Ticker

6/recent/ticker-posts

Ad Code

Responsive Advertisement

ಮಾಗಡಿ ರೋಡ್ ಟೋಲ್ ಗೇಟ್ ನಿಂದ ಸುಮನಹಳ್ಳಿ ಜಂಕ್ಷನ್ ವರಗೆ ಹೈಟೆಕ್ ಮಾದರಿ ರಸ್ತೆ ನಿರ್ಮಾಣ

 ಮಾಗಡಿ ರೋಡ್ ಟೋಲ್ ಗೇಟ್ ನಿಂದ ಸುಮನಹಳ್ಳಿ ಜಂಕ್ಷನ್ ವರಗೆ ಹೈಟೆಕ್ ಮಾದರಿ ರಸ್ತೆ ನಿರ್ಮಾಣ(ಚರ್ಚ್ ಸ್ಟ್ರೀಟ್ ಮಾದರಿ)



ಅಧಿಕಾರಿಗಳು ,ಗುತ್ತಿಗೆದಾರರು ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣ ಮಾಡಬೇಕು ,ಇಲ್ಲದೇ ಹೋದರೆ ತಲೆದಂಡ ಖಚಿತ
- ಸಚಿವ ವಿ.ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜ್ ಕುಮಾರ್ ಕುಮಾರ್ ವಾರ್ಡ್,ದಾಸರಹಳ್ಳಿ ಮತ್ತು ಹೌಸಿಂಗ್ ಬೋರ್ಡ್ ವಿವಿಧ ಕಾಮಗಾರಿಗಳ ಪರಿಶೀಲನೆ ಮತ್ತು ಮಾಗಡಿರೋಡ್ ಟೋಲ್ ಗೇಟ್ ನಿಂದ ಸುಮನಹಳ್ಳಿ ಜಂಕ್ಷನ್ ವರಗೆ ಹೈಟೆಕ್ ಮಾದರಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿಪೂಜೆ. 

ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು ಮಾದರಿ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೇರವೆರಿಸಿ ,ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ಮಾಡಿದರು.

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿರವರು , ರೂಪಲಿಂಗೇಶ್ವರ್ ,ಜಯರತ್ನ , ಮತ್ತು ಬಿ.ಜೆ.ಪಿ.ಮುಖಂಡರುಗಳಾದ ಹೆಚ್.ರಮೇಶ್ , ಡೊಡ್ಡವೀರಯ್ಯ, ಶ್ರೀಧರ್ ಮತ್ತು ವಿಶೇಷ ಆಯುಕ್ತರಾದ ದೀಪಕ್ ,ಮುಖ್ಯ ಅಭಿಯಂತರಾದ ಪ್ರಹ್ಲಾದ್ ರವರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ನಮ್ಮ ಮೇಲೆ ನಂಬಿಕೆ ಇಟ್ಟು ಜನರು ಮತ ನೀಡಿರುತ್ತಾರೆ ,ಅವರ ನಂಬಿಕೆ ವಿಶ್ವಾಸಕ್ಕೆ ಮತದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ .

ಸಾರ್ವಜನಿಕರಿಗೆ ಉತ್ತಮ ರಸ್ತೆ ,ಆರೋಗ್ಯ ,ನೀರು ,ಬೀದಿ ದೀಪಾ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು .ಅವರು ಕಟ್ಟಿರುವ ತೆರಿಗೆ ಹಣ ಸಮರ್ಪಕವಾಗಿ ಉಪಯೋಗಬೇಕು .ಈ ನಿಟ್ಟಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾಗಡಿ ರೋಡ್ ಟೋಲ್ ಗೇಟ್ ನಿಂದ ಸುಮನಹಳ್ಳಿ ಜಂಕ್ಷನ್ ವರಗೆ (ಚರ್ಚ್ ಸ್ಟ್ರೀಟ್ )ಮಾದರಿ ಹೈಟೆಕ್ ರಸ್ತೆ ನಿರ್ಮಾಣಕ್ಕೆ ಇಂದು ಗುದ್ದಲಿಪೂಜೆ ಮಾಡಲಾಗಿದೆ .ಸುಗಮ ಸಂಚಾರ ,ಮಾದರಿ ಪುಟ್ ಪಾತ್ ಹೈಟೆಕ್ ರಸ್ತೆಯನ್ನ ಚರ್ಚ್ ಸ್ಟ್ರೀಟ್ ಮಾದರಿ ರಸ್ತೆಯನ್ನ ಜನಸಾಮಾನ್ಯರ ಬಳಕೆಗೆ ಸಿಗಬೇಕು ಎಂಬುದು ನಮ್ಮ ಆಶಯ .

ದಾಸರಹಳ್ಳಿ 200ಹಾಸಿಗೆ ಸಾಮ್ಯರ್ಥವುಳ್ಳ ಉಚಿತ ಚಿಕಿತ್ಯೆ ನೀಡುವ ಆಸ್ಪತ್ರೆ ಮುಂದಿನ ತಿಂಗಳು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ಲೋಕರ್ಪಣೆ ಮಾಡಲಿದ್ದಾರೆ .

ಇನ್ನು ಮೂರು ತಿಂಗಳ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು .

ಅಧಿಕಾರಿಗಳು, ಗುತ್ತಿಗೆದಾರರು ಶೀಘ್ರಗತಿಯಲ್ಲಿ(ಟೈಂ ಬಾಂಡ್ ಒಳಗೆ) ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಇಲ್ಲದೇ ಹೋದರೆ ತಲೆದಂಡ ಖಚಿತ .

ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

Post a Comment

0 Comments

Ad Code

Responsive Advertisement