Ticker

6/recent/ticker-posts

Ad Code

Responsive Advertisement

ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್‌ರವರಿಗೆ ಕಲ್ಯಾಣ ಯೋಗ

ನವದೆಹಲಿ, ಡಿಸೆಂಬರ್ 09: ನವದೆಹಲಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಮದುವೆಯಾಗಿದ್ದಾರೆ. ತೇಜಸ್ವಿ ಯಾದವ್ ಅವರ ಸಹೋದರಿ ಮಿಸಾ ಭಾರ್ತಿ ಅವರ ಫಾರ್ಮ್ ಹೌಸ್ ನಲ್ಲಿ ಮದುವೆ ಸಮಾರಂಭ ನಡೆದಿದ್ದು, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಸಮೇತರಾಗಿ ಭಾಗಿಯಾಗಿದ್ದರು.

ಪ್ರಸ್ತುತ ಬಿಹಾರದ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ತೇಜಸ್ವಿ ಯಾದವ್ ರಾಘೋಪುರ್ ಕ್ಷೇತ್ರದ ಶಾಸಕರು ಕೂಡ ಆಗಿದ್ದಾರೆ. 2015 ರಿಂದ 17 ರವರೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ ಕೂಡ ಅವರು ಕಾರ್ಯನಿರ್ವಹಿಸಿದ್ದು, ಲಾಲೂ ಪ್ರಸಾದ್ ಯಾದವ್ ಅವರ 7 ಮಕ್ಕಳಲ್ಲಿ ತೇಜಸ್ವಿ ಕಿರಿಯವರು. ಸೈನಿಕ್ ಫಾರ್ಮ್ ಪ್ರದೇಶದಲ್ಲಿ ನಿಶ್ಚಿತಾರ್ಥ ಮತ್ತು ವಿವಾಹದ ವಿಧಿವಿಧಾನಗಳು ನೆರವೇರಿವೆ. ಆಪ್ತರು, ಹತ್ತಿರದ ಬಂಧುಗಳು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ. ತಮ್ಮ ಬಹುಕಾಲದ ಸ್ನೇಹಿತೆ ರಾಚೆಲ್ ಗೊಡಿನ್ಹೋ ಅವರನ್ನು ತೇಜಸ್ವಿ ವಿವಾಹವಾದರು. ವಧು ರೇಚೆಲ್ ಅವರನ್ನು ಈಗ ರಾಜೇಶ್ವರಿ ಯಾದವ್ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ.


Post a Comment

0 Comments

Ad Code

Responsive Advertisement