ಇದೇ ನವೆಂಬರ್ 28ರಂದು ಬೆಂಗಳೂರಿನ ಮತ್ತೀಕೆರೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಗೆ ಅನೇಕ ಭಕ್ತರಿಂದ ಪಾದಪೂಜೆಯನ್ನು ಮಾಡಲಾಯಿತು.
ಶ್ರೀಮತಿ ಮಾನಸ ಕುಲ್ಕರ್ಣಿ ಅವರ ಗಾಯನದೊಂದಿಗೆ ಶ್ರೀಗಳಿಂದ ದೀಪ ಬೆಳಗುವ ಮುಖಾಂತರ ಕಾರ್ಯಕ್ರಮ ಪ್ರಾರಂಭವಾಯಿತು.
ಇದೆ ಸಂದರ್ಭದಲ್ಲಿ ಡಾ. ಎನ್ ಜಿ ವಿಜಯಲಕ್ಷ್ಮಿ ಅವರ ಮಂಗಳಾಂಗಹರಿ ವಿಠಲ ಅಂಕಿತನಾಮದ ಶ್ರೀಮತಿ ಮಾನಸ ಕುಲ್ಕರ್ಣಿ ಅವರು ಹಾಡಿರುವ ದಾಸರ ಪದಗಳ CD ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮತ್ತೀಕೆರಿ ಮಠದ ಪದಾಧಿಕಾರಿಗಳು ಮತ್ತು ಅನೇಕ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.
0 Comments