Ticker

6/recent/ticker-posts

Ad Code

Responsive Advertisement

ಚುನಾವಣೆ ಪ್ರಯುಕ್ತ ಬೃಹತ್ ಸಮಾವೇಶ ಕಾರ್ಯಕ್ರಮ-ವೀರಶೇಖರರೆಡ್ಡಿ

ಬಳ್ಳಾರಿ ಡಿ 02. ನಗರದಲ್ಲಿ ದಿನಾಂಕ : 03-12-2021 ಶುಕ್ರವಾರ  ಸಮಯ : ಬೆಳಿಗ್ಗೆ 10:00ಕ್ಕೆ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕೆ.ಆರ್.ಎಸ್. ಕಲ್ಯಾಣ ಮಂಟಪ, (ವಾಜಪೇಯಿ ಲೇಔಟ್ ಮುಂದುಗಡೆ) ಎಂದು ತಿಳಿಸಿದ್ದಾರೆ. 

ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್‌ಸಿ0ಗ್ ಹಾಗೂ ಅಖಂಡ ಜಿಲ್ಲಾ ಹಾಗೂ ರಾಜ್ಯ ನಾಯಕರು ಸಾರಿಗೆ ಸಚಿವರಾದ ಶ್ರೀರಾಮುಲು, ಜಿಲ್ಲಾಧ್ಯಕ್ಷರಾದ ಚೆನ್ನಬಸವನಗೌಡರು, ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದರು ಎಸ್.ಪಕ್ಕೀರಪ್ಪ, ಜಿಲ್ಲೆಯ ಎಲ್ಲಾ ಶಾಸಕರು ಮಾಜಿ ಶಾಸಕರು, ವಿಧಾನಪರಿಷತ್ ಅಭ್ಯರ್ಥಿ ವೈ ಎಂ ಸತೀಶ್, ಜಿಲ್ಲಾ, ರಾಜ್ಯ ಪದಾದಿಕಾರಿಗಳು ಮಂಡಲದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಹಾಗೆಯೇ ವಿಶೇಷವಾಗಿ ಈ ಸಭೆಗೆ ಗೌರವಾನ್ವಿತ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸರ್ವ ಸದಸ್ಯರು, ಮಹಾನಗರ ಪಾಲಿಕೆಯ ಸದಸ್ಯರು ಮಾಜಿ ಮಹಾನಗರ ಪಾಲಿಕೆಯ ಸದಸ್ಯರು, ರಾಜ್ಯ, ಜಿಲ್ಲಾ, ಮಂಡಲದ ಹಾಗೂ ಪ್ರಕೋಸ್ಟದ ಎಲ್ಲಾ ಪದಾಧಿಕಾರಿಗಳು ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಸರ್ವ ಸದಸ್ಯರು, ಮಹಿಳಾ ಮೋರ್ಚಾ ಅಧ್ಯಕ್ಷರು, ಸರ್ವ ಸದಸ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿ.ವೀರಶೇಖರರೆಡ್ಡಿ ನಾಮ ನಿರ್ದೇಶಕರು, ಬಳ್ಳಾರಿ ರಾಯಚೂರು ಹಾಗೂ ಕೊಪ್ಪಳ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಬಳ್ಳಾರಿ ತಿಳಿಸಿದ್ದಾರೆ.



Post a Comment

0 Comments

Ad Code

Responsive Advertisement