರಿಣಾಮಗಳನ್ನು ತ್ವರಿತವಾಗಿ
ಕಂಡುಹಿಡಿದು ಹೆಚ್ಚಿನ ಹಾನಿಯಾಗುವುದನ್ನು ತಡೆಯಲು ಕ್ರಮಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ.
ಉ: ನಿಮಗಾಗಲೇ
ತಿಳಿದಿರುವಂತೆ ಔಷಧಗಳನ್ನು ರೋಗದ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಔಷಧ ಸೇವನೆಯ ನಂತರ, ರೋಗಿಗೆ ಯಾವುದೇ
ಹೊಸ ತೊಂದರೆ ಕಂಡುಬಂದರೆ ಅಥವಾ ಇರುವ ರೊಗಲಕ್ಷಣಗಳು ಉಲ್ಬಣಗೊಂಡರೆ ತಕ್ಷಣ ನಿಮ್ಮ ವೈದ್ಯರಿಗೆ ತಿಳಿಸಬೇಕು.
ಈ ಲಕ್ಷಣಗಳು ಅಡ್ಡಪರಿಣಾಮಗಳಾಗಿರುವ ಸಾದ್ಯತೆ ಹೆಚ್ಚು. ಹಾಗಾಗಿ, ವೈದ್ಯರ ಜೊತೆಗೆ ಸಮಾಲೋಚನೆ ಮಾಡಿ
ಅವರು ಹೇಳಿದ ಕ್ರಮಗಳನ್ನು ಅನುಸರಿಸುವುದು ಉತ್ತಮ. ಅಡ್ಡಪರಿಣಾಮ ಚಿಕ್ಕದಾಗಿದ್ದಾಗಲೇ ಎಚ್ಚರ ವಹಿಸಿದರೆ
ಉತ್ತಮ. ನಿರ್ಲಕ್ಷಿಸಿದರೆ, ಪ್ರಾಣಹಾನಿಯೂ ಆಗುವ ಸಾದ್ಯತೆಗಳಿರುತ್ತವೆ.
ಉ: ಹೌದು. ಔಷಧಗಳಿಂದಾಗುವ
ಹೆಚ್ಚಿನ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು. ಎಲ್ಲಾ ಔಷಧಗಳು ಒಂದಲ್ಲಾ ಒಂದು ರೀತಿಯ ಅಡ್ಡಪರಿಣಾಮಗಳನ್ನು
ಉಂಟುಮಾಡಬಲ್ಲವು. ಹಾಗಾಗಿ ಎಚ್ಚರಿಕೆ ಅಗತ್ಯ. ರೋಗಿಗಳು ಈ ಕೆಳಗೆ ಹೇಳಿದ ಕ್ರಮಗಳನ್ನು ಅನುಸರಿಸಿದರೆ,
ಶೇ. 50 ಕ್ಕಿಂತ ಹೆಚ್ಚು ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು.
b. ವೈದ್ಯರೊಡನೆ
ಚರ್ಚೆಮಾಡಿ, ಔಷಧಗಳನ್ನು ಬಳಸುವ ಬಗೆಯನ್ನು ವೈದ್ಯರಿಂದ ಸರಿಯಾಗಿ ತಿಳಿದುಕೊಳ್ಳುವುದು. ಅವರ ಸಲಹೆಯಂತೆ
ಕ್ರಮಾನುಸಾರವಾಗಿ ಔಷಧಿಗಳನ್ನು ಬಳಸುವುದು.
c. ವೈದ್ಯರ
ಸಲಹೆಗಳು ಅರ್ಥವಾಗದಿದ್ದಲ್ಲಿ, ಸಂಕೋಚವಿಲ್ಲದೆ ಮತ್ತೊಮ್ಮೆ ಕೇಳಿ ತಿಳಿಕೊಳ್ಳುವುದು. ಹೀಗೆ ಕೇಳುವಾಗ,
ಅವರು ಹೇಳುವ ಮಾಹಿತಿಯನ್ನು ತಮ್ಮದೇ ಭಾಷೆಯಲ್ಲಿ ಅರ್ಥವಾಗುವಂತೆ ಬರೆದುಕೊಳ್ಳುವುದು ಅಥವಾ ಮೊಬೈಲ್
ನಲ್ಲಿ ವೈದ್ಯರು ಒಪ್ಪಿದರೆ, ದ್ವನಿ ರೆಕಾರ್ಡ್ ಮಾಡಿಕೊಳ್ಳುವುದು. ಹೀಗೆ ಮಾಡುವುದರಿಂದ ಪಾಲಕರಿಗೂ
ಮತ್ತು ಶುಶ್ರೂಷಕರಿಗೂ ಕೇಳಿಸಲು ಸಹಾಯವಾಗುತ್ತದೆ. ಸಲಹೆಯಂತೆ ಔಷಧಗಳನ್ನು ಬಳಸಲು ಸಹಾಯವಾಗುತ್ತದೆ.
d. ಮೊದಲ ಅಡ್ಡಪರಿಣಾಮಗಳ
ಚಿನ್ಹೆಗಳು ಕಂಡೊಡನೆ ವೈದ್ಯರನ್ನು ಸಂಪರ್ಕಿಸುವುದು ಮತ್ತು ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ,
ತಡಮಾಡದೆ, ವೈದ್ಯರನ್ನು ಕಾಣುವುದು.
e. ಹಿಂದೆ ಅನುಭವಿಸಿದ
ಯಾವುದೇ ಔಷಧದ ಅಡ್ಡಪರಿಣಾಮಗಳನ್ನು ಮುಚ್ಚುಮರೆಯಿಲ್ಲದೆ ವೈದ್ಯರೊಡನೆ ಸಂಧರ್ಶನದ ವೇಳೆ ಅವರಿಗೆ ತಿಳಿಸುವುದು.
ತೊಂದರೆ ಕೊಟ್ಟ ಔಷಧಿಯನ್ನು ಮತ್ತೊಮ್ಮೆ ಬಳಸದಿರುವುದು.
f. ಒಂದಕ್ಕಿಂತ
ಹೆಚ್ಚು ರೋಗಗಳಿಂದ ನೀವು ಬಳಲುತ್ತಿದ್ದರೆ ಮತ್ತು ಒಬ್ಬರಿಗಿಂತ ಹೆಚ್ಚು ವೈದ್ಯರ ಸಮಾಲೋಚನೆ ಪಡೆದಿದ್ದರೆ,
ಹೊಸದಾಗಿ ಕಾಣುವ ವೈದ್ಯರಿಗೆ ಹಿಂದಿನ ರೋಗ ಚರಿತ್ರೆ ಮತ್ತು ಚಿಕಿತ್ಸೆ ಪಡೆದ ಎಲ್ಲಾ ಚರಿತ್ರೆಯನ್ನು
ತಪ್ಪದೆ ತಿಳಿಸುವುದು. ಹಿಂದೆ ಮಾಡಿಸಿದ ಟೆಸ್ಟ್ ಗಳು ಮತ್ತು ಅದರ ರೆಪೊರ್ಟ್ ಗಳ ದಾಖಲೆಗಳನ್ನು ತಪ್ಪದೆ
ವೈದ್ಯರಿಗೆ ತೋರಿಸುವುದು.
g. ನೀವು ಸಕ್ಕರೆ
ರೋಗ, ರಕ್ತದೊತ್ತಡದ ರೋಗ, ಥೈರಾಯ್ಡ್ ಮತ್ತು ಇತರೆ ಜೀವನಪರ್ಯಂತ ಚಿಕಿತ್ಸೆಮಾಡಿಸಿಕೊಳ್ಳಲು/ಔಷಧ ಸೇವಿಸಲು
ಹೇಳಿರುವ ರೋಗಗಳಿಂದ ಬಳಲುತ್ತಿದ್ದರೆ, ವೈದ್ಯರಲ್ಲಿಗೆ ಮತ್ತೊಂದು ಹೊಸರೋಗಕ್ಕೆ ಚಿಕಿತ್ಸೆ ಪಡೆಯಲು
ಹೋದಾಗ, ಹಿಂದಿನ ಕಾಯಿಲೆಗಳ ಚರಿತ್ರೆಯನ್ನು ತಪ್ಪದೆ ಹೇಳಿ ಮತ್ತು ತೆಗೆದುಕೊಳ್ಳುತ್ತಿರುವ ಔಷಧಿಗಳ
ಬಗ್ಗೆ ತಪ್ಪದೇ ಮಾಹಿತಿ ಕೊಡಿ. ಹೀಗೆ ಮಾಡುವುದರಿಂದ, ಒಂದಕ್ಕಿಂತ ಹೆಚ್ಚಿನ ಔಷಧಿಗಳ ಸೇವನೆಯಿಂದ ಆಗುವ
ತೊಂದರೆಗಳನ್ನು ತಡೆಯಬಹುದು (Drug-Drug interaction ತಡೆಯಬಹುದು).
h. ಔಷಧಗಳನ್ನು
ತೆಗೆದುಕೊಳ್ಳುವಾಗ ಡೊಸ್ ನಲ್ಲಿ ವ್ಯತ್ಯಾಸವಾದರೆ ಅಥವಾ ಸೂಚಿಸಿದ್ದಕ್ಕಿಂತ ಹೆಚ್ಚು ಅಥವಾ ಕಡಿಮೆ
ಔಷಧಿ ತೆಗೆದುಕೊಂಡರೆ, ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬಾರದು. ಅದರಲ್ಲೂ ಯಾವುದಾದರೊಂದು
ಡೋಸನ್ನು ತೆಗೆದುಕೊಳ್ಳದಿದ್ದಾಗ (Missed dose ಆದಾಗ) ಎಲ್ಲ ಔಷಧಗಳನ್ನು ಒಟ್ಟಿಗೆ ತೆಗೆದುಕೊಳ್ಳಲು
ಹೋಗಬಾರದು. ಅದರಿಂದ ಹೆಚ್ಚಿನ ಅಡ್ಡಪರಿಣಾಮಗಳು ಆಗುವ ಸಾಧ್ಯತೆ ಇದೆ.
ಉ. ಹೆಚ್ಚಿನ
ವೈದ್ಯರು ರೋಗಿಗಳಿಗೆ ಚಿಕಿತ್ಸೆ ಮಾಡುವುದರಲ್ಲಿ ದಿನಪೂರ್ತಿ ತೊಡಗಿಸಿಕೊಂಡಿರುತ್ತಾರೆ. ಆದರೆ ಈ ಕೆಳಗೆ
ಹೇಳಿರುವ ಕ್ರಮಗಳನ್ನು ಆಸ್ಪತ್ರೆಯ ಕಾರ್ಯಕಾರಿ ನಿಯಮಾವಳಿ (standard operating procedures)
ಗಳಲ್ಲಿ ಅಳವಡಿಸಿಕೊಳ್ಳುವುದರಿಂದ ಔಷಧಗಳಿಂದಾಗುವ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು.
a. ಎಲ್ಲಾ ರೋಗಿಗಳಿಗೂ
ಪ್ರಿಸ್ಕ್ರಿಪ್ಶನ್ ಅನ್ನು ಪ್ರಿಂಟ್ (printed prescription) ಮಾಡಿಕೊಡುವುದು. ಇದರಿಂದ ಎಲ್ಲಾ
ರೋಗಿಗಳಿಗೂ ವೈದ್ಯರು ಸೂಚಿಸಿದ ಔಷಧಗಳು ಸಿಗುವಂತಾಗುವುದು. ಔಷಧಿ ಅಂಗಡಿಯ ಫಾರ್ಮಸಿಸ್ಟ್ ಮತ್ತು ನರ್ಸ್
ಗಳು ಸರಿಯಾದ ಔಷಧಿಗಳನ್ನು ಕೊಡುವಂತಾಗುತ್ತದೆ. ವೈದ್ಯರ ಬರವಣಿಗೆಯನ್ನು ಓದುವಾಗ ಆಗುವ ತಪ್ಪುಗ್ರಹಿಕೆಗಳನ್ನು
ತಡೆಯಬಹುದು.
b. ವೈದ್ಯರು
ಸರಿಯಾದ ಔಷಧಿಗಳನ್ನು ರೋಗಿಯ ವಯಸ್ಸು, ಲಿಂಗ, ಕಿಡ್ನಿ, ಲಿವರ್ ಅಂಗಗಳ ಕಾರ್ಯಕ್ಷಮತೆಗನುಗುಣವಾಗಿ
ಕೊಡುವುದು. ಔಷಧ ನಿಯಂತ್ರಣ ಮಂಡಳಿ ಪರವಾನಗಿ ಕೊಟ್ಟಿರುವ ರೋಗಗಳಿಗೆ ಮಾತ್ರ ಪ್ರತೀ ಔಷಧವನ್ನು ಬಳಸುವುದು.
ಇದರಿಂದ ಹೆಚ್ಚಿನ ಮಟ್ಟದ ಅಡ್ಡಪರಿಣಾಮಗಳನ್ನು ತಡೆಯಬಹುದು.
c. ಆದಷ್ಟು
ಕಡಿಮೆ ಔಷಧಿಗಳನ್ನು ಒಟ್ಟಿಗೆ ಬಳಸುವುದು. ನಾಲ್ಕಕ್ಕಿಂತ ಹೆಚ್ಚು ಔಷಧಿಗಳನ್ನು ಒಟ್ಟಿಗೆ ಬಳಸುವುದರಿಂದ,
ಸರಾಸರಿ ಔಷಧಿಗಳ ಅಡ್ಡಪರಿಣಾಮಗಳ ಸಂಖ್ಯೆ ಬಹಳ ಹೆಚ್ಚಾಗುತ್ತದೆ. ಡ್ರಗ್ ಡ್ರಗ್ ಇಂಟರಾಕ್ಷನ್ (ಔಷಧಗಳ
ನಡುವಿನ ಹೊಂದಾಣಿಕೆಯ ಸಮಸ್ಯೆ) ಹೆಚ್ಚಾಗಿ ಅಡ್ಡಪರಿಣಾಮಗಳು ಹೆಚ್ಚಾಗುತ್ತವೆ.
d. ರೋಗಿ ಒಂದಕ್ಕಿಂತ
ಹೆಚ್ಚು ರೋಗಗಳಿಂದ ಬಳಲುತ್ತಿದ್ದರೆ ಅಂತಹ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆಮಾಡಬೇಕೆಂದು ವೈದ್ಯಕೀಯ
ಸಂಘಟನೆಗಳು ನಿಖರವಾಗಿ ಹೇಳುವುದಿಲ್ಲ (no guidelines available). ಆದರೆ ಅಸಲಿ ಜೀವನದಲ್ಲಿ ಇಂತಹ
ಬಹಳ ರೋಗಿಗಳು ಚಿಕಿತ್ಸೆ ಪಡೆಯಲು ವೈದ್ಯರಲ್ಲಿಗೆ ಬರುತ್ತಾರೆ, ಹಾಗಾಗಿ ಇಂತಹ ರೋಗಿಗಳಿಗೆ ವೈದ್ಯರು
ಚಿಕಿತ್ಸೆ ಮಾಡುವಾಗ ಎಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಪ್ರತೀರೊಗಕ್ಕೂ ಬಳಸುವ ಔಷಧಿಗಳ
ಮೇಲೆ ನಿಗಾ ಇಡಬೇಕು. ಅಂಟಿಬಯಾಟಿಕ್, ಮೆದುಳು ರೊಗಕ್ಕೆ ಬಳಸುವ ಔಷಧಗಳು, ಮತ್ತು ಹೃದಯ ರೋಗಗಳಿಗೆ
ಬಳಸುವ ಔಷಧಗಳು ಹೆಚ್ಚಿನ ಪ್ರಮಾಣದ ಅಡ್ಡಪರಿಣಾಮಗಳನ್ನು ಉಂಟುಮಾಡುವ ಸಾದ್ಯತೆ ಇರುತ್ತವೆ.
e. ಎಲ್ಲಾ ರೋಗಿಗಳಿಗೂ
ಎಲ್ಲಾ ಔಷಧಿಗಳು ಒಂದೇ ರೀತಿಯಾಗಿ ಒಗ್ಗುವುದಿಲ್ಲ. ಕೆಲವರ ಜೀರ್ಣಶಕ್ತಿ ಹೆಚ್ಚಿದ್ದರೆ, ಇನ್ನೂ ಕೆಲವರಲ್ಲಿ
ಕಡಿಮೆ ಇರುತ್ತದೆ. ಹೀಗೆ ರೋಗಿ ರೋಗಿಗಳ ಮದ್ಯೆ ರಕ್ತದಲ್ಲಿ ಇರಬಹುದಾದ ಔಷಧಿಯ ಪ್ರಮಾಣದಲ್ಲಿ ವ್ಯತ್ಯಾಸಗಳಾಗಬಹುದು.
ಇಂತಹ ವ್ಯತ್ಯಾಸಗಳನ್ನು ಅರಿಯಲು, ಅಗತ್ಯಕ್ಕೆ ಅನುಗುಣವಾಗಿ ರಕ್ತದಲ್ಲಿನ ಔಷಧಿಯ ಪ್ರಮಾಣವನ್ನು ಮೌಲ್ಯಮಾಪನ
(Drug level estimation) ಮಾಡುವುದು ಒಳ್ಳೆಯದು. ಆಗ ರಕ್ತದಲ್ಲಿನ ಔಷಧಿಯ ಪ್ರಕಾರವಾಗಿ, ರೋಗಿಗೆ
ಕೊಡಬೇಕಾದ ಡೋಸನ್ನು ಗಣಕಮಾಡಲು ಸಹಾಯವಾಗುತ್ತದೆ. ಹೀಗೆ ಸುಧಾರಿತ ಕ್ರಮವನ್ನು ಅನುಸರಿಸಿದರೆ ಹೆಚ್ಚಿನ
ಅಡ್ಡಪರಿಣಾಮಗಳನ್ನು ತಡೆಯಬಹುದು.
ಉ. ಸಂಶೋಧನೆಯ
ಪ್ರಕಾರ ಆಂಟಿಬಯಾಟಿಕ್ಸ್ (ಮಿಣಿಜೀವಿಗಳನ್ನು ಕೊಲ್ಲಲು/ಅವುಗಳ ಬೆಳವಣಿಗೆಯನ್ನು ನಿಯಂತ್ರಿಸುವ) ಔಷಧಗಳು,
ಮೆದುಳಿನ ರೋಗಗಳಿಗೆ ಬಳಸುವ ಔಷಧಿಗಳು (Drugs acting on central nervous system) ಮತ್ತು ದೇಹದ
ಭಾಗಗಳಲ್ಲಾಗುವ ಉರಿಯೂತ ಕಡಿಮೆ ಮಾಡಲು ಬಳಸುವ ಔಷಧಗಳು (anti-inflammatory drugs) ಹೆಚ್ಚಿನ ಅಡ್ಡಪರಿಣಾಮಗಳನ್ನು
ಉಂಟುಮಾಡುವ ಸಾಧ್ಯತೆ ಹೆಚ್ಚು. ಈ ಮೂರು ತರಹದ ಔಷಧಿಗಳು ಒಟ್ಟಾಗಿ ಶೇ. 80% ರಷ್ಟು ಅಡ್ಡಪರಿಣಾಮಗಳನ್ನು
ಉಂಟುಮಾಡುವ ಸಾಧ್ಯತೆ ಹೆಚ್ಚು. ಯಾವುದೇ ಔಷಧವನ್ನು ಮಕ್ಕಳಲ್ಲಿ ಬಳಸುವಾಗ ಎಚ್ಚರಿಕೆ ವಹಿಸಬೇಕು. ಪ್ರಶ್ನೆ
3 ರಲ್ಲಿ ಮಕ್ಕಳಲ್ಲಿ ಹೆಚ್ಚಿನ ಅಡ್ಡಪರಿಣಾಮಗಳಾಗಲು ಕಾರಣಗಳನ್ನು ಹೇಳಲಾಗಿದೆ.
ಉ. ಔಷಧ ಸೇವಿಸಿದ
ಮಕ್ಕಳಲ್ಲಿ ಜೀರ್ಣಾಂಗ ಮತ್ತು ಚರ್ಮಕ್ಕೆ ಸಂಭಂಧಿಸಿದ ಅಡ್ಡಪರಿಣಾಮಗಳು ಹೆಚ್ಚಾಗಿ ಕಾಣಿಸುತ್ತವೆ.
ಸಾಮಾನ್ಯವಾಗಿ ಭೇಧಿ, ವಾಂತಿ, ಮೈಮೇಲೆಲ್ಲ ದದ್ದು (ರ್ಯಾಷ್), ಅಲ್ಲಲ್ಲಿ ಕೆಂಪು ಮಚ್ಚೆಗಳು, ಹೆಚ್ಚಿನ
ನಿದ್ದೆ ಮಾಡುವುದು, ಮತ್ತುಬಂದಂತಾಗುವುದು, ರಕ್ತಸ್ರಾವವಾಗುವುದು, ಮುಖದಲ್ಲಿ ಕೆಂಪಗಾಗಿ ಮಚ್ಚೆಗಳಿಂದ
ಕೂಡಿರುವುದು ಹೀಗೆ ಹತ್ತಾರು ತರಹದ ಅಡ್ಡಪರಿಣಾಮಗಳನ್ನು ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಬಹುದು. ಯಾವುದೇ
ರೀತಿಯ ಅಡ್ಡಪರಿಣಾಮಗಳು ಕಂಡುಬಂದಲ್ಲಿ ವೈದ್ಯರನ್ನು ಕಾಣಬೇಕು ಮತ್ತು ಪರಿಹಾರದ ಸಮಾಲೋಚನೆ ಪಡೆಯಬೇಕು.
ಉ: ಪ್ರತೀ ಔಷಧದಿಂದ
ಒಂದಲ್ಲಾ ಒಂದು ರೀತಿಯ ಅಡ್ಡಪರಿಣಾಮ ಆಗಬಹುದಾಗಿದೆ. ಕೆಲವು ಅಡ್ಡಪರಿಣಾಮಗಳಿಗೆ ಯಾವುದೇ ಚಿಕಿತ್ಸೆ
ಇಲ್ಲದೆ ಔಷಧವನ್ನು ವೈದ್ಯರ ಆದೇಶದಂತೆ ನಿಲ್ಲಿಸಬೇಕಾಗುತ್ತದೆ ಅಥವಾ ಆಸ್ಪತ್ರೆಯಲ್ಲಿ ದಾಖಲಾಗದೆ ಹೊರರೋಗಿಯಂತೆ
ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೀಗೆ ಮಾಡುವುದರಿಂದ ಹೆಚ್ಚಿನ ಅಡ್ಡಪರಿಣಾಮಗಳನ್ನು ಯಶಸ್ವಿಯಾಗಿ ಚಿಕಿತ್ಸೆ
ಮಾಡಿದಬಹುದಾಗಿದೆ. ಆದರೆ ಕೆಲವು ತೀವ್ರತರವಾದ ಅಡ್ಡ ಪರಿಣಾಮಗಳು ಜೀವಹಾನಿ ಮಾಡಬಹುದಾಗಿವೆ. ಇನ್ನೂ
ಕೆಲವು ರೋಗಿಗಳನ್ನು ಆಸ್ಪತ್ರೆಯ ವಾರ್ಡ್ಗಳಲ್ಲಿ ದಾಖಲಾತಿ ಮಾಡಿ ತಿಂಗಳುಗಟ್ಟಲೆ ಚಿಕಿತ್ಸೆ ಕೊಡಬೇಕಾಗುತ್ತದೆ.
ಇನ್ನೂ ಕೆಲವು ರೋಗಿಗಳನ್ನು ತೀವ್ರನಿಘಾ ಘಟಕಕ್ಕೂ ಸೇರಿಸಿ ಚಿಕಿತ್ಸೆ ಮಾಡಬೇಕಾಗಬಹುದು.
ಡಾ. ಶಿವಮೂರ್ತಿ ಎನ್, ಔಷಧಶಾಸ್ತ್ರಜ್ಙರು
ಡಾ. ಶಿವಮೂರ್ತಿ ಎನ್ ಅವರು, ವೃತ್ತಿಯಲ್ಲಿ ವೈದ್ಯರು ಮತ್ತು ಔಷಧಶಾಸ್ತ್ರಜ್ಙರು. ತಮ್ಮ ೨೦ ವರ್ಷದ ವೃತ್ತಿ ಜೀವನದಲ್ಲಿ ಹಲವಾರು ಉತ್ತಮ
ಸಂಸ್ಥೆಗಳಲ್ಲಿ ಜವ್ವಬ್ದಾರಿಯುತ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ.
ಔಷಧಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿಯಲ್ಲಿ ರಾಜಿವ್ ಗಾಂಧಿ ವೈಧ್ಯಕೀಯ ವಿಶ್ವವಿಧ್ಯಾಲಯದಲ್ಲಿ
ಮೊದಲ ರಾಂಕ್ ಪಡೆದು ಉತ್ತೀರ್ಣರಾದ ನಂತರ ಸಂತ ಜಾನ್ ವೈದ್ಯಕೀಯ ಕಾಲೇಜು ಬೆಂಗಳೂರು, ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು, ಪಾಂಡಿಚೆರಿ, ಡಾ. ಮೂಪೆನ್ ವಯನಾಡು ವೈದ್ಯಕೀಯ ಕಾಲೇಜು, ವಯನಾಡು ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಈಗ, ಡಾ. ಚಂದ್ರಮ್ಮ ದಯಾನಂದ ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಇಲ್ಲಿ ಸಹ ಪ್ರಾಧ್ಯಾಪಕರಾಗಿ ಔಷಧಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಡಾ. ಶಿವಮೂರ್ತಿ ಯವರು ವೈದ್ಯಕೀಯ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದು, ಹಲವು ಕಂಪನಿಗಳ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಲೋಟಸ್ ಲ್ಯಾಬ್, ಫ಼ೊರ್ಟಿಸ್ ಕ್ಲಿನಿಕಲ್ ರಿಸರ್ಚ್, ಕ್ಯಾರ್ಟೇಸಿಯನ್ ರಿಸರ್ಚ್, ಐಕಾನ್ ರಿಸರ್ಚ್, ಜುಬಿಲ್ಯಾಂಟ್ ರಿಸರ್ಚ್, ಇತರೆ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ನೋವೋನಾರ್ಡಿಸ್ಕ್ ಫಾರ್ಮಾ ಕಂಪನಿಯಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದು, ಅನೇಕ ಔಷಧಗಳ ಸಂಶೊಧನೆಯಲ್ಲಿ ತೊಡಗಿಸಿಕೊಂಡ ಅನುಭವ ಹೊಂದಿದ್ದಾರೆ.
ಡಾ. ಶಿವಮೂರ್ತಿ ಅವರು, ಸಾಹಿತ್ಯ, ಕಲೆ, ಹಾಡುಗಾರಿಕೆಯಲ್ಲಿ ವಿಶೇಷ ಒಲವು ಹೊಂದಿದ್ದು, ವೈದ್ಯಕೀಯ ಕವನ, ಹಾಡು ಬರೆಯುವುದು, ಅವಕ್ಕೆ ರಾಗಸಂಯೋಜಿಸುವುದು, ಆರೋಗ್ಯಕ್ಕೆ ಸಂಭಂದಿಸಿದ ಕಥೆ ಮತ್ತು ಸಂಭಾಷಣೆ ಬರೆಯುವುದು, ವೈದ್ಯಕೀಯ ಆರೊಗ್ಯ ಮಾಹಿತಿ ಸಾರುವ ಬರಹಗಳನ್ನು ಬರೆಯುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರ ಬರಹಗಳು ಜೀವನಾಡಿ, ಗಂಡ ಹೆಂಡತಿ, ಬಾಲವಿಜ್ಙಾನ, ಪ್ರಜಾ ಪ್ರಗತಿ, ಸುದ್ದಿ ಗಿಡುಗ, ಜನತಾ ವಾಣಿ, ದಾವಣಗೆರೆ ಪಬ್ಲಿಕ್ ವಾಯ್ಸ್, ಸುವರ್ಣ ನ್ಯೂಸ್, ಯುನೈಟೆಡ್ ನ್ಯೂಸ್ ಅಫ್ ಇಂಡಿಯ - ಕನ್ನಡ (ಭಾರತೀಯ ಬಹುಭಾಷಾ ಸುದ್ದಿ ಸೇವಾ ಸಂಸ್ಥೆ), ವಾರ್ತಾ ಜನಪದ (ವಾರ್ತಾ ಮತ್ತು ಪ್ರಸಾರ ಇಲಾಖೆ, ಕರ್ನಾಟಕ ಸರ್ಕಾರ), ವಿಶ್ವವಾರಿಧಿ, ಉದಯಕಾಲ, ಟಿವಿ೫ ಪ್ಲಸ್, ಬ್ರಹ್ಮಗಿರಿ, ಸುದ್ದಿಗಿಡುಗ, ನಮ್ಮೂರಸುದ್ದಿ, ಶೌರ್ಯ ಮೀಡಿಯಾ, ಮೆಘಾ ಮೀಡಿಯಾ ಅಂತಹ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಅವರು ನಟಿಸಿ ಸಂಕಲನ ಮಾಡಿದ "ಉಪಸಂಹಾರ" ಕಿರುಚಿತ್ರ ಪವರ್ ಟಿವಿಯಲ್ಲಿ ಪ್ರಾಸಾರವಾಗಿದೆ. ಡಾ. ಶಿವಮೂರ್ತಿಯವರು ಸಂಕಲನ ಮಾಡಿದ “ಪೃಥ ಸಂಹಾರ” ಕಿರುಚಿತ್ರ ಟಿವಿ ೫ ನಲ್ಲಿ “ಗುಡ್ ನ್ಯೂಸ್” ಕಾರ್ಯಕ್ರಮದಲ್ಲಿ ಪ್ರಕಟವಾಯಿತು. ಅವರು ಬರೆದ ಹಾಡು ಕೂಡ ಈ ಚಿತ್ರದಲ್ಲಿ ಅಳವಡಿಸಲಾಗಿತ್ತು. ಡಾ. ಶಿವಮೂರ್ತಿಯವರು ಸಂಕಲನ ಮಾಡಿದ “ಕೋವಿಡ್ ಕವಛ” ಕಿರುಚಿತ್ರ ಯುಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು, ಕೋವಿಡ್ ಲಸಿಕೆಯ ಬಗ್ಗೆ ಆರೋಗ್ಯ ಮಾಹಿತಿ ಕೊಡುವಲ್ಲಿ ಯಶಸ್ವಿಯಾಯಿತು. ಈ ಕಿರುಚಿತ್ರ ದಲ್ಲಿ ಅವರೇ ಬರೆದ ಕೋವಿಡ್ ಲಸಿಕೆಯ ಬಗೆಗಿನ ಹಾಡು ಜಾನಪದ ಶೈಲಿಯಲ್ಲಿತ್ತು ಮತ್ತು ಅದನ್ನು ಅವರೇ ಹಾಡಿದ್ದು, ಈ ಕಿರುಚಿತ್ರ ದಲ್ಲಿ ಅಳವಡಿಸಲಾಗಿತ್ತು.
“ಪಿನ್ನ ಮಸೂರ” ಎನ್ನುವ ಕೊರೋನ ಮೂರನೇ ಅಲೆಯ ಬಗ್ಗೆ ಆರೋಗ್ಯ ಮಾಹಿತಿ ಸರಣಿಯನ್ನು ಎಡಿಟ್ ಮಾಡಿ ಯುಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾರೆ. ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ರೆಕಾರ್ಡ್ ಮಾಡಿ ತಮ್ಮ ಯುಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾರೆ.
ಅವರು ಬರೆದು ಹಾಡಿದ ಕ್ಷಯರೋಗ ಮಾಹಿತಿ ಉಳ್ಳ ಜಾನಪದ ಶೈಲಿಯ ಹಾಡಿಗೆ ಕಾಲೇಜು ಮಟ್ಟದಲ್ಲಿ ಎರಡನೇ ಪ್ರಶಸ್ತಿ ದೊರೆತಿದೆ. ಅವರು ಬರೆದು, ನಿರ್ದೆಶನ ಮಾಡಿದ ಇಂಗ್ಲೀಷ್ ಕಾರ್ಟೂನ್ "ಬ್ರಾಂಡ್-ಅಬ್ಯೂಸ್ - ಎಂಡ್ ದಿ ಮೆನೇಸ್" ಎನ್ನುವ ಚಿತ್ರಕ್ಕೆ ಭಾರತ ಔಷಧ ನಿಯಂತ್ರಣ ಸಂಸ್ಥೆಯ ಎನ್.ಸಿ.ಸಿ-ಐ.ಪಿ.ಸಿ ಅಂಗ ಸಂಸ್ಥೆಯಿಂದ ರಾಷ್ಟ್ರ ಮಟ್ಟದ ಮೊದಲ ಪ್ರಶಸ್ತಿ ದೊರೆತಿದೆ. ಅವರು ಮಂಡಿಸಿದ "ಮಕ್ಕಳಲ್ಲಿ ಔಷಧಗಳಿಂದಾಗುವ ಅಡ್ಡಪರಿಣಾಮಗಳು"
ವಿಷಯದ ಸಂಶೋಧನಾ ಪತ್ರಕ್ಕೆ ಚೆನ್ನೈನ ಬಾಲಾಜಿ ಮೆಡಿಕಲ್ ಕಾಲೇಜು ಆಯೋಜಿಸಿದ್ದ “ಹೈಪರ್ಪಿಯೇಸಿಯಾ-೨೦೨೧” ಸಮ್ಮೇಳನದಲ್ಲಿ ಎರಡನೇ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ.
ಮೇಲೆ ಹೇಳಿದ ಚಟುವಟಿಕೆಗಳನ್ನು, ತಮ್ಮದೇ ಆದ ಯುಟ್ಯುಬ್ ಚಾನೆಲ್ನ್ ನಲ್ಲಿ (Shivamurthy Nanjundappa ಚಾನಲ್ ನಲ್ಲಿ) ಪ್ರಕಟಿಸುತ್ತಾ ಹವ್ಯಾಸಗಳನ್ನು ಜೀವಂತವಾಗಿಟ್ಟು ತಮ್ಮ ಸಾಹಿತ್ಯ ಮತ್ತು ಹವ್ಯಾಸ ಕೃಷಿ ಮುಂದುವರೆಸಿಕೊಂಡು ಬಂದಿದ್ದಾರೆ.

0 Comments