ಅಂತರರಾಷ್ಟಿçಯ ಕನ್ನಡಿಗ ನೇತ್ರ ತಜ್ಞರೊಬ್ಬರು ಬಾಬಾ ಅಣುವಿಜ್ಞಾನ ಸಂಶೋಧನ ಕೇಂದ್ರದ ಸಹಯೋಗದೊಂದಿಗೆ ಕಣ್ಣಿನ ಪಟಲಗಳಲ್ಲಿ ಕಂಡುಬರುವ ಕ್ಯಾನ್ಸರ್ ಗೆಡ್ಡೆಗಳನ್ನು ಗುಣಪಡಿಸಿ ದೃಷ್ಟಿಯನ್ನು ಪುನ: ಪಡೆಯಲು ಸಾಧ್ಯವಾಗುವಂತೆ ಅಕ್ಷಿ-ಕ್ಷಕಿರಣ ಉಪಕರಣವೊಂದನ್ನು ದೇಶೀಯವಾಗಿ ತಯಾರಿಸಿದ್ದರೆ. ನಿಷ್ಪçಯೋಜಕ ಹಾಗೂ ಅಪಾಯಕಾರಿ ತ್ಯಾಜ್ಯ ಪದಾರ್ಥ (ನ್ಯೂಕ್ಲಿಯರ್ ವೇಸ್ಟ್) ದಿಂದ ಸೋವಿ ಬೆಲೆಯಲ್ಲಿ ಈ ಉಪಕರಣವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದರೆ.
ಹೈದರಾಬಾದಿನ “ಸೆಂಟರ್ ಫಾರ್ ಸೈಟ್” ಸಂಸ್ಥೆಯಲ್ಲಿ ಅಫ್ತಾಲ್ಮಿಕ್ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ:: ಸಂತೋಷ್ ಹೊನ್ನಾವರ್ ನೇತೃತ್ವದ ತಜ್ಞರ ತಂಡ ಹಾಗೂ ಬಾಬಾ ಅಣುವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಂಯುಕ್ತವಾಗಿ ದೃಷ್ಟಿ ಪಟಲ ಅರ್ಬುದ ರೋಗದ ಚಿಕಿತ್ಸೆಗೆ ಬಳಸುವ “ರುಥೇನಿಯಮ್ ಬ್ರಾಕಿ-ಥೆರಪಿ ಪ್ಲೇಕ್”ಗಳನ್ನು ಅಣು ವಿದ್ಯುತ್ ಸ್ಥಾವರಗಳ ವಿಸರ್ಜಿತ ತ್ಯಾಜ್ಯ ಪದಾರ್ಥದಿಂದ ಸೂಕ್ಷಾತಿಸೂಕ್ಷವಾಗಿ ಪರಿಷ್ಕರಿಸಿ ತಯಾರಿಸಿದ್ದ್ದಾರೆ. ಈ ಉಪಕರಣವನ್ನು ನೇತ್ರಾರ್ಬುದ ರೋಗಿಗಳನ್ನು ಗುಣಪಡಿಸಲು ಜರ್ಮನಿಯಿಂದ ಆಮದಾದ ಅಣುವಿಕಿರಣ ಬ್ರಾಕಿ-ಥೆರಪಿ ಫಲಕಗಳನ್ನು 2002 ರಿಂದ ಭಾರತದಲ್ಲಿ ಬಳಸಲಾಗುತ್ತಿತ್ತು. ಇಂತಹ ಫಲಕ (ಪ್ಲೇಕ್) ಒಂದಕ್ಕೆ ಡಾ:: ಹೊನ್ನಾವರ್ ಅವರ ಸಂಸ್ಥೆ 9.5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳನ್ನು ವಿದೇಶೀ ವಿನಿಮಯದಡಿಯಲ್ಲಿ ಖರೀದಿಸಬೇಕಿತ್ತು.
ಈ ಕಾರಣದಿಂದ ರೋಗಿಗಳಿಗೆ ಚಿಕಿತ್ಸೆಯ ಭಾರ ಅಪಾರವಾಗಿರುತ್ತಿತ್ತು. ಇದಕ್ಕೆ ಪರಿಹಾರವಾಗಿ ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮದ ಅಡಿಯಲ್ಲಿ ಡಾ:: ಹೊನ್ನಾವರ್ ಅವರ ತಮಡ ವಿನ್ಯಾಸಗೊಳಿಸಿ ರೂಪಿಸಲಾದ ರುಥೇನಿಯಮ್ ಫಲಕಗಳನ್ನು ಅಣು ವಿಜ್ಞಾನಿಗಳು ವಿವಿಧ ಅಣು ವಿದ್ಯುತ್ ಸ್ಥಾವರಗಳ ತ್ಯಾಜ್ಯ ಪದಾರ್ಥದಿಂದ ಜಂಟಿಯಾಗಿ ತಯಾರಿಸಿದ್ದಾರೆ. ಈ ಎರಡು ತಂಡಗಳು ಪ್ರೋಟೋ-ಟೈಪ್‌ಗಳನ್ನು ತಯಾರಿಸಿ, ರೋಗಿಗಳ ಗೆಡ್ಡೆಗಳ ಮೇಲೆ ಯಶಸ್ವಿಯಾಗಿ ಬಳಸಿ ಸುಧಾರಣೆಗಳನ್ನು ತಂದು ಉತ್ತಮ ಪಡಿಸಿದ್ದಾರೆ.
ನಮ್ಮ ಅನುಭವದ ಪ್ರಕಾರ ದೇಶೀಯವಾಗಿ ತಯಾರಿಸಿದ ಉಪಕರಣ ಆಮದಾದ ವಸ್ತುವಿಗಿಂತ ಉತ್ತಮ, ಸುಲಭ, ಹಾಗೂ ಸುರಕ್ಷಿತವಾಗಿದೆ ಎಂದು ಡಾ:: ಹೊನ್ನಾವರ್ ಈ ಲೇಖಕನಿಗೆ ಸಂದರ್ಶನದಲ್ಲಿ ತಿಳಿಸಿದರು. ಬ್ರಾಕಿ-ಥೆರಪಿಯ ವಿಶೇಷವೆಂದರೆ ಕಣ್ಣಿನ ಹುಣ್ಣುಗಳಿಗೆ ನೇರವಾಗಿ ಚಿಕಿತ್ಸೆ ನೀಡುವುದು. ಈ ಹುಣ್ಣುಗಳು ಅತಿ ಸಣ್ಣವಾದವು ಹಾಗೂ ಇವು ಕಾಣಿಸಿಕೊಳ್ಳುತ್ತಿದ್ದಂತೆ ರೋಗಿಗಳು ಅಂಧರಾಗಿ ಬಿಡುವರು. ಹಾಗಾಗಿ ಇಂತಹ ರೋಗಿಗಳನ್ನು ನೇತ್ರವೈದ್ಯರು ಸುಲಭವಾಗಿ ಪತ್ತೆ ಮಾಡಲು ಸಾಧ್ಯ ಹಾಗೂ ಈ ಹುಣ್ಣುಗಳನ್ನು ಆರಂಭದ ಹಂತದಲ್ಲೇ ಗುಣಪಡಿಸಬಹುದು. ಚಿಕಿತ್ಸೆ ತಡವಾದಷ್ಟೂ ದೇಹದ ಇತರ ಭಾಗಗಳಿಗೆ ಹರಡುವ ಅಪಾಯ ಹೆಚ್ಚು. ಕೆಲವು ಬಾರಿ ಮಾರಕವಾಗಿಯೂ ಪರಿಣಮಿಸಬಹುದು. ನೇತ್ರಾರ್ಬುದ ರೋಗಗಳು ಎರಡು ಬಗೆಯವು. ಮೂರು ವರ್ಷಗಳ ಎಳೆಯರಲ್ಲಿ ಜನ್ಮತ: ಕಂಡುಬರುವ ರೋಗವೆಂದರೆ” ರೆಟಿನಾ ಬ್ಲಾಸ್ಟೋಮಾ ಹಾಗೂ ವಯಸ್ಕರಲ್ಲಿ ಕಂಡುಬರುವ ರೋಗಕ್ಕೆ “ಮೆಲಿನೋಮಾ” ಎಂದು ಗುರುತಿಸಲಾಗಿದೆ.
ವಯಸ್ಕರ ಅರ್ಬುದ ರೋಗಕ್ಕೆ ಸುಮಾರು 90 ಭಾಗ ರೋಗಿಗಳಿಗೆ ವಿಕಿರಣ ಚಿಕಿತ್ಸೆಯ ಅಗತ್ಯ ಬೀಳುತ್ತದೆ ಹಾಗೂ ಚಿಕಿತ್ಸೆ ತಡವಾದಲ್ಲಿ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳು ಅಧಿಕ. ಮಕ್ಕಳಲ್ಲಿನ ರೋಗವನ್ನು ಬಹುತೇಕ ಕೀಮೋಥೆರಪಿ ಹಾಗೂ ಲೇಸರ್‌ನಿಂದ ಗುಣಪಡಿಸಬಹುದು. ಹೈದರಾಬಾದಿನ ಕೇಂದ್ರವೊAದರಲ್ಲೇ ಈ ವರೆಗೆ 30 ಕ್ಕೂ ಹೆಚ್ಚು ರೋಗಿಗಳಿಗೆ ಬ್ರಾಕಿ-ಥೆರಪಿ ಚಿಕಿತ್ಸೆ ನೀಡಲಾಗಿದೆ. ಇದಲ್ಲದೇ ಈ ಸಂಸ್ಥೆಯ ಬೆಂಗಳೂರು, ದೆಹಲಿ ಹಾಗೂ ಚೆನ್ನೆ ನಗರಗಳಲ್ಲಿ 300 ಕ್ಕೂ ಹೆಚ್ಚು ರೋಗಿಗಳನ್ನು ಗುರುತಿಸಿದೆ.
ದೇಶೀಯ ವಿಕಿರಣಗಳ ಇನ್ನೊಂದು ವಿಶೇಷವೆಂದರೆ ಈ ಉಪಕರಣವನ್ನು ಕ್ರಮಿಶೋಧಕಗಳಿಂದ-ಶುದ್ದಗೊಳಿಸಿ (ಸ್ಟೆರಿಲೈಜ್) ಅನೇಕ ರೋಗಿಗಳಿಗೆ ಒಂದೇ ಉಪಕರಣದಿಂದ ಒಂದು ವರ್ಷದವರೆಗೂ ಚಿಕಿತ್ಸೆ ನೀಡಬಹುದು. ಈ ಕಾರಣದಿಂದ ಅವರಿಗೆ ವೆಚ್ಚ ಭಾರವೂ ಕಡಿಮೆಯಾಗಲಿದೆ. ಎಲ್ಲಕ್ಕೂ ಮಿಗಿಲಾಗಿ ವಿಕಿರಣ ತ್ಯಾಜ್ಯವನ್ನು ತೊಲಗಿಸುವ ಕೆಲಸ ಅಪಾಯಕಾರಿ. ಹಾಗಾಗಿ ಈ ತ್ಯಾಜ್ಯವಸ್ತುವಿನಿಂದ ಮಾನವ ಹಿತಗಳ ಕಾರಣಕ್ಕಾಗಿ ಬಳಸಬಹುದುದಾದ ನೂತನ ಪರಿಪಾಠವನ್ನು ಹುಡುಕಿಕೊಂಡ ಹೆಮ್ಮೆಯೂ ಈ ಯೋಜನೆಯಿಂದ ಸಾಧ್ಯವಾಗಿದೆ.
ಈ ಮಧ್ಯೆ ಡಾ:: ಹೊನ್ನಾವರರವರಿಗೆ ಅಮೆರಿಕಾದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯ ಹಾಗೂ ನೆದರ್‌ಲ್ಯಾಂಡ್ ದೇಶದ ಪ್ರತಿಷ್ಠಿತ ತಂತ್ರಜ್ಞಾನ ಪತ್ರಿಕೆ ಎಲ್ಸಿವಿರ‍್ಸ್ ಭಾರತದ ಹತ್ತು ಶ್ರೇಷ್ಠ ನೇತ್ರ ತಜ್ಞರ ಪಟ್ಟಿಯಲ್ಲಿ ಸೇರಿಸಿವೆ. ಶ್ರೀಯುತರನ್ನು ಭಾರತ ಸರ್ಕಾರ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯಿಂದ ಈ ಮೊದಲು ಸನ್ಮಾನಿಸಿದೆ. ಅವರು 270 ಕ್ಕೂ ಹೆಚ್ಚು ಲೇಖನಗಳನ್ನು ವಿಶ್ವದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ ಹಾಗೂ ಒಂಭತ್ತು ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಇವರ ಲೇಖನಗಳನ್ನು ಉಲ್ಲೇಖಿಸಿದ್ದಾರೆ.
ಎಂ. ಚೆನ್ನನಾಗರಾಜ್

0 Comments