Ticker

6/recent/ticker-posts

Ad Code

Responsive Advertisement

ನಂದೈಡ್ ವಾಲಾ ಪ್ರತಿಷ್ಠಾನದಿಂದ ಜಾಗತಿಕ ಮಟ್ಟದ ಪ್ರಶಸ್ತಿ ಪ್ರದಾನ ; ಡಾ. ಮೆಹನಾಜ್ ನಂದೈಡ್ ವಾಲ

 ಸಶಸ್ತ್ರ ಪಡೆ ಯೋಧರು, ಕೋವಿಡ್ ಸೇನಾನಿಗಳು, ಮಹಿಳಾ ಸಬಲೀಕರಣಕ್ಕಾಗಿ ದುಡಿದವರಿಗೆ ಶನಿವಾರ ನಂದೈಡ್ ವಾಲಾ ಪ್ರತಿಷ್ಠಾನದಿಂದ ಜಾಗತಿಕ ಮಟ್ಟದ ಪ್ರಶಸ್ತಿ ಪ್ರದಾನ ; ಡಾ. ಮೆಹನಾಜ್ ನಂದೈಡ್ ವಾಲ

ಬೆಂಗಳೂರು, ನ, 19; ದೇಶಕ್ಕಾಗಿ ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡಿದ ಸಶಸ್ತ್ರ ಪಡೆ ಸಿಬ್ಬಂದಿ, ಕೋವಿಡ್ ಸಂಕ್ರಾಮಿಕ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ಶ್ರಮಿಸಿದವರು, ಮಹಿಳಾ ಉದ್ಯಮಿಗಳು ಸೇರಿದಂತೆ ಆರು ವಿವಿಧ ವಲಯಗಳಲ್ಲಿ ಜಾಗತಿಕ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲು ಡಾ. ಮೆಹನಾಜ್ ಎ.ಜಿ. ನಂದೈಡ್ ವಾಲಾ ಪ್ರತಿಷ್ಠಾನ ತೀರ್ಮಾನಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಸಂಸ್ಥಾಪಕರಾದ ಡಾ. ಮೆಹನಾಜ್ ನಂದೈಡ್ ವಾಲ ಅವರು, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವವರಿಗೆ “ಶೂರ್ ವೀರ್”, ಆರೋಗ್ಯ ವಲಯದಲ್ಲಿ ಪ್ಯಾಂಡಮಿಕ್ ಏಂಜಲ್ಸ್, ಜತೆಗೆ ಗಾಮಾ,  ಆಲ್ಪಾ, ಬ್ರೇವ್ ಹಾರ್ಟ್ ಅಂಡ್ ವುಮೆನ್ ಎಂಪವರ್ ಮೆಂಟ್ ಮತ್ತು ಮಹಿಳಾ ಸಬಲೀಕರಣದ ವಲಯಲದಲ್ಲಿ ಸೇವೆ ಸಲ್ಲಿಸಿದವರಿಗೆ ವುಮೆನಿಸ್ತಾನ್ ಮೊಕೆಶ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.


ನಂದೈಡ್ ವಾಲ ಕುಟುಂಬ ಬಾಲಿವುಡ್ ನಲ್ಲಿ 1955 ರಿಂದ ಚಲನಚಿತ್ರಗಳನ್ನು ನಿರ್ಮಿಸುತ್ತಿದೆ. ಜತೆಗೆ ಪ್ರತಿಷ್ಠಾನದ ಸಂಸ್ಥಾಪಕಿಯಾದ ತಾವು ಲೇಖಕಿ ಮತ್ತು ಮಹಿಳಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಇತ್ತೀಚೆಗೆ “ಇಟ್ ಇಸ್ ಎ ಗರ್ಲ್”  ಎಂಬ 48 ನಿಮಿಷದ ಕಿರು ಚಿತ್ರವನ್ನು ತಾವು ನಿರ್ಮಿಸಿದ್ದು, ಇದಕ್ಕೆ ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿ ದೊರೆತಿದೆ. ಜತೆಗೆ ಇತ್ತೀಚೆಗೆ ಚಲನಚಿತ್ರದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಡಾ. ಮೆಹನಾಜ್ ಎ.ಜಿ. ನಂದೈಡ್ ವಾಲ್ ಪೌಂಡೇಷನ್ ಸ್ಥಾಪಿಸಲಾಗಿದೆ. ಮಹಿಳಾ ಸಬಲೀಕರಣ, ಅಲಕ್ಷಿತ ಮಹಿಳೆಯರು ಮತ್ತು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶವನ್ನು ಹೊಂದಲಾಗಿದೆ. ಜತೆಗೆ ಸಶಸ್ತ್ರ ಪಡೆಗಳಲ್ಲಿ ದೇಶಕ್ಕಾಗಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿರುವವರನ್ನೂ ಸಹ ಗೌರವಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭ ನಗರದ ತಾಜ್ ವೆಸ್ಟ್ ಎಂಡ್ ನಲ್ಲಿ ಶನಿವಾರ ಸಂಜೆ 7 ಗಂಟೆಗೆ ಆಯೋಜಿಸಿದ್ದು, ಭೂ ಸೇನೆ, ನೌಕೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸಿರುವವರನ್ನು ವಿಶೇಷವಾಗಿ ಗೌರವಿಸಲಾಗುತ್ತಿದೆ ಎಂದು ಡಾ. ಡಾ. ಮೆಹನಾಜ್ ನಂದೈಡ್ ವಾಲ ತಿಳಿಸಿದರು.

Post a Comment

0 Comments

Ad Code

Responsive Advertisement