ಬೆಂ.ಮ.ಸಾ.ಸಂಸ್ಥೆಯು ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು ಖರೀದಿಸಲು ಮುಂದಾಗಿದ್ದು ಈ ವಾಹನಗಳು ಅತೀ ಶೀಘ್ರದಲ್ಲಿಯೇ ಬೆಂ.ಮ.ಸಾ.ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ. ದಿನಾಂಕ 13.11.2021 ಅಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಮಾದರಿಯ BS VI ಬಸ್ಸನ್ನು ಪರಿವೀಕ್ಷಣೆ ಮಾಡಿರುತ್ತಾರೆ.
ಬೆಂ.ಮ.ಸಾ.ಸಂಸ್ಥೆಯು BS VI ಮಾದರಿಯ ಒಟ್ಟು 565 ಬಸ್ಸುಗಳನ್ನು M/s Ashok Leyland pvt. Ltd ರವರಿಂದ ಖರೀದಿಸಲು ಕಾರ್ಯಾದೇಶ ನೀಡದ್ದು, ಅದರಂತೆ ಎಲ್ಲಾ ಬಸ್ಸುಗಳನ್ನು ಫೆಬ್ರುವರಿ 2022 ರೊಳಗಾಗಿ ಬೆಂ.ಮ.ಸಾ.ಸಂಸ್ಥೆಗೆ ಪೂರೈಸಲಿದ್ದಾರೆ.
ಈ ಬಸ್ಸುಗಳನ್ನು 2017-18 ರಲ್ಲಿ ಬಸ್ಸುಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ.
ಈ ಹೊಸದಾಗಿ ಸೇರ್ಪಡೆಗೊಳ್ಳಲಿರುವ BS VI ವಾಹನಗಳು ಕೆಳಕಂಡ ವೈಶಿಷ್ಟ್ಯ ಗಳನ್ನು ಹೊಂದಿರುತ್ತದೆ:
1.ಇದು ಪರಿಸರ ಸ್ನೇಹಿಯಾಗಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ.
2. ಈ ವಾಹನವು BS IV ವಾಹನಗಳಿಗಿಂತ ಹೆಚ್ಚಿನ Engine ಸಾಮರ್ಥ್ಯವನ್ನು ಹೊಂದಿರುತ್ತದೆ (197HP).
3.ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಇರುತ್ತದೆ.
-Varthajaala

0 Comments