ಮಧುಗಿರಿ : ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆ ಯಾದ ಆರ್.ರಾಜೇಂದ್ರ ಅವರು ದಂಡಿನಮಾರಮ್ಮ ದೇವಾಲಯಕ್ಕೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಸುದ್ದಿಗಾರರ ಮಾತನಾಡಿದ ಅವರು, ಅಧಿಕಾರಕ್ಕಿಂತ ಜನರ ವಿಶ್ಯಾಸ ಮುಖ್ಯ ಇದು ನನ್ನ ಗೆಲ್ಲುವಲ್ಲ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಗೆಲ್ಲುವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ತಂದೆ ಮಗ ಮಾತ್ರ ಒಡಾಡುತ್ತಿದ್ದಾರೆ ಎಂದು ಟೀಕಿಸಿದವರಿಗೆ ಮತದಾರ ತಕ್ಕ ಉತ್ತರ ನೀಡಿದ್ದಾನೆ. ಜಿಲ್ಲೆಯಲ್ಲಿ ಡಾ.ಜಿ.ಪರಮೇಶ್ವರ್ ಮತ್ತು ಟಿ.ಬಿ.ಜಯಚಂದ್ರ ರವರ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ನಾಯಕರೆಲ್ಲ ಒಗ್ಗಟ್ಟಿನ ಪ್ರದರ್ಶನವು ನನ್ನ ಗೆಲುವಿಗೆ ಟೊಂಕ ಕಟ್ಟಿ ಶ್ರಮಿಸಿದ್ದು ಅವರಿಲ್ಲರಿಗೂ ಅಭಾರಿಯಾಗಿದ್ದೇನೆ .
ಕಾರ್ಯಕರ್ತರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇದೆ ಒಗಟ್ಟನ್ನು ಪ್ರದರ್ಶಿಸಿ ಕೆ.ಎನ್.ರಾಜಣ್ಣ ನವರ ಗೆಲುವಿಗೆ ಶ್ರಮ ವಹಿಸಬೇಕಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಜಿಲ್ಲೆಯಿಂದ ಕನಿಷ್ಠ 9 ಜನ ಶಾಸಕರನ್ನು ಹಾರಿಸಿ ಕಳುಹಿಸಬೇಕಿದೆ ಇದಕ್ಕಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಾಂತ ಸಂಚರಿಸಿ ಪಕ್ಷ ಸಂಘಟನೆ ಯಲ್ಲಿ ತೊಡಗಿಕೊಂಡು ಹಿರಿಯ ನಾಯಕರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ನನ್ನನ್ನು ಸಾಮಾನ್ಯನಂತೆ ನೋಡಿ: ನಾನು ಎಂ.ಎಲ್.ಸಿ.ಆಗಿ ಆಯ್ಕೆಯಾದ ಮಾತ್ರಕ್ಕೆ ವಿಶೇಷವಾಗಿ ನೋಡಬೇಕಾಗಿಲ್ಲ ಕಾರ್ಯಕರ್ತರು ನನಗೆ ಹಿಂದೆ ಯಾವ ರೀತಿ ನೋಡುತ್ತಿದ್ದೀರೊ ಅದೆ ರೀತಿ ನೋಡಿ ನಾನು ನಿಮ್ಮೆಲ್ಲರ ಸೇವಕನಂತೆ ಕೆಲಸ ಮಾಡುತ್ತೇನೆ ಮುಂದಿನ ದಿನಗಳಲ್ಲಿ ಪ್ರತಿ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದರು.
ಜಿ.ಪಂ.ಮಾಜಿ ಸದಸ್ಯೆ ಶಾಂತಲ ರಾಜಣ್ಣ, ರಾಜ್ಯ ಸಹಕಾರ ಮಹಾಂಮಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ತಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾದೇನಾನಾಯ್ಕ್, ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ವಿ.ನಾಗೇಶ್ ಬಾಬು, ಯುವ ಕಾಂಗ್ರೇಸ್ ಅಧ್ಯಕ್ಷ ಎಸ್.ಡಿ.ಕೆ. ವೆಂಕಟೇಶ್, ಪುರಸಭೆ ಅಧ್ಯಕ್ಷ ತಿಮ್ಮರಾಜು, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಎಂ.ವಿ.ಗೋವಿಂದರಾಜು, ಅಲೀಂ, ನಟರಾಜು, ಲಾಲಪೇಟೆ ಮಂಜುನಾಥ್, ಎಂ.ವಿ.ಮಂಜುನಾಥ್ ಅಚಾರ್, ಪಾರ್ವತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ,ಎಸ್.ಆರ್.ರಾಜಗೋಪಾಲ್, ಮುಖಂಡರುಗಳಾದ ಎಚ್.ಸಿ.ಬೈರಪ್ಪ, ಸುವರ್ಣಮ್ಮ, ವಿ.ಆರ್, ಭಾಸ್ಕರ್, ಸಾದಿಕ್, ಆದಿನಾರಾಯಣರೆಡ್ಡಿ, ಗೋಪಾಲಯ್ಯ, ನರಸಿಂಹರೆಡ್ಡಿ, ತಿಮ್ಮಾರೆಡ್ಡಿ, ಏಕಶಿಲಾ ಕಂಬಣ್ಣ, ಬಿ.ಎನ್.ನಾಗರ್ಜುನ, ದೀಪು ಹೊನ್ನಾಪುರ ಮುಂತಾದವರು ಇದ್ದರು.
0 Comments