Ticker

6/recent/ticker-posts

Ad Code

Responsive Advertisement

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯಲ್ಲಿ ರೈತ ದಿನಾಚರಣೆ

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕವು ರೈತರ ದಿನಾಚರಣೆಯನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಚರಿಸಲಾಯಿತು.

ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಕಾರ್ಯದರ್ಶಿ, ಲಕ್ಷ್ಮೀಪತಯ್ಯ, ಅವರು ಕಾರ್ಯಕ್ರಮ ಉದ್ಘಾಟಿಸಿ ಭಾರತದಲ್ಲಿ ಸಹಕಾರ ಸಂಘಗಳ ಪಿತಾಮಹ ಡಾ. ವರ್ಗೀಸ್ ಕುರಿಯನ್ ರವರನ್ನು ರೈತರ ದಿನಾಚರಣೆಯೆಂದು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗುಜರಾತ್‍ನಲ್ಲಿ ರೈತರನ್ನು ಮಧ್ಯವರ್ತಿಗಳಿಂದ ವಿಮುಕ್ತಗೊಳಿಸಿ, ಒಗ್ಗೂಡಿಸಿ ಆನಂದ್ ಬ್ರಾಂಡ್‍ನ್ನು ವಿಶ್ವದೆಲ್ಲೆಡೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಹಕಾರ ಸಂಘಗಳು ಇತ್ತೀಚಿನ ದಿನಗಳಲ್ಲಿ ರೈತರ ಅಭಿವೃದ್ಧಿ ಜೊತೆಗೆ ಗ್ರಾಮೀಣ ಅಭಿವೃದ್ಧಿಗೂ ಮುಂದಾಗಿ ರಸ್ತೆ ಮತ್ತು ಕುಡಿಯುವ ನೀರಿನ ಸೌಕರ್ಯವನ್ನು ಸಹ ಒದಗಿಸುತ್ತಿದೆ. ಆದುದರಿಂದ ರೈತ ಬಾಂಧವರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ವಿಜೇತರು, ಕೋಲಾರ ಜಿಲ್ಲೆಯ ಮದನಹಳ್ಳಿ, ರೈತರಾದ ಎಂ.ಎನ್. ರವಿಶಂಕರ್, ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಒಂದೇ ಬೆಳೆಗೆ ಮಾರುಹೋಗದೆ ಬಹು ಬೆಳೆಗಳನ್ನು ಮಾರುಕಟ್ಟೆ ಮಾಹಿತಿ ಮೇರೆಗೆ ಬೆಳೆದು ಲಾಭಗಳಿಸಲು ಮುಂದಾಗಬೇಕು. ಸಾವಿನ ದವಡೆಯಲ್ಲಿದ್ದ ನಾನು ಟೊಮೊಟೊವನ್ನು ಬೆಳೆÉದು ಸಾಲ ತೀರಿಸಿ ಬೆಂಗಳೂರಿನಲ್ಲಿ ನಿವೇಶನ ಹೊಂದಲು ಸಮಗ್ರ ಕೃಷಿಯೇ ಮೂಲ ಕಾರಣವೆಂದರು.

ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ, ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆಯ ತರಬೇತಿ ಸಂಯೋಜಕರಾದ, ಡಾ. ಕೆ. ಶಿವರಾಮು, ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೃಷಿ ಕೇವಲ ಒಂದು ಕಾಯಕವಾಗದೇ ನಮ್ಮ ರಾಷ್ಟ್ರದ ಸಂಸ್ಕøತಿಯ ಭಾಗವೂ ಆಗಿದೆ. ನಮ್ಮ ಗ್ರಾಮೀಣ ಬದುಕು, ಕಲೆ, ಉಡುಗೆ-ತೊಡುಗೆ ಮತ್ತು ಊಟ-ಉಪಚಾರ ಎಲ್ಲದರ ಮೂಲ ಕೃಷಿಯೇ ಆಗಿದೆ. ಕೃಷಿ ನಮ್ಮ ಬದುಕಿನ ಭಾಗವಾಗದೇ ಕೃಷಿಯೇ ನಮ್ಮ ಬದುಕಾಗಿದೆ. ರೈತರ ದಿನಾಚರಣೆ ಅಥವಾ ರಾಷ್ಟ್ರೀಯ ರೈತರ ದಿನವನ್ನು ಡಿಸೆಂಬರ್ 23 ರಂದು ಭಾರತದ ಐದನೇ ಪ್ರಧಾನ ಮಂತ್ರಿ ಚೌದರಿ ಚರಣ್ ಸಿಂಗ್ ಅವರ ಜನ್ಮ ದಿನದಂದು ಆಚರಿಸಲಾಗುತ್ತಿದೆ. ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ಶ್ರೀಯುತರು ತಮ್ಮ ರೈತ ಸ್ನೇಹಿ ನೀತಿಗಳಾದ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆ ಜಾರಿ, ಜಮೀನ್ದಾರಿ ಪದ್ಧತಿ ರದ್ದುಗೊಳಿಸುವಿಕೆ ಹಾಗೂ ಕಿಸಾನ್ ಟ್ರಸ್ಟ್ ಸ್ಥಾಪಿಸುವುದರ ಮೂಲಕ “ಭಾರತದ ರೈತರ ಚಾಂಪಿಯನ್” ಎಂದು ಪ್ರಸಿದ್ಧರಾದರು. ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರ ರೈತ ಪರ ಕಲ್ಯಾಣ ನೀತಿಗಳನ್ನು ಗುರುತಿಸಿದ ಕೇಂದ್ರ ಸರ್ಕಾರ 2001 ರಿಂದ ಚೌದರಿ ಚರಣ್ ಸಿಂಗ್ ರವರ ಜನುಮ ದಿನವನ್ನು ರೈತರ ದಿನಾಚರಣೆಯಾಗಿ ಹಮ್ಮಿಕೊಳ್ಳುತ್ತಿದೆ. ಇವÀರ ಪ್ರಖ್ಯಾತ ಸಂದೇಶವೆಂದರೆ ನಿಜವಾದ ಭಾರತ ಹಳ್ಳಿಗಳಲ್ಲಿ ಎಂಬುದು. ರೈತರ ದಿನಾಚರಣೆಯ ಮುಖ್ಯ ಉದ್ದೇಶವೆಂದರೆ ರೈತರು ಮತ್ತು ಕೃಷಿಗೆ ಸಂಬಂದಿಸಿದ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಚರ್ಚೆ, ವೇದಿಕೆ, ರಸಪ್ರಶ್ನೆ ಮತ್ತು ಸ್ಪರ್ಧೆ ಆಯೋಜಿಸುವುದು.

ಕಳೆದ ಬಾರಿ ದಾಖಲೆಯ 309 ಮಿ.ಟನ್ ಆಹಾರ ಬೆಳೆಗಳಿಂದ, 326 ಮಿ.ಟನ್ ತೋಟಗಾರಿಕಾ ಬೆಳೆಗಳಿಂದ, 187 ಮಿ.ಟನ್ ಹೈನುಗಾರಿಕೆಯಿಂದ, 80 ಮಿ.ಟನ್ ಮಾಂಸ ಮೊಟ್ಟೆಗಳಿಂದ ಉತ್ಪಾದನೆಯಾಗುತ್ತಿದ್ದು, ಒಟ್ಟಾರೆ 900 ಮಿ.ಟನ್ ನಮ್ಮ ರಾಷ್ಟ್ರದ ಒಟ್ಟು ಕೃಷಿ ಕ್ಷೇತ್ರದ ಉತ್ಪಾದನೆಯಾಗಿದೆ. ಇದು ಏಷ್ಯಾದ ಶೇ.23ರಷ್ಟು ಹಾಗೂ ಜಾಗತಿಕ ಮಟ್ಟದ ಶೇ.11 ರಷ್ಟು ಉತ್ಪಾದನೆಯಾಗಿರುತ್ತದೆ. ಆದಾಗ್ಯೂ 2030ನೇ ಸಾಲಿಗೆ 350 ಮಿ.ಟನ್ ಹಾಗೂ 2050ಕ್ಕೆ 405 ಮಿ. ಟನ್ ಆಹಾರದ ಉತ್ಪಾದನೆಯ ಅಗತ್ಯತೆ ಇದೆ. ರಾಷ್ಟ್ರದ ಆಹಾರ ಭದ್ರತೆಯಲ್ಲಿ ಕೃಷಿಕರ ಪಾತ್ರ ನಿರ್ಣಾಯಕವಾಗಿದ್ದರೂ ಸಹ ಕೃಷಿಕರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳನ್ನು ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿಕರು ಕೇವಲ ಉತ್ತಿ, ಬಿತ್ತಿ, ಕೊಯ್ಲು ಮಾಡಿದರೆ ತಮ್ಮ ಕೆಲಸ ಮುಗಿಯಿತು ಎನ್ನುವ ಪರಿಕಲ್ಪನೆಯಿಂದ ಹೊರಬಂದು, ಕೊಯ್ಲೋತ್ತರ ಕೃಷಿಯಲ್ಲಿ (ಸಂಸ್ಕರಣೆ, ಮೌಲ್ಯವರ್ಧನೆ, ಗ್ರೇಡಿಂಗ್, ಬ್ರಾಂಡಿಂಗ್, ಇತ್ಯಾದಿ) ತಮ್ಮನ್ನು ತೊಡಗಿಸಿಕೊಂಡಿದ್ದೆಯಾದಲ್ಲಿ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ.

ಪ್ರಸ್ತುತ ಭಾರತೀಯ ಆಹಾರ ಹಾಗೂ ದಿನಸಿ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಆರನೇ ಸ್ಥಾನದಲ್ಲಿದ್ದು, ಆಹಾರ ಸಂಸ್ಕರಣೆ ಒಟ್ಟು ಆಹಾರ ಮಾರುಕಟ್ಟೆಗೆ ಶೇ.32ರಷ್ಟು ಕೊಡುಗೆಯನ್ನು ನೀಡುತ್ತಿದ್ದು, ಶೇ.13ರಷ್ಟು ಸಂಸ್ಕರಿಸಿದÀ ಉತ್ಪನ್ನಗಳು ರಫ್ತಾಗುತ್ತಿವೆ. ಒಟ್ಟಾರೆ, ಭಾರತೀಯ ಆಹಾರ ಸಂಸ್ಕರಣಾ ಮಾರುಕಟ್ಟೆ 2018ರ ಅಂಕಿ ಅಂಶಗಳ ಪ್ರಕಾರ 24,665 ಬಿಲಿಯನ್ ವಹಿವಾಟು ಹೊಂದಿದ್ದು, 2024ರ ಹೊತ್ತಿಗೆ 50 ಸಾವಿರ ಬಿಲಿಯನ್ ದಾಟಲಿದ್ದು, ಈ ವಿಫುಲ ಅವಕಾಶಗಳನ್ನು ಕೃಷಿಕರು ಬಳಸಿಕೊಳ್ಳಬೇಕಾಗಿದೆ. ಇದರ ಜೊತೆಗೆ ಕೃಷಿ ಲಾಭದಾಯಕವಾಗಬೇಕಾದಲ್ಲಿ ಉತ್ಪಾದನಾ ವೆಚ್ಚವನ್ನು ತಗ್ಗಿಸಬೇಕಾಗಿದೆ. ಸಂಪನ್ಮೂಲಗಳ ಸದ್ಭಳಕೆ, ಅಗತ್ಯತೆಗೆ ಅನುಗುಣವಾಗಿ ಕೃಷಿ ಪರಿಕರಗಳ ಬಳಕೆ, ಕೃಷಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಲು ಯಂತ್ರೋಪಕರಣಗಳ ಬಳಕೆ, ಸಾಗರದಾಚೆಯ ಮಾರುಕಟ್ಟೆಗಳ ಹುಡುಕಾಟ ಸಹ ಅನಿವಾರ್ಯವಾಗುತ್ತಿದೆ. ಮುಂದುವರೆದು ಇತರೆ ಕ್ಷೇತ್ರಗಳಂತೆ ಕೃಷಿ ಕ್ಷೇತ್ರದಲ್ಲೂ ಮಾಹಿತಿ ತಂತ್ರಜ್ಞಾನ, ಆಧುನಿಕ ತಂತ್ರಜ್ಞಾನಗಳನ್ನು ಹೆಚ್ಚು-ಹೆಚ್ಚು ಬಳಕೆ ಮಾಡುವ ಅನಿವಾರ್ಯತೆಯಿದ್ದು ಕೃಷಿಕರು ಮೊಬೈಲ್ ಆಪ್‍ಗಳನ್ನು ಬಳಸುವ ಮೂಲಕ (ತಂತ್ರಜ್ಞಾನ, ಮಾರುಕಟ್ಟೆ, ಹವಾಮಾನ) ಹೆಚ್ಚಿನ ಮಾಹಿತಿ  ಪಡೆದು ಕೃಷಿಯಲ್ಲಿನ ನಷ್ಟದ ಪ್ರಮಾಣ ತಗ್ಗಿಸಿ, ನಿಖರ ಕೃಷಿ, ಆಟೋಮೇಶನ್, ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿ ಜಾಗತಿಕ ಸ್ಪರ್ಧೆಯ ಮೂಲಕ ಸುಸ್ಥಿರತೆಯನ್ನು ಕಂಡುಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಕೃಷಿಕರ ಪ್ರಗತಿಯ ಮೇಲೆ ರಾಷ್ಟ್ರದ ಭವಿಷ್ಯ ಅವಲಂಭಿತವಾಗಿದ್ದು, ಈ ಕುರಿತಾದ ಹೊಸ ಸಾಧ್ಯತೆಗಳನ್ನು ಈ ದಿನಾಚರಣೆ ತೆರದಿಡುವಂತಾಗಲಿ ಎಂದು  ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ. ಎಂ.ಎಸ್. ಗಣಪತಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ಮಾರಾಟ, ಸಹಕಾರ ಮತ್ತು ವ್ಯವಹಾರ ನಿರ್ವಹಣೆ ವಿಭಾಗ, ಡಾ. ಆರ್. ನಾರಾಯಣರೆಡ್ಡಿ, ಸಹ ಪಾಧ್ಯಾಪಕರು, ಸಿಬ್ಬಂದಿ ತರಬೇತಿ ಘಟಕ, ಕೃವಿವಿ, ಜಿಕೆವಿಕೆ, ಬೆಂಗಳೂರು ಮತ್ತು ಪ್ರಗತಿಪರ ರೈತರಾದ ಮಂಜುನಾಥ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement