ಬಿಎಂಟಿಸಿಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್‌ಗಳನ್ನು ನೀಡುತ್ತಿದ್ದು, ಸಾರ್ವಜನಿಕರನ್ನು ವೋಲ್ವೋ ಸೇವೆಗಳಲ್ಲಿ ಪ್ರಯಾಣಿಸಲು ಉತ್ತೇಜಿಸುವ ಸಲುವಾಗಿ, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರವನ್ನು ರೂ.2000/- ರಿಂದ ರೂ.1500/- ಕ್ಕೆ ಇಳಿಸಿದೆ.
ಪರಿಷ್ಕೃತ ವಜ್ರ ಮಾಸಿಕ ಪಾಸ್‌ಗಳನ್ನು 28.12.2021 ರಿಂದ ವಜ್ರ ಸೇವೆಗಳಲ್ಲಿ ಕಂಡಕ್ಟರ್‌ಗಳ ಮೂಲಕ ಮತ್ತು ಬಿಎಂಟಿಸಿಯ ಪ್ರಮುಖ ಬಸ್ ನಿಲ್ದಾಣಗಳು ಮತ್ತು ಟಿಟಿಎಂಸಿಗಳಲ್ಲಿ ನೀಡಲಾಗುತ್ತಿದೆ.
ಇದಲ್ಲದೆ, ಜನವರಿ-2022 ಸಾಮಾನ್ಯ ಸೇವಾ ಮಾಸಿಕ ಪಾಸ್‌ಗಳನ್ನು 28.12.2021 ರಿಂದ ನೀಡಲಾಗುತ್ತಿದೆ.
- ಬೆಂ.ಮ.ಸಾ.ಸಂಸ್ಥೆ
0 Comments