Ticker

6/recent/ticker-posts

Ad Code

Responsive Advertisement

AAM AADMI PARTY : ಕಸವನಹಳ್ಳಿ ಒತ್ತುವರಿ: ಶಾಸಕ ಅರವಿಂದ ಲಿಂಬಾವಳಿಯವರ ಪ್ರಭಾವವಿದೆ

ಕಸವನಹಳ್ಳಿಯ 5ನೇ ಅಡ್ಡರಸ್ತೆಯ ಒತ್ತುವರಿ ತರವಾಗದೇ ಇರುವುದರ ಹಿಂದೆ ಶಾಸಕ ಅರವಿಂದ ಲಿಂಬಾವಳಿಯವರ ಪ್ರಭಾವವಿದ್ದು, ರಸ್ತೆಯ ಒತ್ತುವರಿ ತೆರವುಗೊಳಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್‌ ವಿ ಸದಂ, “ಬಿಬಿಎಂಪಿಯ ದಾಖಲೆಗಳಲ್ಲಿ ಕಸವನಹಳ್ಳಿಯ 5ನೇ ಅಡ್ಡರಸ್ತೆಯು 14 ಮೀಟರ್‌ ಅಗಲವಿದೆ. ಬಿಬಿಎಂಪಿಯ ಜಂಟಿ ಆಯುಕ್ತರು ರಸ್ತೆಯನ್ನು ಪರಿಶೀಲನೆ ಮಾಡಿ, ಜನವರಿ 12, 2011ರಂದು ದೃಢೀಕರಣವನ್ನೂ ನೀಡಿದ್ದಾರೆ. 2013ರವರೆಗೂ ಜನರ ಸಂಚಾರಕ್ಕೆ ಬಳಕೆಯಾಗುತ್ತಿದ್ದ ಈ ರಸ್ತೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ಇದರಿಂದಾಗಿ ಮುದಲಿಯರ್‌ ಬಡಾವಣೆಗೆ ದೂರದ ಮಾರ್ಗ ಬಳಸಿ ಹೋಗಬೇಕಾಗಿದೆ. ಮಕ್ಕಳಿಗೆ ಶಾಲೆಗೆ ಹೋಗಲು ಕೂಡ ಒತ್ತುವರಿಯಿಂದ ಅಡ್ಡಿಯಾಗಿದೆ. ಶಾಸಕ ಲಿಂಬಾವಳಿಯವರು ಆಡಳಿತ ಪಕ್ಷದ ಪ್ರಭಾವಿ ನಾಯಕರಾಗಿರುವುದರಿಂದ ರಾಜ್ಯ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಆದ್ದರಿಂದ ರಾಜ್ಯಪಾಲರು ಮಧ್ಯಪ್ರವೇಶ ಮಾಡಲೇ ಬೇಕು” ಎಂದು ಆಗ್ರಹಿಸಿದರು.


    • ಮಹದೇವಪುರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯರವರು ಮಾತನಾಡಿ, “14 ಮೀಟರ್‌ ಅಗಲವಿದ್ದ ರಸ್ತೆಯು ಸುಮಾರು 500 ಮೀಟರ್‌ ಉದ್ದದವರೆಗೆ ಒತ್ತುವರಿಯಾಗಿದೆ. ಅಲ್ಲಿದ್ದ ʻಕಸವನಹಳ್ಳಿ 5ನೇ ಅಡ್ಡರಸ್ತೆʼ ಎಂಬ ಬೋರ್ಡನ್ನೇ ಕಿತ್ತು ಎಸೆದಿದ್ದಾರೆ. 80 ಅಡಿ ಅಗಲದ ರಸ್ತೆ ಇರಬೇಕೆಂಬ ನಿಯಮದ ಸಂಪೂರ್ಣ ಉಲ್ಲಂಘಿಸಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ಹಾಗೂ ಶಾಸಕ ಲಿಂಬಾವಳಿಯವರಿಗೆ ಹತ್ತು ವರ್ಷಗಳಿಂದ ದೂರು ನೀಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರಸ್ತೆಯನ್ನು ಸಂಚಾರಕ್ಕೆ ಮುಕ್ತವಾಗಿಸಲು ಲಿಂಬಾವಳಿ ಹಿಂದೇಟು ಹಾಕುತ್ತಿರುವುದರ ಹಿಂದಿನ ಮರ್ಮವೇನು? ಸಮೀಪದ ರಸ್ತೆಯ ದುರಸ್ತಿಗೆ ಎರಡು ಬಾರಿ ಟೆಂಡರ್‌ ಆಗಿದ್ದರೂ ಕಾಮಗಾರಿ ಮಾತ್ರ ನಡೆದಿಲ್ಲ. ಟೆಂಡರ್‌ ಮೊತ್ತವು ಯಾರ ಜೇಬು ಸೇರಿದೆ?” ಎಂದು ಪ್ರಶ್ನಿಸಿದರು.

    “ಶಾಸಕ ಲಿಂಬಾವಳಿಯವರು ಈ ಒತ್ತುವರಿಗೆ ಕೈಜೋಡಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಆದ್ದರಿಂದ ರಾಜ್ಯಪಾಲರೇ ಮಧ್ಯಪ್ರವೇಶಿಸಿ ದಿಟ್ಟ ಆದೇಶ ನೀಡಿ ಒತ್ತುವರಿ ತೆರವು ಮಾಡಿಸಿಕೊಡಬೇಕು. ಮಹದೇವಪುರ ಕ್ಷೇತ್ರದಲ್ಲೆಡೆ ಕೆರೆ, ರಸ್ತೆ, ರಾಜಕಾಲುವೆ, ಗೋಮಾಳ ಸೇರಿದಂತೆ ಭಾರೀ ಪ್ರಮಾಣದ ಒತ್ತುವರಿಯು ಅವ್ಯಾಹತವಾಗಿ ನಡೆಯುತ್ತಿದ್ದು, ಶೀಘ್ರವೇ ಸಮಗ್ರ ತನಿಖೆ ನಡೆದು ಸರ್ಕಾರ ಜಾಗದ ಸಂರಕ್ಷಣೆ ಆಗಬೇಕು. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದೇವೆ. ಒತ್ತುವರಿ ತೆರವುಗೊಳಿಸದಿದ್ದರೆ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಹಾಗೂ ಮುದಲಿಯರ್ ಲೇಔಟ್ ಸಾರ್ವಜನಿಕರು ಉಗ್ರ ಪ್ರತಿಭಟನೆ ಮಾಡಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ” ಎಂದು ಅಶೋಕ್‌ ಮೃತ್ಯುಂಜಯ ಎಚ್ಚರಿಕೆ ನೀಡಿದರೆ.

    ಭೂಕಬಳಿಕೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ.ಎಚ್.ಸುರೇಶ್ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಗ್ರಾಮಗಳ ಪೈಕಿ 31 ಗ್ರಾಮಗಳು ಮಹದೇವಪುರ ಕ್ಷೇತ್ರದಲ್ಲಿವೆ. ಅಲ್ಲಿ ನೂರಾರು ಎಕರೆ ಜಮೀನು ಒತ್ತುವರಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆದು ಒತ್ತುವರಿ ತೆರವಾಗಬೇಕು” ಎಂದು ಹೇಳಿದರು.

    Post a Comment

    0 Comments

    Ad Code

    Responsive Advertisement