Ticker

6/recent/ticker-posts

Ad Code

Responsive Advertisement

P.R.Thippeswamy : Mysore Thippeswamy “ಚತುರ್ಮುಖ ಬ್ರಹ್ಮ ಪಿ.ಆರ್.ತಿಪ್ಪೇಸ್ವಾಮಿ”

ಪಿ.ಆರ್.ತಿಪ್ಪೇಸ್ವಾಮಿ ಅವರು ಕರ್ನಾಟಕ ಕಂಡ ಅಪ್ರತಿಮ ಕಲಾವಿದರು, ಸಾಹಿತಿಗಳು, ಜನಪದತಜ್ಞರು, ಸಾಮಾಜಿಕ ಕಳಕಳಿ ಉಳ್ಳವರಾಗಿದ್ದವರು. ಇವರನ್ನು ಚತುರ್ಮುಖ ಬ್ರಹ್ಮ ಎನ್ನುತ್ತಿದ್ದರು. ನಾಲ್ಕು ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದವರು. ಪಿ.ಆರ್.ಟಿ. ಎಂದು ಚಿರಪರಿಚಿತರು.  

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯಲ್ಲಿ ದಿನಾಂಕ : 11.08.1926 ರಂದು ಜನಿಸಿದರು. ತಂದೆ ಪಟೇಲ್ ರುದ್ರಪ್ಪ ತಾಯಿ ಲಕ್ಷö್ಮಮ್ಮನವರ ಹಿರಿಯ ಪುತ್ರ. ತಾತ ಪಟೇಲ್ ತಿಪ್ಪಯ್ಯನವರು. ತಂದೆ ಮತ್ತು ತಾತಾ ಪಟೇಲರಾಗಿದ್ದವರು. ಜಮೀನ್ದಾರರು, ಸುತ್ತಾ ಹತ್ತು ಹಳ್ಳಿಗಳಿಗೆ ಪ್ರಸಿದ್ಧರು. ಕುದುರೆ ಮೇಲಿನ ಒಡಾಟ, ತೆರಿಗೆ ಸಂಗ್ರಹಿಸಿ ಮೈಸೂರು ಅರಸರಿಗೆ ತಲುಪಿಸುವ ವಂಶ ಅವರದಾಗಿತ್ತು. ಪಟೇಲಗಿರಿಯನ್ನು ಪಿ.ಆರ್.ತಿಪ್ಪೇಸ್ವಾಮಿಯವರು ಮುಂದುವರಿಸಿಕೊAಡು ಹೋಗಲೆಂಬ ಮಹದಾಸೆ ಮನೆಯವರದಾಗಿತ್ತು.






ಒಮ್ಮೆ ಇವರ ಮನೆಗೆ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಬಂದಿದ್ದರು. ಗೋಡೆಯ ಮೇಲಿದ್ದ ಗಾಂದೀಜಿ ಚಿತ್ರ ಕಂಡು ಯಾರು ಬರೆದಿದ್ದು ಎಂದರು. ನನ್ನ ಮಗ ಎಂದು ತಂದೆ ರುದ್ರಪ್ಪನವರು ಪರಿಚಯಿಸಿದರು. ರಾಷ್ಟçನಾಯಕರ ಮತ್ತು ದೇವರ ಚಿತ್ರಗಳನ್ನೂ ತೋರಿಸಿದರು. ನಿಜಲಿಂಗಪ್ಪನವರಿಗೆ ತಿಪ್ಪೇಸ್ವಾಮಿಯವರಲ್ಲಿದ್ದ ಕಲಾಪ್ರತಿಭೆ ಅರಿವಾಯಿತು. ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ಗೆ ಕಳಿಸಿ ನಾನು ಪತ್ರ ಕೊಡುತ್ತೇನೆ ಎಂದು ಸಲಹೆ ನೀಡಿದರು. ಪಿ.ಆರ್.ತಿಪ್ಪೇಸ್ವಾಮಿಯವರಿಗೆ ಸಂತೋಷ, ಮನೆಯವರಿಗೆ ಸಂಕಟ. ಅಷ್ಟು ದೂರದೂರಿಗೆ ಹೇಗೆ ಕಳಿಸುವುದು, ಚಿಂತೆಯಾಯಿತು. ಆದರೂ ಒಲ್ಲದ ಮನಸ್ಸಿನಿಂದಲೇ ಕಳಿಸಿಕೊಟ್ಟರು.

ಪ್ರೆöÊಮರಿ ಶಿಕ್ಷಣ ಹರ್ತಿಕೋಟೆಯಲ್ಲಿ, ಇಂಟರ್ ಮೀಡಿಯೆಟ್‌ನ್ನು ಚಿತ್ರದುರ್ಗದಲ್ಲಿ ಮುಗಿಸಿದ್ದರು. ಬಿ.ಎ. ಪದವಿಯ ನಂತರ ಲಾಯರ್ ಆಗಲಿ ಎಂಬುದು ತಂದೆಯ ಆಸೆಯಾಗಿತ್ತು. ಆದರೆ ಕಲಾಶಿಕ್ಷಣ ಅರಸಿ ಮೈಸೂರಿಗೆ ಬರುವಂತಾಯಿತು. ಸಾಂಸ್ಕೃತಿಕ ರಾಜಧಾನಿಯಾದ ಮೈಸೂರನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಚಿತ್ರಕಲೆ, ಸಾಹಿತ್ಯ, ಜಾನಪದ ಮತ್ತು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಳೆದ 5-6 ದಶಕಗಳಲ್ಲಿ ಸಲ್ಲಿಸಿದ ಸೇವೆ ಅನನ್ಯವಾದುದು.

ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಸಂಚರಿಸಿ ನಿಸರ್ಗಚಿತ್ರಗಳನ್ನು ರಚಿಸಿದ್ದಾರೆ. ದೇವಾಲಯ, ಅರಮನೆ, ಕೋಟೆಕೊತ್ತಲು, ಕಮಾನು, ಕಾವಲುಗೋಪುರ, ಹೆಬ್ಬಾಗಿಲು, ಹಳ್ಳಿ, ಪಟ್ಟಣ, ಬಡವ ಶ್ರೀಮಂತರ ಮನೆಗಳು, ಮಠಮಾನ್ಯಗಳು, ಬೆಟ್ಟ, ಗುಡ್ಡ, ಗಿರಿ, ಶಿಖರಗಳು, ಮಲೆನಾಡಿನ ಭೂದೃಶ್ಯಗಳು, ಕರಾವಳಿಯ ಸಮುದ್ರದ ಕಿನಾರೆಗಳು, ಹಡಗುಗಳು, ರಥಗಳಂತಹ ಅದೆಷ್ಟೋ ಗತವೈಭವ ಸಾರಿದ ಪಳಿಯುಳಿಕೆಗಳ ಭಗ್ನಾವಶೇಷಗಳನ್ನು ತನ್ನ ಕುಂಚದಿAದ ಸೆರೆಹಿಡಿದಿಟ್ಟಿದ್ದಾರೆ. ಆ ಕಾಲಘಟ್ಟದ ಕುರುಹುಗಳನ್ನು ಶಾಶ್ವತಗೊಳಿಸಿದ್ದಾರೆ. ನಾರ್ವೆ, ಹ್ಯಾಂಡ್‌ಮೇಡ್ ಪೇಪರ್‌ಗಳನ್ನು, ವಿಲ್ಸನ್ ಅಂಡ್ ನ್ಯೂಟನ್ ಕೇಕ್ ಕರ‍್ಸ್ಗಳನ್ನು ಬಳಸಿದ್ದಾರೆ. ಆಫ್ ಇಂಪೀರಿಯಲ್ ಅಳತೆಯಲ್ಲಿ ಜಲವರ್ಣದಲ್ಲಿ ಹೆಚ್ಚಾಗಿ ಚಿತ್ರಗಳನ್ನು ರಚಿಸಿದ್ದಾರೆ. 


ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ (ಸಿ.ಟಿ.ಐ.)ನಲ್ಲಿ ಹೆಸರಾಂತ ಕಲಾವಿದರಿದ್ದರು. ಕೆ.ಕೇಶವಯ್ಯ, ಕೆ.ವೆಂಕಟಪ್ಪ, ಶಿಲ್ಪಿಸಿಂಗಣ್ಣಚಾರ್ಯ, ಎಸ್.ನಂಜುAಡಸ್ವಾಮಿ, ಎಂ.ವೀರಪ್ಪ, ಎಂ.ಜೆ.ಶುದ್ಧೋದನ, ಎಂ.ಇ.ಗುರು, ಎಸ್.ಎನ್.ಸ್ವಾಮಿ, ಪಾವಂಜೆ, ಎಂ.ನರಸಿAಹಯ್ಯ, ಎಫ್.ಮಹ್ಮಮದ್‌ಸೂಫಿ, ಎನ್.ಹನುಮಯ್ಯ, ವೈ.ನಾಗರಾಜು, ವೈ.ಸುಬ್ರಹ್ಮಣ್ಯರಾಜು, ಪಿ.ಸುಬ್ಬರಾವ್, ಎಸ್.ಆರ್.ಅಯ್ಯಂಗಾರ್, ಎಸ್.ಎಸ್.ಕುಕ್ಕೆ, ಎಸ್.ಆರ್.ಸ್ವಾಮಿ ಮುಂತಾದವರು ಗುರುಗಳಾಗಿದ್ದರು. 

ಸಿ.ಟಿ.ಐ. ಇಂದು ಕಾವಾ ಎಂದು ಪರಿವರ್ತನೆಗೊಂಡಿದೆ. ಇಲ್ಲಿ ಕಲಿತ ಹಲವಾರು ಕಲಾವಿದರು ರಾಷ್ಟç ಅಂತರಾಷ್ಟಿçÃಯ ಮಟ್ಟದಲ್ಲಿ ಮೈಸೂರಿನ ಗತವೈಭವವನ್ನು, ನಾಡಿನ ಪರಂಪರೆಯನ್ನು ಎಲ್ಲಡೆ ದಾಖಲಿಸಿದ್ದಾರೆ. ನೈಜ ಚಿತ್ರಕಲೆಗೆ ಹೆಚ್ಚು ಒತ್ತುಕೊಟ್ಟು ನಿಸರ್ಗಚಿತ್ರ, ಸ್ಥಿರಚಿತ್ರ, ಭಾವಚಿತ್ರ, ವ್ಯಕ್ತಿಚಿತ್ರ, ಸಂಯೋಜನಾಚಿತ್ರಗಳನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ. ತೈಲವರ್ಣ, ಜಲವರ್ಣಗಳಲ್ಲಿ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದಾರೆ. ಅದರಂತೆ ಪಿ.ಆರ್.ತಿಪ್ಪೇಸ್ವಾಮಿಯವರು ಸಹ ಆಸಕ್ತಿಯಿಂದ ಕಲಿತು ಮುಂದೆ ನಿಸರ್ಗ ಚಿತ್ರಕಲೆಯಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದರು. 


ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಸಂಚರಿಸಿ ನಿಸರ್ಗಚಿತ್ರಗಳನ್ನು ರಚಿಸಿದ್ದಾರೆ. ದೇವಾಲಯ, ಅರಮನೆ, ಕೋಟೆಕೊತ್ತಲು, ಕಮಾನು, ಕಾವಲುಗೋಪುರ, ಹೆಬ್ಬಾಗಿಲು, ಹಳ್ಳಿ, ಪಟ್ಟಣ, ಬಡವ ಶ್ರೀಮಂತರ ಮನೆಗಳು, ಮಠಮಾನ್ಯಗಳು, ಬೆಟ್ಟ, ಗುಡ್ಡ, ಗಿರಿ, ಶಿಖರಗಳು, ಮಲೆನಾಡಿನ ಭೂದೃಶ್ಯಗಳು, ಕರಾವಳಿಯ ಸಮುದ್ರದ ಕಿನಾರೆಗಳು, ಹಡಗುಗಳು, ರಥಗಳಂತಹ ಅದೆಷ್ಟೋ ಗತವೈಭವ ಸಾರಿದ ಪಳಿಯುಳಿಕೆಗಳ ಭಗ್ನಾವಶೇಷಗಳನ್ನು ತನ್ನ ಕುಂಚದಿAದ ಸೆರೆಹಿಡಿದಿಟ್ಟಿದ್ದಾರೆ. ಆ ಕಾಲಘಟ್ಟದ ಕುರುಹುಗಳನ್ನು ಶಾಶ್ವತಗೊಳಿಸಿದ್ದಾರೆ. ನಾರ್ವೆ, ಹ್ಯಾಂಡ್‌ಮೇಡ್ ಪೇಪರ್‌ಗಳನ್ನು, ವಿಲ್ಸನ್ ಅಂಡ್ ನ್ಯೂಟನ್ ಕೇಕ್ ಕರ‍್ಸ್ಗಳನ್ನು ಬಳಸಿದ್ದಾರೆ. ಆಫ್ ಇಂಪೀರಿಯಲ್ ಅಳತೆಯಲ್ಲಿ ಜಲವರ್ಣದಲ್ಲಿ ಹೆಚ್ಚಾಗಿ ಚಿತ್ರಗಳನ್ನು ರಚಿಸಿದ್ದಾರೆ. 

ಎಂದೂ ಸಹ ತನ್ನ ಕಲಾಕೃತಿಗಳನ್ನು ಮಾರಾಟ ಮಾಡಲು ಒಪ್ಪದ ಪಿ.ಆರ್.ಟಿ.ಯವರು ಹಲವು ಖ್ಯಾತ ಸಾಹಿತಿಗಳು, ಕಲಾವಿದರು, ಹಿತೈಷಿಗಳು ಹಾಗೂ ವಸ್ತುಸಂಗ್ರಹಾಲಯಗಳು, ಇಲಾಖೆಗಳು, ಮಠಮಂದಿರಗಳಿಗೆ ಕಾಣಿಕೆಯಾಗಿ ನೀಡಿದ್ದಾರೆ. ಹಾಗಾಗಿ ಎಲ್ಲಡೆ ಇವರ ನಿಸರ್ಗಚಿತ್ರಗಳು ಕಂಡುಬರುತ್ತವೆ. ಕುವೆಂಪುರವರೊAದಿಗೆ ಅವಿನಾಭಾವ ಸಂಭAದ ಹೊಂದಿದ್ದರು. ಅವರ ಸಲಹೆಯಂತೆ ಕುಪ್ಪಳಿಗೆ ತೆರಳಿ ಕವಿಶೈಲ, ಮಲೆನಾಡು, ಕುಂದಾದ್ರಿಯ ಬೆಟ್ಟ ಸಮೂಹವನ್ನು ರಚಿಸಿ ತಂದಿದ್ದರು. ಮಲೆನಾಡಿಗೂ ಉದಯರವಿಗೂ ಪಿ.ಆರ್.ತಿಪ್ಪೇಸ್ವಾಮಿಯವರು ಕಿಂಡಿ ಕೊರೆದಿದ್ದಾರೆಂದು ಕುವೆಂಪುರವರು ಹಾಡಿ ಹೊಗಳಿದ್ದಾರೆ. ಇವರ ಕಲಾಕೃತಿಗಳಿಂದ ಸ್ಪೂರ್ತಿಹೊಂದಿ ಸ್ವತಃ ಕವಿತೆಯನ್ನು ಬರೆದಿದ್ದಾರೆ. ಇದು ಪಿ.ಆರ್.ಟಿ.ಯವರಿಗೆ ಸಿಕ್ಕ ಬಹುದೊಡ್ಡ ಮನ್ನಣೆ ಎನ್ನಬಹುದು. ಮಾಸ್ತಿ, ಪುತಿನಾ, ಹಾಮಾನಾ, ದೇಜಗೌ, ನಿಸಾರ್‌ಅಹಮದ್, ಜೀಶಂಪ ಮುಂತಾದವರೂ ಸಹ ಮೆಚ್ಚಿಕೊಂಡಿದ್ದಾರೆ. ಕಥೆ, ಕಾದಂಬರಿ ಮುಖಪುಟಗಳಿಗೆ ಸಾಂದರ್ಭಿಕಚಿತ್ರಗಳು, ವ್ಯಂಗ್ಯಚಿತ್ರಗಳು, ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಸಹ ರಚಿಸಿದ್ದಾರೆ.

ಜಾನಪದ :

ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕಟ್ಟಿದ ಜಾನಪದ ವಸ್ತುಸಂಗ್ರಹಾಲಯವು ಅಂತರ್‌ರಾಷ್ಟಿçÃಯ ಮನ್ನಣೆ ಪಡೆದಿದೆ. ಇಡೀ ಏಷ್ಯಾದಲ್ಲಿ ಪ್ರತಿಷ್ಠಿತ ಮ್ಯೂಸಿಯಂ ಎಂದು ಗುರುತಿಸಲ್ಪಟ್ಟಿದೆ. ಶ್ರೀಕ್ಷೇತ್ರ ಸುತ್ತೂರು, ಧರ್ಮಸ್ಥಳದ ಮಂಜೂಷ ಮ್ಯೂಸಿಯಂಗಳ ಸ್ಥಾಪನೆಗಾಗಿ ದುಡಿದಿದ್ದಾರೆ. ಇವರ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡ ಅನೇಕರು ಮ್ಯೂಸಿಯಂಗಳ ಮಾಂತ್ರಿಕ, ಜಾನಪದ ಜಂಗಮರೆAದು ಇವರನ್ನು ಕೊಂಡಾಡಿದ್ದಾರೆ. 

ಪಿ.ಆರ್.ತಿಪ್ಪೇಸ್ವಾಮಿರವರು ಮೈಸೂರು ವಿ.ವಿ.ಯ ಕುಲಪತಿಗಳಾಗಿದ್ದ ದೇ.ಜವರೆಗೌಡವರೊಂದಿಗೆ ಚರ್ಚಿಸಿ ಗ್ರಾಮೀಣ ಪ್ರದೇಶಗಳಲ್ಲಿ ಅಡಕಗೊಂಡಿರುವ ಜಾನಪದದ ಅಮೂಲ್ಯವಾದ ವಸ್ತುಗಳನ್ನು ಸಂಗ್ರಹಿಸುವ ಸಾಹಸಕ್ಕೆ ಮುನ್ನುಡಿ ಬರೆದರು. ನಾಡಿನ ಮೂಲೆ ಮೂಲೆಗಳಿಂದ ಜಾನಪದ ವಸ್ತುಗಳನ್ನು ತಂದು ಜಗದ್ವಿಖ್ಯಾತಗೊಳಿಸಿದರು. ಮಲೆನಾಡು, ಕರಾವಳಿ, ಬಯಲು ಸೀಮೆಗಳ ಹಳ್ಳಿಹಳ್ಳಿಗಳಲ್ಲಿ ತಿರುಗಿ ಆ ಭಾಗದ ಪ್ರಚಲಿತ ಆಚರಣೆಗಳು, ಹಬ್ಬಗಳು, ಜಾತ್ರೆ ಉತ್ಸವಗಳು, ನಂಬಿಕೆಗಳು, ಮೂಢನಂಬಿಕೆಗಳಿಗೆ ಸಂಭAದಿಸಿದ ಸಾವಿರಾರು ವಸ್ತುಗಳನ್ನು ತಂದು ಮ್ಯೂಸಿಯಂಗಳಲ್ಲಿ ಅಣಿಗೊಳಿಸಿದ್ದಾರೆ.

ಜನಪದರ ಬದುಕಿನೊಂದಿಗೆ ಬದುಕಿದ್ದ ವಸ್ತುಗಳು ಮಣ್ಣಾಗದೆ, ಸುಟ್ಟು ಕರಕಲಾಗದೆ ಅಳಿದುಳಿದ ವಸ್ತುಗಳನ್ನು ಕಾಪಾಡಿ ಹಿಂದಿನ ಕಾಲಘಟ್ಟದ ಬದಕನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪಿ.ಆರ್.ತಿಪ್ಪೇಸ್ವಾಮಿರವರು ಮಾಡಿದ್ದಾರೆ. ವಾಹನಗಳ ಸೌಕರ್ಯಗಳಿಲ್ಲದ ಕಾಲದಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಊರೂರು ಸುತ್ತಿ ತಲೆಯ ಮೇಲೆ ಹೊತ್ತು ತಂದಿದ್ದಾರೆ. ಅe್ಞÁತ ಸ್ಥಳಗಳಲ್ಲಿ ಅಡಗಿದ್ದ ಅಮೂಲ್ಯವಾದ ವಸ್ತುಗಳು ಇಂದು ಜಾನಪದ ವಸ್ತುಸಂಗ್ರಹಾಲಯದ ಶೋಕೇಸ್‌ನಲ್ಲಿ ಭದ್ರಗೊಂಡಿವೆ. ಆಟಿಕೆಗಳು, ಆಭರಣಗಳು, ಪೂಜಸಾಮಗ್ರಿಗಳು, ಮಡಿಕೆಕುಡಿಕೆ ಪಾತ್ರೆಪಡಗಗಳು, ವಾದ್ಯಪರಿಕರಗಳು, ವ್ಯವಸಾಯದ ವಸ್ತುಗಳು, ಬೇಟೆಗಾರಿಕೆಯ ವಸ್ತುಗಳು, ವ್ಯಾಪಾರದ ಸಲಕರಣೆಗಳು, ವೇಶಭೂಷಣಗಳು, ಮುಖವಾಡಗಳು, ಜಾನಪದ ಚಿತ್ರ-ಶಿಲ್ಪಗಳು, ರಥಗಳು, ಮಂಟಪ, ಕೈದೋಣಿಗಳಂತಹ ಕಂಡು ಕೇಳರಿಯದ ಅಪರೂಪದ ವಸ್ತುಗಳನ್ನು ಇಲ್ಲಿ ಕಾಣಬಹುದು. 

ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ವಸ್ತುಸಂಗ್ರಹಾಲಯವನ್ನು ಕಂಡು ಸ್ಪೂರ್ತಿಹೊಂದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರಹೆಗಡೆಯವರು ಧರ್ಮಸ್ಥಳದಲ್ಲೊಂದು ವಸ್ತುಸಂಗ್ರಹಾಲಯವನ್ನು ಮಾಡುವ ಆಸೆ ವ್ಯಕ್ತಪಡಿಸಿ ಈ ಮಹತ್ಕಾರ್ಯಕ್ಕೆ ಪಿ.ಆರ್.ತಿಪ್ಪೇಸ್ವಾಮಿರವರನ್ನು ಆಹ್ವಾನಿಸಿದರು. ಹೆಗಡೆಯವರ ಮೇಲಿನ ಪ್ರೀತಿ, ಮಂಜುನಾಥಸ್ವಾಮಿಯ ಭಕ್ತಿಯಿಂದ ಒಪ್ಪಿ ನಾಲ್ಕೆöದು ವರ್ಷ ಅಲ್ಲೆ ಇದ್ದು ಮಂಜೂಷ ವಸ್ತುಸಂಗ್ರಹಾಲಯವನ್ನು ಒಪ್ಪ ಓರಣ ಮಾಡಿ ಬಂದರು.

ಈ ಎರಡು ಮ್ಯೂಸಿಯಂಗಳನ್ನು ಆಸಕ್ತಿಯಿಂದ ಗಮನಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಸಹ ಪಿ.ಆರ್.ತಿಪ್ಪೇಸ್ವಾಮಿರವರನ್ನು ಆಹ್ವಾನಿಸಿದರು. ಅದರಂತೆ ಬಾಲ್ಯದಲ್ಲಿ ಮೈಸೂರಿಗೆ ಬಂದಾಗ ಹಿರಿಯ ಶ್ರೀಗಳಾದ ರಾಜೇಂದ್ರ ಸ್ವಾಮೀಜಿಯವರು ತೋರಿದ ಪ್ರೀತಿ ಮತ್ತು ಆಶ್ರಯ ನೀಡಿದ್ದ ಮಠಕ್ಕೆ ಋಣ ತೀರಿಸುವ ಅವಕಾಶವೆಂದು ತಿಳಿದು ಇಳಿ ವಯಸ್ಸಿನಲ್ಲಿ ಸುತ್ತೂರು ಜಾನಪದ ವಸ್ತುಸಂಗ್ರಹಾಲಯವನ್ನು ಅಣಿಗೊಳಿಸಿದರು. ಮುಂದೆ ಕೊಯಮತ್ತೂರು ವಿ.ವಿ. ಮತ್ತು ಚಿತ್ರದುರ್ಗದ ಮುರುಘಾಮಠದಿಂದ ಬಂದ ಆಹ್ವಾನವನ್ನು ಪೂರೈಸಲು ಸಾಧ್ಯವಾಗಲಿಲ್ಲ.

ಇವರು ಕಟ್ಟಿದ ಜಾನಪದ ವಸ್ತುಸಂಗ್ರಹಾಲಯಗಳಲ್ಲಿ ಸಂಗ್ರಹಿಸಿರುವ ಸಹಸ್ರಾರು ವಸ್ತುಗಳನ್ನು ಯಥಾವತ್ತಾಗಿ ವಸ್ತುಚಿತ್ರಣದಂತೆ ರೇಖಾಚಿತ್ರಗಳ ರಚನೆಯ ಮೂಲಕ ದಾಖಲೆ ಪುಸ್ತಕದಲ್ಲಿ ಚಿತ್ರಿಸಿಟ್ಟಿದ್ದಾರೆ. ಇಂದು ಇವು ಸಂಗ್ರಹಗಳ ಮಹಾ ಚಿತ್ರಗ್ರಂಥಗಳೆನಿಸಿವೆ. ಅದರ ಅಳತೆ, ಆಕಾರ, ಎಲ್ಲಿಂದ ತಂದಿದ್ದು ಪೂರ್ಣ ವಿವರ ದಾಖಲಾಗಿದೆ. 

ಸಾಹಿತ್ಯ :

ಕಲಾಶಿಕ್ಷಣ ಮುಗಿಯುವ ಹೊತ್ತಿಗೆ ಮಹಾರಾಜ, ಯುವರಾಜ, ಮೈಸೂರು ವಿ.ವಿ.ಯಯಲ್ಲಿನ ಹಲವು ಸ್ನೇಹಿತರೊಂದಿಗಿನ ಒಡನಾಟ ಮತ್ತು ತಂದೆಯ ಇಚ್ಛೆಯಂತೆ ಬಿ.ಎ.ಪದವಿ ಮಾಡಲು ಮುಂದಾದರು. ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡರು. ಕೈ ಬರಹದ ಪತ್ರಕೆಗಳನ್ನು ಬರೆದು ಹಂಚಿದರು. ಹೆಸರಾಂತ ಸಾಹಿತಿಗಳ ಮಾರ್ಗದರ್ಶನ ಸಿಕ್ಕಿತು. ಸ್ವತಃ ಕಲಾವಿದರಾಗಿದ್ದರಿಂದ ಮುಖಪುಟ ವಿನ್ಯಾಸ, ಸಾಂದರ್ಭಿಕ ಚಿತ್ರಗಳು, ವ್ಯಂಗ್ಯಚಿತ್ರಗಳನ್ನು ರಚಿಸಿ ಕೊಡುತ್ತಿದ್ದರು. ಇದರಿಂದಾಗಿ ಸಾಹಿತಿಗಳಿಗೆ ತುಂಬ ಹತ್ತಿರವಾದರು. ದಿನಪತ್ರಿಕೆಗಳಿಗೆ ಸುಧಾ, ಮಯೂರ, ಪ್ರಜಾಮತ, ಪ್ರಪಂಚ ಮುಂತಾದ ವಾರಪತ್ರಿಕೆ, ಸಾಪ್ತಾಹಿಕಗಳಿಗೆ, ಕಲೆ ಮತ್ತು ಕಲಾವಿದರ ಬಗ್ಗೆ ನಿರಂತರವಾಗಿ ಲೇಖನಗಳನ್ನು ಬರೆದರು. ಎಲೆಮರೆಯಂತಿದ್ದ ಅದೆಷ್ಟೋ ಚಿತ್ರ ಶಿಲ್ಪ ಜಾನಪದ ಕಲಾವಿದರನ್ನು ಹೊರಜಗತ್ತಿಗೆ ಪರಿಚಯಿಸಿದರು. ಅವರಿಗೆ ಸಿಗಬೇಕಾದ ಗೌರವ, ಪ್ರಶಸ್ತಿ, ಮಾಶಾಸನ, ಸಹಾಯವನ್ನು ಸರ್ಕಾರದಿಂದ, ಮಠಮಾನ್ಯಗಳಿಂದ, ಸಂಘಸAಸ್ಥೆಗಳಿAದ ಕೊಡಿಸಿದರು. ಕಲೆ ಕಲಾವಿದರಿಗೆ ಅನ್ಯಾಯವಾದರೆ ಪ್ರತಿಭಟಿಸಿದರು. ನ್ಯಾಯ ದೊರಕಿಸಿಕೊಟ್ಟರು. ಇವರ ಬರವಣಿಗೆಯಿಂದ ಇದೆಲ್ಲ ಸಾಧ್ಯವಾಯಿತು ಎನ್ನಬಹುದು. 

ಕನ್ನಡದಲ್ಲಿ ಚಿತ್ರಕಲೆಗಳಿಗೆ ಸಂಬAದಿಸಿದ ಪುಸ್ತಕಗಳೇ ಇಲ್ಲದ ಕಾಲದಲ್ಲಿ ಕಲಾವಿದರಿಗಾಗಿ ಕಲೆಗೆ ಸಂಭAದಿಸಿದ ಭಾರತೀಯ ಚಿತ್ರಕಲೆ, ರಸಯಾತ್ರೆ, ಕಲೋಪಾಸಕರು, ಕೆ.ವೆಂಕಟಪ್ಪ, ಎಸ್.ಎಂ.ಸೂಫಿ, ಎಸ್.ನಂಜುAಡಸ್ವಾಮಿ, ಕಲಾವಿದ ಕಂಡ ಪ್ರಾನ್ಸ್, ಕಲಾವಿದನ ನೆನಪುಗಳು, ಶಿಲ್ಪಿಸಂಕುಲ, ಹೋರಾಟಗಾರ ಕೆಂಚಪ್ಪ, ಎಂ.ವೀರಪ್ಪ, ಮುಂತಾದ ಹದಿನೇಳು ಪುಸ್ತಕಗಳನ್ನು ಬರೆದು ಕಲಾಜಗತ್ತಿಗೆ ಪರಿಚಯಿಸಿದರು. 

ಸಮಾಜ ಸೇವೆ :

ಕಲಾಲೋಕದ ಕ್ರಿಯಾಶೀಲರಾದ ಇವರನ್ನು ಕರ್ನಾಟಕ ಸರ್ಕಾರ 1991-95ರ ಅವಧಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿ ಗೌರವಿಸಿತು. ಅಧ್ಯಕ್ಷರಾಗಿ ಅವರು ಮಾಡಿದ ಕಾರ್ಯಸಾಧನೆ ಅಭೂತಪೂರ್ವ. ಸರ್ಕಾರ ಇವರಿಗೆ ಕಾರು ನೀಡಲು ಮುಂದಾದಾಗ ಅದನ್ನು ತಿರಸ್ಕರಿಸಿ ಅದರ ಹಣ ಪಡೆದು 4 ವರ್ಷಗಳ ಅವಧಿಯಲ್ಲಿ ಕಲೆಗೆ ಸಂಭAದಿಸಿದ 47 ಗ್ರಂಥಗಳನ್ನು ಪ್ರಕಟಿಸಿದ್ದು ಅಕಾಡಮಿಯ ಇತಿಹಾಸದ ಮೈಲಿಗಲ್ಲು ಎನ್ನಬಹುದು.

ನಾಡಿನ ಹಲವಾರು ದೇವಾಲಯಗಳಲ್ಲಿ, ಮಠಮಂದಿರಗಳಲ್ಲಿ ಅವನತಿಯ ಅಂಚಿನಲ್ಲಿರುವ ಭಿತ್ತಿಚಿತ್ರಗಳನ್ನು ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣಮಾಡಿ ದಾಖಲಿಸಿಡುವ ಮಹತ್ಕಾರ್ಯಕ್ಕೆ ಚಾಲನೆ ನೀಡಿದರು. ಚಿತ್ರಕಲೆಗೆ ಸೀಮಿತವಾಗಿದ್ದ ಅಕಾಡಮಿಯಲ್ಲಿ ಛಾಯಾಚಿತ್ರಣವು ಒಂದು ಕಲಾಪ್ರಕಾರವೆಂದು ಗುರುತಿಸಿ ಛಾಯಾಚಿತ್ರಕಲೆಗೆ ಅಕಾಡಮಿ ಮಾನ್ಯತೆಯನ್ನು ನೀಡಿದರು. 

ಪಿ.ಆರ್.ತಿಪ್ಪೇಸ್ವಾಮಿರವರು ಹಲವಾರು ಪ್ರಶಸ್ತಿ-ಬಿರುದುಗಳಿಗೆ ಭಾಜನರಾಗಿದ್ದಾರೆ. ಇವರಿಗೆ ಪ್ರೊ. ಎಚ್ಚೆಸ್ಕೆ ಚತುರ್ಮುಖ ಕುಂಚಬ್ರಹ್ಮನೆAದು ಕರೆದರು. ನಾಡಿನ ಹಲವು ಮಠಮಾನ್ಯಗಳು ಚಿತ್ರಕಲಾಕೋವಿದ, ಚಿತ್ರಕಲಾರತ್ನ, ಕನಕಭೂಷಣ, ಚಿತ್ರಲೇಖನ ಚತುರ ಬಿರುದುಗಳನ್ನು ನೀಡಿ ಸತ್ಕರಿಸಿದವು. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಗೌರವಪ್ರಶಸ್ತಿ, ಅಖಿಲ ಭಾರತ ಜಾನಪದ ಗೌರವಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿಗಳು ಇವರನ್ನರಸಿ ಬಂದಿವೆ. 

ತುಂಬ ಸರಳ ವ್ಯಕ್ತಿತ್ವದ ಪಿ.ಆರ್.ಟಿ.ಯವರು ಬ್ರಹ್ಮಚಾರಿಯಾಗಿದ್ದರು. ಮೈಸೂರಿನ ರಾಮವಿಲಾಸ ರಸ್ತೆಯ ವಠಾರದÀಲ್ಲಿ ಧೀರ್ಘಕಾಲ ವಾಸವಾಗಿದ್ದರು. ಆ ಮನೆ ನಾಡಿನ ಬೇರೆ ಭಾಗದಿಂದ ಬಂದ ಕಲಾವಿದರಿಗೆ, ಹಿತೈಷಿಗಳಿಗೆ ಆಶ್ರಯತಾಣವಾಗಿತ್ತು. ಮೈಸೂರಿನ ಕಲಾವಿದರನ್ನು ಸಂಘಟಿಸುವ ಸಲುವಾಗಿ ಕಲಾವಿದರನ್ನು ಒಗ್ಗೂಡಿಸಿ ಚಿತ್ರಕಲಾಸಂಘವನ್ನು ಸ್ಥಾಪಿಸಿ ಕಲಾಚಟುವಟಿಕೆಗಳನ್ನು ಸಕ್ರಿಯಗೊಳಿಸಿದರು. ದಸರಾ ವಸ್ತುಪ್ರದರ್ಶನದ ಲಲಿತಕಲಾ ವಿಭಾಗದ ಉಸ್ತುವಾರಿ ವಹಿಸಿಕೊಂಡು ಹತ್ತಾರು ವರ್ಷಗಳ ಕಾಲ ಕಲೆ ಮತ್ತು ಕಲಾವಿದರನ್ನು ವೈಭವೀಕರಿಸಿದರು. 

ತನ್ನ 78ನೇ ವಯಸ್ಸಿನವರೆಗೂ ಲವಲವಿಕೆಯಿಂದಿದ್ದ ಪಿ.ಆರ್.ಟಿ.ಯವರಿಗೆ ವಯೋಸಹಜ ಕಾಯಿಲೆಯಂತೆ ಹೃದಯ ಸಂಬAದಿ ಕಾಯಿಲೆಯಿಂದಾಗಿ ದಿನಾಂಕ : 07.04.2000ದಂದು ಇಹಲೋಕ ತ್ಯಜಿಸಿದರು. ನಂತರ ಇವರ ಅಭಿಮಾನಿಗಳು ಪಿಆರ್‌ಟಿ ಟ್ರಸ್ಟ್ನ್ನು ಸ್ಥಾಪಿಸಿ, ಕಲೆಗೆ ಸಂಬAದಿಸಿದ ಚಟುವಟಿಕೆಗಳನ್ನು ನಾಡಿನ ಎಲ್ಲಾ ಭಾಗಗಳಲ್ಲೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕರ್ನಾಟಕ ಸರ್ಕಾರವು ಮೈಸೂರು ವಿ.ವಿ.ಯಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಅಧ್ಯಯನಪೀಠವನ್ನು ಸ್ಥಾಪಿಸಿದೆ. ಮೈಸೂರು ಮಹಾನಗರಪಾಲಿಕೆಯು ಮೈಸೂರಿನ ಮಾನಸ ಗಂಗೋತ್ರಿಯ ಪ್ರಮುಖ ವೃತ್ತಕ್ಕೆ ಪಿ.ಆರ್.ತಿಪ್ಪೇಸ್ವಾಮಿ ವೃತ್ತ ಎಂದು ನಾಮಕರಣ ಮಾಡಿದೆ. ಸರ್ಕಾರ ಹರ್ತಿಕೋಟೆಯಲ್ಲಿರುವ ಪಿ.ಆರ್.ತಿಪ್ಪೇಸ್ವಾಮಿಯವರ ಸಮಾಧಿಯನ್ನು ಅಭಿವೃದ್ಧಿಪಡಿಸಿದೆ. ಪಿ.ಆರ್.ಟಿ.ಯವರ ಹೆಸರಲ್ಲಿ ನಿರಂತರವಾಗಿ ಚಿತ್ರಕಲೆ ಮತ್ತು ಜಾನಪದಕಲೆಯ ಚಟುವಟಿಕೆಗಳನ್ನು ಅವರ ಅನುಯಾಯಿಗಳು ಮುಂದುವರಿಸಿಕೊAಡು ಬರುತ್ತಿದ್ದಾರೆ.

ಕೆ.ಸಿ.ಮಹದೇವಶೆಟ್ಟಿ

ಪ್ರಾಚಾರ್ಯರು ಮತ್ತು ಕಲಾವಿದರು

ಮೈಸೂರು, 9742918181


Post a Comment

0 Comments

Ad Code

Responsive Advertisement