ರಾಷ್ಟಿಯ ಚಿಣ್ಣರ 2ನೇ ಹಬ್ಬದ ಸಾಂಸ್ಕೃತಿಕ ಕಲಾಪ್ರದರ್ಶನಕ್ಕೆ ಕರೆ
ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೊಡುಗೆ ಅಪಾರ. ಅವರಿಂದ ನಾಡಿನ ಕೀರ್ತಿ ದೇಶ, ವಿದೇಶಗಳಲ್ಲಿ ಹರಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದ ಗೌರವವನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದೆ. ಈಗಾಗಲೇ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ವಿ.ಕೃ. ಗೋಕಾಕರ ಹೆಸರಿನಲ್ಲಿ, ರಾಷ್ಟಿçಯ ಕಲಾ ಪ್ರತಿಭೋತ್ಸವಗಳನ್ನು ತಲಾ ನಾಲ್ಕು ದಿನಗಳಂತೆ ರಾಷ್ಟçಮಟ್ಟದಲ್ಲಿ ನಡೆಸಲಾಗಿದೆ.
ದಿನಾಂಕ 9, 10, 11, 12 - ಡಿಸೆಂಬರ್ - 2021 ರಲ್ಲಿ ಮಲೆನಾಡು ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ ಮತ್ತು 6ನೇ ಜ್ಞಾನಪೀಠ ಮಾಲಿಕೆಯಾಗಿ, ಡಾ. ಯು.ಆರ್. ಅನಂತಮೂರ್ತಿ ರಾಷ್ಟಿಯ ಕಲಾ ಪ್ರತಿಭೋತ್ಸವ ಹಾಗೂ ರಾಷ್ಟಿçಯ ಚಿಣ್ಣರ 2ನೇ ಹಬ್ಬವನ್ನು ಸೇರಿಸಿ, ಶಿವಮೊಗ್ಗದ ಕುವೆಂಪು ರಂಗಮAದಿರದಲ್ಲಿ ಈ ಉತ್ಸವವನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಕುರಿತು 2 ವಿಚಾರ ಸಂಕಿರಣಗಳು, 8 ಉಪನ್ಯಾಸಗಳು, ಕವಿಗಳ ಕಣ್ಣಲ್ಲಿ ಯು.ಆರ್. ಅನಂತಮೂರ್ತಿ ಕವಿಗೋಷ್ಠಿ ಹಾಗೂ ಅನಂತಮೂರ್ತಿ ಕೃತಿ ಆದಾರಿತ 2 ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗುತ್ತದೆ. ಮುಂದಿನ ಪೀಳಿಗೆಗೆ ಅನಂತಮೂರ್ತಿ ನೆನಪಿಸುವ ಮೂಲಕ, ಅವರ ಕೊಡುಗೆ, ಸಾಧನೆಯನ್ನು, ಈ ರಾಷ್ಟಿಯ ಕಲಾ ಪ್ರತಿಭೋತ್ಸವ ಬಿಂಬಸಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಹೊರರಾಜ್ಯದ ಕನ್ನಡಿಗರು ಭಾಗವಹಿಸಲಿದ್ದಾರೆ.
ಮಲೆನಾಡು ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ : ಕರ್ನಾಟಕದಲ್ಲಿ ಪ್ರಾದೇಶಿಕ ಸಂಸ್ಕೃತಿಯನ್ನು ಗುರುತಿಸುವ ನಿಟ್ಟಿನಲ್ಲಿ, ಕರ್ನಾಟಕದಲ್ಲಿ 9 ಕಂದಾಯ ವಿಭಾಗಗಳನ್ನು ಗುರುತಿಸಬಹುದು. ಈಗಿರುವ ನಾಲ್ಕು ಕಂದಾಯ ವಿಭಾಗವನ್ನು 9 ಕಂದಾಯ ವಿಭಾಗ ಮಾಡಿ, ಅಧಿಕಾರ ವಿಕೇಂದ್ರಿಕರಣ ಮಾಡಬೇಕಿದೆ. ಈಗಾಗಲೇ ಸಂಸ್ಥೆ, ಮೂರು ಕಂದಾಯ ವಿಭಾಗದಲ್ಲಿ ಕಾರ್ಯಕ್ರಮ ನಡೆಯಿಸಿದೆ. 1) ಕೆಂಪೇಗೌಡ ಕರ್ನಾಟಕ : ಬೆಂಗಳೂರು ಕೇಂದ್ರ ಸ್ಥಾನ, (ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮಧುಗಿರಿ, ತಿಪಟೂರು, ನೆಲಮಂಗಲ ಮತ್ತು ಹೊಸಕೋಟೆ ಬೆಂ.ಗ್ರಾ., ಯಲಹಂಕ ಮತ್ತು ಕೆಂಗೇರಿ ಬೆಂಗಳೂರು ನಗರ - 10 ಜಿಲ್ಲೆಗಳು), 2) ಕಲ್ಯಾಣ ಕರ್ನಾಟಕ : ಕಲಬುರ್ಗಿ ಕೇಂದ್ರ ಸ್ಥಾನ (ರಾಯಚೂರು, ಸಿಂಧನೂರು, ಯಾದಗಿರಿ, ಕಲಬುರ್ಗಿ, ಬೀದರ್ - 5 ಜಿಲ್ಲೆಗಳು), 3) ಕಿತ್ತೂರು ಕರ್ನಾಟಕ : ಬೆಳಗಾವಿ ಕೇಂದ್ರ ಸ್ಥಾನ (ಬೆಳಗಾವಿ, ಧಾರವಾಡ, ಗೋಕಾಕ್, ಚಿಕ್ಕೋಡಿ - 4 ಜಿಲ್ಲೆಗಳು), 4) ಕರಾವಳಿ ಕರ್ನಾಟಕ : ಉಡುಪಿ ಕೇಂದ್ರ ಸ್ಥಾನ (ದಕ್ಷಿಣ ಕನ್ನಡ, ಉಡುಪಿ, ಪುತ್ತೂರು, ಉತ್ತರ ಕನ್ನಡ, ಶಿರಸಿ - 5 ಜಿಲ್ಲೆಗಳು), 5) ಕಾವೇರಿ ಕರ್ನಾಟಕ : ಮೈಸೂರು ಕೇಂದ್ರ ಸ್ಥಾನ (ಮೈಸೂರು, ಮಂಡ್ಯ, ಚಾಮರಾಜನಗರ, ಹುಣಸೂರು, ಕೊಡಗು - 5 ಜಿಲ್ಲೆಗಳು), 6) ಮಲೆನಾಡು ಕರ್ನಾಟಕ : ಶಿವಮೊಗ್ಗ ಕೇಂದ್ರ ಸ್ಥಾನ (ಹಾಸನ, ಚಿಕ್ಕಮಗಳೂರು, ಶಿವಮೊಗ್ಗ - 3 ಜಿಲ್ಲೆಗಳು), 7) ಮದಕರಿ ಕರ್ನಾಟಕ : ದಾವಣಗೆರೆ ಕೇಂದ್ರ ಸ್ಥಾನ (ಚಿತ್ರದುರ್ಗ, ದಾವಣಗೆರೆ, ಹಾವೇರಿ - 3 ಜಿಲ್ಲೆಗಳು), 8) ವಿಜಯನಗರ ಕರ್ನಾಟಕ : ಕೊಪ್ಪಳ ಕೇಂದ್ರ ಸ್ಥಾನ (ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ - 4 ಜಿಲ್ಲೆಗಳು), 9) ಚಾಲುಕ್ಯ ಕರ್ನಾಟಕ : ಬಿಜಾಪುರ ಕೇಂದ್ರ ಸ್ಥಾನ (ಬಿಜಾಪುರ, ಇಂಡಿ, ಬಾಗಲಕೋಟೆ - 3 ಜಿಲ್ಲೆಗಳು)
ಈ ರೀತಿಯಲ್ಲಿ ರಾಜ್ಯದ ಪ್ರಾದೇಶಿಕತೆ ಗುರುತಿಸಿ, ಈ ಪ್ರದೇಶಗಳ ಅಸಮತೋಲನ ಅಭಿವೃದ್ಧಿ ಪಡಿಸಲು ಅಧಿಕಾರ ವಿಕೇಂದ್ರಿಕರಣದ ಅವಶ್ಯಕತೆ ಇದೆ. ನಾಯಕತ್ವದ ಬೆಳವಣಿಗೆ ದೃಷ್ಟಿಯಿಂದಲು ಈ ವಿಂಗಡಣೆ ಅವಶ್ಯಕತೆ ಇದೆ. ಆಗ ಮಾತ್ರ ಅಖಂಡ ಕರ್ನಾಟಕ ಒಗ್ಗಟ್ಟಿನಿಂದ ಇರಲು ಸಾಧ್ಯ. ಈ ನಿಟ್ಟಿನಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮಲೆನಾಡು ಕರ್ನಾಟಕವಾಗಿ ಗುರುತಿಸಿ, ಈ ಭಾಗದ ಪ್ರಾದೇಶಿಕ ಸಂಸ್ಕೃತಿಗೆ ಈ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗಿದೆ. ಭಿನ್ನವಾದ ಕಲೆ, ಸಂಸ್ಕೃತಿ ಹಾಗೂ ಹೋರಾಟದ ಕೆಚ್ಚಿಗೆ ಸ್ಪಂದಿಸಲು ಈ ಉತ್ಸವದಲ್ಲಿ ಅವಕಾಶವಿದೆ. ಮಲೆನಾಡು ಕರ್ನಾಟಕದ ಪ್ರಾದೇಶಿಕತೆಗೆ ಕುರಿತು 2 ವಿಚಾರ ಸಂಕಿರಣ, 8 ಉಪನ್ಯಾಸ ಹಾಗೂ ಸ್ಥಳೀಯ ಕಲಾವಿದರಿಂದ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದಾಖಲಿಸುವದೆ, ಮಲೆನಾಡು ಕರ್ನಾಟಕದ ಪ್ರಾದೇಶಿಕ ಸಾಂಸ್ಕೃತಿಕ ಉತ್ಸವದ ಉದ್ದೇಶ.
ರಾಷ್ಟಿಯ ಚಿಣ್ಣರ 2ನೇ ಹಬ್ಬ : ಮಗು ತನ್ನ 5ನೇ ವರ್ಷಕ್ಕೆ ತನ್ನೊಳಗಿನ ಪ್ರತಿಭೆಗೆ ಚಾಲನೆ ನೀಡುತ್ತದೆ. 5 ರಿಂದ 15 ಅದರ ಆಂತರಿಕ ಪ್ರತಿಭೆ ಹೊರ ಹೊಮ್ಮಲು ಈ ವೇದಿಕೆ ಪೂರಕವಾಗಿದೆ. ಹಾಡು, ಕುಣಿತ, ಅನುಕರಣೆ, ವೇಷ-ಭೂಷಣ ಹಾಗೂ ಅದರ ಕ್ರೀಯಾಶೀಲತೆಗೆ ರಾಷ್ಟಿಯ ಚಿಣ್ಣರ ಹಬ್ಬ ಕನ್ನಡಿ ಹಿಡಿಯಲಿದೆ. ಈ ಮೂರು ಹಂತದ ಉತ್ಸವಗಳ ಸಮ್ಮೇಳನವನ್ನು 4 ದಿನಗಳ ಕಾಲ ಶಿವಮೊಗ್ಗ ಕುವೆಂಪು ರಂಗಮAದಿರ ಸಾಕ್ಷಿಯಾಗಲಿದೆ. ನಿಮ್ಮ ಮಗುವಿನ ಪ್ರತಿಭೆಗೆ ಇದೊಂದು ಬಹುದೊಡ್ಡ ವೇದಿಕೆ.
ಸಾಂಸ್ಕೃತಿಕ ಪ್ರದರ್ಶನ : ಸಾಂಸ್ಕೃತಿಕವಾಗಿ ನೃತ್ಯ, ಗಾಯನ, ಚಿತ್ರಕಲೆ, ಯೋಗ, ಕರಾಟೆ, ಜನಪದ, ಕವನ ವಾಚನ ಸೇರಿದಂತೆ 200 ಕ್ಕೂ ಹೆಚ್ಚು ವೈವಿದ್ಯಮಯ ಕಲೆಗಳ ಪ್ರದರ್ಶನಕ್ಕೆ ಅವಕಾಶವಿದೆ. ಮಕ್ಕಳಿಗೆ ಕಲಿಕೆ ಹಂತದವರಿಗೆ, ನಾನು ಪ್ರದರ್ಶಿಸಬಲ್ಲೆನೆಂಬ ಆತ್ಮ ವಿಶ್ವಾಸ ನೀಡುವ ವೇದಿಕೆ ಇದು. ಇದರ ಹೊರತಾಗಿ 4 ಸಂಗೀತೋತ್ಸವ, 2 ಚಲನಚಿತ್ರ ಪ್ರದರ್ಶನ ಹಾಗೂ ಜನಪದ ಲೋಕೋತ್ಸವದ ಮೂಲಕ, ಮೂಲ ಜನಪದ ಸಂಸ್ಕೃತಿ ಅನಾವರಣಗೊಳ್ಳಲಿದೆ.
ಕವಿಗಳ ಕಣ್ಣಲ್ಲಿ ಯು.ಆರ್. ಅನಂತಮೂರ್ತಿ ಮತ್ತು ಪುನೀತ್ ರಾಜ್‌ಕುಮಾರ್ : ಬರವಣಿಗೆ ಎಂದರೆ ಕವನ ರಚನೆ. ಪ್ರತಿಯೊಬ್ಬರು ಕವಿಗಳಾಗಲು ಪ್ರಯತ್ನಿಸುತ್ತಾರೆ. ರವಿಕಾಣದನ್ನು ಕವಿ ಕಾಣಬಲ್ಲ ಎಂಬ ನುಡಿ ಇಂದಿಗೂ ಪ್ರಚಲಿತ. ಈ ನಿಟ್ಟಿನಲ್ಲಿ ರಮೇಶ ಸುರ್ವೆ ನೇತೃತ್ವದದಲ್ಲಿ ಇದುವರೆಗೆ 9 ಕವಿ ಸಮ್ಮೇಳನಗಳು ಜರುಗಿವೆ. ಈ ವೇದಿಕೆಯಲ್ಲಿ ಕವನ ವಾಚಿಸಿದ ಕವಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದ ಹೆಗ್ಗಳಿಕೆಯೊಂದಿಗೆ ಇದೆ ಕವನಗಳನ್ನು ಕವಿಗಳ ಕಣ್ಣಲ್ಲಿ ವಿಶ್ವೇಶ್ವರಯ್ಯ ಹಾಗೂ ಬಹುಜನರ ಕವಿತೆಗಳು ಎರಡು ಕೃತಿಗಳನ್ನು ಪ್ರಕಟಿಸಿ ಕವಿಗಳನ್ನು ಪ್ರೋತ್ಸಾಹಿಸಲಾಗಿದೆ.
ಈ ಸಂದರ್ಭದಲ್ಲಿ ಕವಿಗಳಿಗೆ 2 ರೀತಿಯ ಅವಕಾಶಗಳನ್ನು ಸಂಸ್ಥೆ ಪ್ರಕಟಿಸಿದೆ. ಡಾ. ಯು.ಆರ್. ಅನಂತಮೂರ್ತಿ ಹಾಗೂ ಪುನೀತ್ ರಾಜ್‌ಕುಮಾರ್ ಕುರಿತು ಕವಿಗಳು ಕವಿತೆ ರಚಿಸಬಹುದು. ಕವಿಗಳ ಕಣ್ಣಲ್ಲಿ ಮಾಲಿಕೆಯಲ್ಲಿ ಈ ಕವಿತಾ ರಚನೆ ಮುಂದೆ 2022 ರಲ್ಲಿ ಪ್ರಕಟಿಸಲಾಗುವುದು. ಕವನ ರಚನೆಯಲ್ಲಿ ಯಾರಾದರೂ ಭಾಗವಹಿಸುವ ಅವಕಾಶವಿದೆ.
ನಾಲ್ಕು ದಿನದ ಈ ಉತ್ಸವದಲ್ಲಿ ಕವಿಗಳಿಗೆ ತಾವು ರಚಿಸಿದ ಕವಿತೆ ವಾಚಿಸುವ ಅವಕಾಶವಿದೆ. ಇಲ್ಲಿ ನಮ್ಮ ಆಯ್ಕೆ ಜೊತೆ ಕವಿಗಳ ಆಯ್ಕೆಯ ಒಂದು ಕವನ ಅಥವ 5 ಚುಟುಕು ವಾಚಿಸಲು ಅವಕಾಶವಿದೆ. ಯಾವುದಾದರೂ ಒಂದು ದಿನ, ಉತ್ಸವದಲ್ಲಿ ಭಾಗವಹಿಸಿ ಕವಿತೆ ವಾಚಿಸಿ, ಉತ್ಸವದ ಗೌರವ ಪ್ರಶಸ್ತಿ ಪಡೆದು ಸಂಭ್ರಮಿಸಬಹುದು.
ಈಗಾಗಲೇ ಭಾಗಹಿಸಲು 2000 ಕಲಾವಿದರು ಹಾಗೂ ಪ್ರದರ್ಶಕರಿಗೆ ಮಾಹಿತಿ ಕಳುಹಿಸಲಾಗಿದ್ದು ಈ ಸಮ್ಮೇಳನದಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ ಎಲ್ಲರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2 ಹಂತದಲ್ಲಿ ರಾಜ್ಯದ ಸಾಧಕರಿಗೆ ಮತ್ತು ಹಿರಿಯ ಗಣ್ಯರಿಗೆ ಪ್ರಶಸ್ತಿಯ ಗೌರವ ಸಮ್ಮೇಳನದ ಹೆಚ್ಚುಗಾರಿಕೆ. ಹೆಚ್ಚಿನ ಮಾಹಿತಿಗಾಗಿ : ರಮೇಶ ಸುರ್ವೆ, ಸಂಸ್ಥಾಪಕ ಅಧ್ಯಕ್ಷರು, ಸುರ್ವೆ ಕಲ್ಚರಲ್ ಅಕಾಡೆಮಿ, ನಂ. 468, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ್ತೆ, ಮಂಜುನಾಥನಗರ ಬೆಂಗಳೂರು - 560010. ಮೊಬೈಲ್ : 9845307327 ಸಂಪರ್ಕಿಸಿ.
ರಾಜ್ಯದ 800 ಕಲಾವಿದರು ನಾಲ್ಕು ದಿನದ ವೇದಿಕೆ ಹಂಚಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಹಿರಿಯ ಸಾಹಿತಿಗಳು, ಚಲನಚಿತ್ರ ಕಲಾವಿದರು, ಶಾಸಕರು, ಸಚಿವರು, ಹಿರಿಯ ಹೋರಾಟಗಾರರು ಈ ವೇದಿಕೆಯಲ್ಲಿರುತ್ತಾರೆ. ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 Comments