Ticker

6/recent/ticker-posts

Ad Code

Responsive Advertisement

*ಉಚಿತ ಆರೋಗ್ಯ ತಪಾಸಣಾ ಶಿಬಿರ*

ಶಂಕರಮಠ ವಾರ್ಡ್-75ರಲ್ಲಿ ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ  ಉಚಿತ ಆರೋಗ್ಯ ಶಿಬಿರವನ್ನ ಆಯೋಜಿಸಲಾಗಿತ್ತು ದೀಪಾ ಬೆಳಗಿಸಿ ಕಾರ್ಯಕ್ರಮವನ್ನು *ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ಸಲೀಮ್ ಅಹಮದ್ಮರವರು ,ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರವರು ,ಕೆ.ಪಿ.ಸಿ.ಸಿ.ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ್ ಮತ್ತು ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಕೇಶವಮೂರ್ತಿರವರು* ಬಿ.ಎಮ್.ಟಿ.ಸಿ.ಮಾಜಿ ಉಪಾಧ್ಯಕ್ಷರಾದ ವಿ.ಎಸ್.ಆರಾಧ್ಯರವರು ದೀಪಾ ಬೆಳಗಿಸಿ ,ಇತ್ತಿಚೇಗೆ ಆಗಲಿಕರಾದ ದಿ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ,ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು ನಂತರ ಪೌರ ಕಾರ್ಮಿಕರಿಗೆ ಕುಕ್ಕರ್ ಗಳನ್ನು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಆನಾರೋಗ್ಯ ಪೀಡಿತರಿಗೆ ಹೆಚ್ಚಿನ ಚಿಕಿತ್ಯೆಗೆ ಪರಿಹಾರ ಧನ ವಿತರಿಸಿದರು.

*ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ಸಲೀಮ್ ಅಹಮದ್ಮ* ರವರು ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ ಪರ ಮತ್ತು ಬಡವರ ಆರೋಗ್ಯ ಬಗ್ಗೆ ಚಿಂತನೆ ಮಾಡುವ ಪಕ್ಷ .ಕೊರೋನ ಸಂಕಷ್ಟದ ಸಮಯದಲ್ಲಿ ಬಡವರು ಹಸಿವಿನಿಂದ ಮತ್ತು ಆನಾರೋಗ್ಯದಿಂದ ಬಳಲಬಾರದು ಎಂದು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೊರೋನ ವಾರಿಯರ್ಸ್ ನಂತೆ ಕೆಲಸ ಮಾಡಿದರು .ಆಹಾರ ಪ್ಯಾಕೇಟ್ , ದಿನಸಿ ಕಿಟ್ ಮತ್ತು ಔಷಧಿ ವಿತರಣೆ ಮತ್ತು ಕೊರೋನ ಪೀಡಿತರಿಗೆ ಆಸ್ಪತ್ರೆ ಸೇರಿಸುವ ಪುಣ್ಯದ ಕಾರ್ಯ ಮಾಡಿದರು .ಬಡವರ ಆರೋಗ್ಯ ಬಗ್ಗೆ ಸದಾ ಕಾಳಜಿ ಇರುವುದರಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.

*ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರವರು* ಮಾತನಾಡಿ ಕಾಂಗ್ರೆಸ್ ಪಕ್ಷ ಆಡಳಿತ ಅವಧಿಯಲ್ಲಿ ಬಡವರ ಆರೋಗ್ಯ ಬಗ್ಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದರು ಮತ್ತು ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಬಡವರಿಗೆ ಉತ್ತಮ ಚಿಕಿತ್ಯೆ ಲಭಿಸಬೇಕು ಉತ್ತಮವಾದ ಹೈಟೆಕ್ ಆಸ್ಪತ್ರೆಗಳ ನಿರ್ಮಾಣ ಮಾಡಿದರು ಎಂದು ಹೇಳಿದರು.








ಎಮ್.ಶಿವರಾಜು ಮಾತನಾಡಿ, ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಜನಸಂಖ್ಯೆ ವಾಸವಿದ್ದಾರೆ.ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ ಆರ್ಥಿಕವಾಗಿ ಸಬಲರಾಗಿರುವುದಿಲ್ಲ ,ಬಡವರಿಗೆ ಉತ್ತಮ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಯೆ ಸಿಗಬೇಕು ಎಂದು ಉಚಿತ ಆರೋಗ್ಯ ತಪಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು. ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸ್ತ್ರೀ ರೋಗ ತಜ್ಞರು,ಕಣ್ಣಿನ ತಜ್ಞರು,ರಕ್ತದೊತ್ತಡಸ ಕ್ಕರೆ ಖಾಯಿಲೆಗೆ ಪರೀಕ್ಷೆಮೂಳೆ ತಜ್ಞರು,ಹೃದಯ ತಜ್ಞರು

ಮಕ್ಕಳ ತಜ್ಞರು,ಮಾನಸಿಕ ಮತ್ತು ಕ್ಷಯರೋಗ ತಪಾಸಣೆ

ದಂತ ತಪಾಸಣೆ ಮಾಡಲಿದ್ದಾರೆ.

Post a Comment

0 Comments

Ad Code

Responsive Advertisement