Ticker

6/recent/ticker-posts

Ad Code

Responsive Advertisement

ತಮೋಹ ಆರ್ಟ್ಸ್ ಫೌಂಡೇಶನ್ ಪ್ರಸ್ತುತಿಯ ವಿಸ್ತೃತಿನೃತ್ಯೋತ್ಸವ 2021

ತಮೋಹ ಆರ್ಟ್ಸ್ ಫೌಂಡೇಶನ್ ಡಿ. 4ರಂದು ವಿಸ್ತೃತಿ ನೃತ್ಯೋತ್ಸವ 2021 ಹಮ್ಮಿಕೊಂಡಿರುತ್ತದೆ. ಮಲ್ಲೇಶ್ವರದ 14ನೇ ಕ್ರಾಸ್‌ನ ಸೇವಾ ಸದನದಲ್ಲಿ ಬೆಳಿಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಂತಲಾ ಆರ್ಟ್ಸ್ ಅಕಾಡೆಮಿ ಕಲಾ ನಿರ್ದೇಶಕ ವಿ. ಪುಲಿಕೇಶಿ ಕಸ್ತೂರಿ ಅವರು ನೃತ್ಯೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿರುವರು. 




ಭರತನಾಟ್ಯ ಕಲಾವಿದರಾದ ಅತುಲಾ ಚಂದ್ರಶೇಖರ್, ಶಶಾಂಕ ಕಿರಣ್ ನಾಯರ್, ಮಯೂರಿ ಕಾರಂತ, ಪಿ. ಅದ್ಯಾ ಮಯ್ಯ, ಸಿ. ಜಯಲತಾ, ವಿದ್ವಾನ್ ವಿನ್ಸೆಂಟ್ ಪೌಲ್, ಪ್ರಶಾಂತಿ ಸತೀಶ್, ವಿದುಷಿ ಮಹಿಮಾ ಹರೀಶ್ ಅವರು ಕಲಾ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ 2ನೇ ಹಂತದಲ್ಲಿ ಯಕ್ಷದೇಗುಲದ ಶ್ರೀ ರಾಮ ಹೆಬ್ಬಾರ್ ಅವರಿಮದ ವಿಶೇಷ ಯಕ್ಷಗಾನ, ಮೇಘನಾ ಚಂದ್ರಮೌಳಿ ಮತ್ತು ಪ್ರಿಯಾಂಕಾ ರಾಮಚಂದ್ರಯ್ಯ ಅವರಿಂದ ಕೂಚಿಪುಡಿ ನೃತ್ಯ, ವಿ. ಮೈಸೂರು ಬಿ.ನಾಗರಾಜ್ ಶಿಷ್ಯೆಯರಿಂದ ವಿಶೇಷ ಕಥಕ್ ನೃತ್ಯ, ಮಹಿಮಾ ದಶ್ ಮತ್ತು ನಂದನಾ ಶಶಿಕುಮಾರ್‌ರವರಿಂದ ಒಡಿಸ್ಸಿ ನೃತ್ಯ, ಚೈತ್ರಾ ಅನಂತ್ ಮತ್ತು ಎಂ. ರಾಜೇಶ್ವರಿ ಭರತನಾಟ್ಯ ಪ್ರಸ್ತುತಿ ಸಂಪನ್ನಗೊಳ್ಳಲಿದೆ. 

ಕಲಾರಸಿಕರು, ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು ಕಾರ್ಯಕ್ರಮಕ್ಕೆ ವಿಶೇಷ ಕಳೆ ಕಟ್ಟಲಿದೆ ಎಂದು ವಿದುಷಿ ಗಾಯತ್ರಿ ಮಯ್ಯ ಅವರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement