Ticker

6/recent/ticker-posts

Ad Code

Responsive Advertisement

ಬಳ್ಳಾರಿ : ಬಿಜೆಪಿಯಿಂದ ಮಾತ್ರ ಅಭಿವೃಧ್ದಿ ಸಾಧ್ಯ !!

ಬಳ್ಳಾರಿ ಡಿ 02. ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿಜಯನಗರ ಕ್ಷೇತ್ರದ ಹಗರಿಬೊಮ್ಮನಹಳ್ಳಿ ಮಂಡಲ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ವೈ.ಎಂ.ಸತೀಶ್ ಅವರು ಪಾಲ್ಗೊಂಡು ಮತಯಾಚಿಸಿದರು. ಅನಂತರ ಅವರು ಮಾತಯಾಚನೆಯನ್ನುದ್ದೇಶಿಸಿ ಮಾತನಾಡುತ್ತಾ ಬಿಜೆಪಿಯಿಂದ ಮಾತ್ರ ಅಭಿವೃಧ್ದಿ ಸಾದ್ಯ, ಇನ್ಯಾವುದೇ ಪಕ್ಷದಿಂದಲೂ ಅಭಿವೃಧ್ದಿ ಶೂನ್ಯ ಎಂದರು. ನಾನು ಗೆಲ್ಲುವ ವಿಶ್ವಾಸ ಇದೆ ಆದರೇ ಹೆಚ್ಚಿನ ಬಹುಮತದಿಂದ ಆರಿಸಿತರಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

 ಈ ಸಂದರ್ಭದಲ್ಲಿ ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು,  ಮಾಜಿ ಶಾಸಕರಾದ ನೇಮಿರಾಜ್ ನಾಯಕ್, ಸಂಸದರಾದ ದೇವೇಂದ್ರಪ್ಪ, ಜಿಲ್ಲಾಧ್ಯಕ್ಷರಾದ ಚನ್ನಬಸನಗೌಡ ಪಾಟೀಲ್, ವಿಭಾಗ, ಪ್ರಭಾರಿಗಳ ಆದ ಸಿದ್ದೇಶ ಯಾದವ್, ಜಿಲ್ಲೆಯ ಪ್ರಭಾರಿ ಸಚ್ಚಿದಾನಂದ ಮೂರ್ತಿ .ಮಂಡಲ ಅಧ್ಯಕ್ಷರಾದ ವೀರೇಶ್ ಸ್ವಾಮಿ, ಉಪ ಅಧ್ಯಕ್ಷರಾದ ಮುರಾರಿ ಗೌಡ, ಸಫಾಯಿ ಕರ್ಮಚಾರಿ ಅಧ್ಯಕ್ಷರಾದ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ನಾಯ್ಡು, ರಮೇಶ್ ಮುಖಂಡರಾದ ಮಹಿಪಾಲ್, ದಮ್ಮೂರ್ ಶೇಖರ್ ಹಾಗೂ ಕಾರ್ಯಕರ್ತರು  ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement