ಮಧುಗಿರಿ: ಪಟ್ಟಣದಲ್ಲಿರುವ ಬಸವಣ್ಣ ಬೆಟ್ಟದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾದ ಘಟನೆ ನೆಡೆದಿದೆ.
ಕಳೆದ ಎರಡುದಿನಗಳಿಂದ ಬಂಡೆಮೇಲೆ ಕುಳಿತು ವಿಹರಿಸುತ್ತುರುವ ಎರಡು ಚಿರತೆಗಳು ಇರುವುದನ್ನು ಕಂಡ ನಾಗರೀಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಬೆಟ್ಟದ ತಪ್ಪಲಿನಲ್ಲಿ ವಾಸವಿರಿವ ಜನರು ಆತಂಕದಲ್ಲಿ ವಾಸಿಸುತ್ತಿದ್ದಾರೆ. ಬೆಟ್ಟದ ಸುತ್ತಮುತ್ತಲಿನಲ್ಲಿ ವಸತಿ ಪ್ರದೇಶ, ವಿದ್ಯಾರ್ಥಿನಿಲಯ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ವಿದ್ದು ಮಧುಗಿರಿಯಲ್ಲಿ ರಾತ್ರಿಯ ವೇಳೆಯಲ್ಲಿ ಒಡಾಡಲು ಭಯ ಬೀತ ರಾಗಿದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು..
ವಲಯ ಅರಣ್ಯ ಅಧಿಕಾರಿ ಸಿ.ರವಿ ಪ್ರತಿಕ್ರಿಯಿಸಿ, ಚಿರತೆಗಳು ಗುಡ್ಡಗಳಲ್ಲಿ ಇರುವುದು ಸಾಮಾನ್ಯ. ಮೂರರಿಂದ ನಾಲ್ಕು ದಿನಗಳ ಕಾಲ ಇಲ್ಲಿದ್ದು ಅದು ಬೇರೆ ಪ್ರದೇಶಕ್ಕೆ ಹೋಗುತ್ತದೆ ಸಾರ್ವಜನಿಕರು ಅದಕ್ಕೆ ಯಾವುದೇ ರೀತಿ ತೊಂದರೆ ಮಾಡಬಾರದು ಹಾಗೂ ಒಂದು ವಾರದ ಮಟ್ಟಿಗೆ ಬೆಟ್ಟದ ಮೇಲೆ ಹೋಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
0 Comments